ನವದೆಹಲಿ:ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ, ಇನ್‌ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾ ಮೂರ್ತಿ ಸೇರಿದಂತೆ ದೇಶದ ಅನೇಕ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದೆ. ಎಸ್.ಎಂ. ಕೃಷ್ಣ ಅವರನ್ನು ಪದ್ಮವಿಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದರೆ, ಎಸ್.ಎಲ್. ಭೈರಪ್ಪ ಮತ್ತು ಸುಧಾ ಮೂರ್ತಿ ಅವರನ್ನು ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಇದಲ್ಲದೇ ಇತರ ಐವರನ್ನು ಕರ್ನಾಟಕದಿಂದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಅವರ ಹೆಸರುಗಳು ಇಂತಿವೆ. ಖಾದರ್ ವಲಿ ದುಡೇಕುಲಾ- ವಿಜ್ಞಾನ ಮತ್ತು ತಂತ್ರಜ್ಞಾನ; ರಾಣಿ ಮಾಚಯ್ಯ- ಕಲೆ; ನಾಡೋಜ ಪಿಂಡಿಪನಹಳ್ಳಿ ಮುನಿವೆಂಕಟಪ್ಪ- ಕಲೆ; ಶಾ ರಶೀದ್ ಅಹ್ಮದ್ ಖಾದ್ರಿ- ಕಲೆ; ಎಸ್. ಸುಬ್ಬರಾಮನ್- ಪುರಾತತ್ವ ಶಾಸ್ತ್ರ.
ಇವರೂ ಸೇರಿದಂತೆ ದೇಶದ ಒಟ್ಟು 6 ಸಾಧಕರನ್ನು ಪದ್ಮವಿಭೂಷಣ ಪ್ರಶಸ್ತಿಗೆ, 9 ಸಾಧಕರನ್ನು ಪದ್ಮಭೂಷಣ ಪ್ರಶಸ್ತಿಗೆ ಮತ್ತು 91 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತ ಇತರ ಸಾಧಕರ ಪಟ್ಟಿ ಈ ಕೆಳಗಿನಂತಿದೆ.
ದೇಶದ ಒಟ್ಟು 6 ಸಾಧಕರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರ ಹೆಸರು ಇಂತಿವೆ. ಬಾಲಕೃಷ್ಣ ದೋಷಿ (ಮರಣೋತ್ತರ)- ವಾಸ್ತುಶಿಲ್ಪ, ಜಾಕಿರ್ ಹುಸೇನ್- ಕಲೆ, ದಿಲೀಪ್ ಮಹಲನಾಬಿಸ್(ಮರಣೋತ್ತರ)- ಔಷಧ, ಶ್ರೀನಿವಾಸ್ ವರಧನ್- ಸೈನ್ಸ್ & ಇಂಜಿನಿಯರಿಂಗ್, ಮುಲಾಯಂ ಸಿಂಗ್ ಯಾದವ್(ಮರಣೋತ್ತರ)- ಸಾರ್ವಜನಿಕ ವ್ಯವಹಾರಗಳು.
ಕುಮಾರ್ ಮಂಗಲಂ ಬಿರ್ಲಾ- ವ್ಯಾಪಾರ ಮತ್ತು ಕೈಗಾರಿಕೆ, ದೀಪಕ್ ಧರ್- ವಿಜ್ಞಾನ ಮತ್ತು ಎಂಜಿನಿಯರಿಂಗ್, ವಾಣಿ ಜೈರಾಮ್- ಕಲೆ, ಸೇರಿದಂತೆ 9 ಜನ ಸಾಧಕರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಕೇಶ್ ರಾಧೇಶ್ಯಾಮ್ ಜುಂಜುನ್ವಾಲಾ (ಮರಣೋತ್ತರ)- ವ್ಯಾಪಾರ ಮತ್ತು ಕೈಗಾರಿಕೆ, ರವೀನಾ ರವಿ ಟಂಡನ್- ಕಲೆ, ಸೇರಿದಂತೆ ದೇಶದ 91 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 14 =
Remember me
