ಮುಂಬೈ:ಈ ಮಹಾನಗರದಲ್ಲಿ ಎತ್ತರದ ಕಟ್ಟಡಗಳಲ್ಲಿ ವಾಸಿಸುವವರಿಗಿಂತ ಕೊಳೆಗೇರಿ ನಿವಾಸಿಗಳೇ ಹೆಚ್ಚಿನ ನಾಗರಿಕ ಪ್ರಜ್ಞೆ ಹೊಂದಿದ್ದಾರೆ. – ಹೀಗೊಂದು ಅಭಿಪ್ರಾಯವನ್ನು ಜವಾಬ್ದಾರಿಯುತ ಜನಪ್ರತಿನಿಧಿಯೊಬ್ಬರು ವ್ಯಕ್ತಪಡಿಸಿದ್ದು, ಇದೀಗ ಗಮನ ಸೆಳೆದಿದೆ.
ಅಂದಹಾಗೆ ಇಂಥದ್ದೊಂದು ಹೋಲಿಕೆಯ ಮಾತನ್ನಾಡಲು ಕಾರಣ ಕೋವಿಡ್​-19 ಪಾಸಿಟಿವ್ ಪ್ರಕರಣ. ಮುಂಬೈನಲ್ಲಿ ಹೆಚ್ಚುತ್ತಿರುವ ಕರೊನಾ ಕೇಸ್​ಗಳ ಹಿನ್ನೆಲೆಯಲ್ಲಿ ಈ ಮಾತು ಕೇಳಬಂದಿದೆ. ಮುಂಬೈನಲ್ಲಿ ಇಂಥದ್ದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಬೇರಾರೂ ಅಲ್ಲ, ಇಲ್ಲಿನ ಮೇಯರ್.
ಮುಂಬೈನಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಮೇಯರ್ ಕಿಶೋರಿ ಪೆಡ್ನೇಕರ್, ಕೊಳೆಗೇರಿ ನಿವಾಸಿಗಳು ಎತ್ತರದ ಕಟ್ಟಡಗಳಲ್ಲಿ ವಾಸಿಸುವವರಿಗಿಂತ ಹೆಚ್ಚಿನ ನಾಗರಿಕ ಪ್ರಜ್ಞೆ ಹೊಂದಿರುವುದನ್ನು ಸಾಬೀತು ಪಡಿಸಿದ್ದಾರೆ. ನಗರದಲ್ಲಿನ ಎತ್ತರದ ಕಟ್ಟಡಗಳ ನಿವಾಸಿಗಳು ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸಿದ್ದರೆ ಮುಂಬೈನಲ್ಲಿ ಸೋಂಕಿನ ಪ್ರಕರಣಗಳು ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗುತ್ತಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಎತ್ತರದ ಕಟ್ಟಡಗಳಲ್ಲಿ, ವಿವಿಧ ವಸತಿ ಪ್ರದೇಶಗಳಲ್ಲಿ ವಾಸಿಸುವವರು ಹೆಚ್ಚು ವಿದ್ಯಾವಂತರು ಹಾಗೂ ಕೊಳೆಗೇರಿಗಳಲ್ಲಿ ವಾಸಿಸುವವರು ಕಡಿಮೆ ವಿದ್ಯಾವಂತರು ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ಕೋವಿಡ್​ ವಿಷಯದಲ್ಲಿ ಕೊಳೆಗೇರಿಗಳಲ್ಲಿ ವಾಸಿಸುವವರೇ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದ್ದಾರೆ. ವಿವಿಧ ವಸತಿ ಸಂಘಗಳಿಗೆ ನಿಯಮಗಳನ್ನು ಅನುಸರಿಸುವಂತೆ ನಾನು ವಿನಂತಿಸಿಕೊಳ್ಳಬಹುದು ಅಷ್ಟೇ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ
ಮುಂಬೈನಲ್ಲಿ ಕಳೆದ ಎರಡು ತಿಂಗಳಲ್ಲಿ ಕಂಡು ಬಂದಿರುವ ಹೊಸ ಕೋವಿಡ್-19 ಪ್ರಕರಣಗಳಲ್ಲಿ ಶೇ. 95 ಎತ್ತರದ ಕಟ್ಟಡಗಳಲ್ಲಿರುವ ಜನಸಮುದಾಯದಿಂದ ವರದಿಯಾಗಿದೆ ಎಂದು ಬಿಎಂಸಿ ಆಯುಕ್ತರು ಹೇಳಿದ್ದಾರೆ. ವಿದ್ಯಾವಂತರು ಕೂಡ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮುಂಬೈನ ಮುನ್ಸಿಪಲ್ ಕಮಿಷನರ್ ಹೇಳಿದ್ದಾರೆ ಎಂಬುದಾಗಿ ಮೇಯರ್ ತಿಳಿಸಿದರು. (ಏಜೆನ್ಸೀಸ್)
ಇದನ್ನೂ ಓದಿ:ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ
ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಅರೆಬೆತ್ತಲೆ ಯುವಕ-ಯುವತಿಯರನ್ನು ಥಳಿಸಿದ ಬೆನ್ನಲ್ಲೇ ಮತ್ತೊಂದು ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
