ಮುಂಬೈ:ಭಾರತೀಯ ಷೇರು ಮಾರುಕಟ್ಟೆ ಈಗ ಐತಿಹಾಸಿಕ ಶಿಖರ ಮಟ್ಟ ತಲುಪಿದೆ. ಬಿಎಸ್​ಇ ಸೂಚ್ಯಂಕ 70 ಸಾವಿರಕ್ಕೆ ಸಮೀಪಿಸಿದ್ದರೆ, ನಿಫ್ಟಿ 20 ಸಾವಿರ ಗಡಿಯನ್ನು ಮತ್ತೆ ದಾಟಿದೆ. ಇನ್ನು ಕೆಲ ದಿನ ಈ ಏರಿಕೆಯ ನಾಗಾಲೋಟ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ.
ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಿ ವಹಿವಾಟು ನಡೆಸಲು ಹಿಂಜರಿಯುವವರು ಹಾಗೂ ಆಸಕ್ತಿ ಇಲ್ಲದವರು ಸಾಮಾನ್ಯವಾಗಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹಣ ತೊಡಗಿಸುತ್ತಾರೆ. ಈ ರೀತಿ ಹಣ ತೊಡಗಿಸಿದವರ ಪರವಾಗಿ ಮ್ಯೂಚುಯಲ್ ಫಂಡ್‌ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತವೆ.
ಮ್ಯೂಚುಯಲ್ ಫಂಡ್‌ಗಳಲ್ಲಿ ವಿವಿಧ ರೀತಿಯ ಫಂಡ್​ಗಳಿವೆ. ಇವುಗಳಲ್ಲಿ ಪ್ರಮುಖವಾದವು ಲಾರ್ಜ್​ ಕ್ಯಾಪ್​ ಫಂಡ್​, ಮಿಡ್​ ಕ್ಯಾಪ್​, ಸ್ಮಾಲ್​ ಕ್ಯಾಪ್​ ಫಂಡ್​. ಇತ್ತೀಚಿನ ವರ್ಷ, ತಿಂಗಳು ಹಾಗೂ ದಿನಗಳಲ್ಲಿ ಸ್ಮಾಲ್​ ಕ್ಯಾಪ್​ ಫಂಡ್​ಗಳು ಬಹುದೊಡ್ಡ ಪ್ರಮಾಣದಲ್ಲಿ ಲಾಭವನ್ನು ಹೂಡಿಕೆದಾರರಿಗೆ ನೀಡಿವೆ.
ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಸ್ಮಾಲ್ ಕ್ಯಾಪ್ ವರ್ಗದ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ, ಇದು ದೊಡ್ಡ ಕಂಪನಿಗಳ 250 ಷೇರುಗಳನ್ನು (ಮಾರುಕಟ್ಟೆ ಬಂಡವಾಳೀಕರಣ ಲೆಕ್ಕದಲ್ಲಿ) ಹೊರತುಪಡಿಸಿದ ಸಣ್ಣ ಕಂಪನಿಗಳ ಷೇರುಗಳನ್ನು ಒಳಗೊಂಡಿರುತ್ತವೆ.
ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಭಾರತದ ಚಿಕ್ಕ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಕಂಪನಿಗಳು ಅಗ್ರ 250 ಕಂಪನಿಗಳನ್ನು ಹೊರತುಪಡಿಸಿರುತ್ತವೆ. ಸಾಮಾನ್ಯವಾಗಿ ಈ ಕಂಪನಿಗಳ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿಬರುವುದಿಲ್ಲ. ಇವು ಸಣ್ಣ ಕಂಪನಿಗಳಾದರೂ, ಈ ಪೈಕಿ ಸಾಕಷ್ಟು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟಿವೆ.
ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಕಳೆದ 10 ವರ್ಷಗಳ ಅವಧಿಯಲ್ಲಿ ಅಂದಾಜು ಶೇಕಡಾ 20.31ರಷ್ಟು ಸರಾಸರಿ ಆದಾಯ ನೀಡಿವೆ. ಅಂದರೆ, ವಾರ್ಷಿಕವಾಗಿ ಶೇಕಡಾ 20ಕ್ಕೂ ಅಧಿಕ ಲಾಭ ನೀಡಿವೆ.
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ, 10 ವರ್ಷಗಳಲ್ಲಿ ಶೇಕಡಾ 24.47ರಷ್ಟು ಲಾಭ ನೀಡಿದೆ. ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಇದೇ ಅವಧಿಯಲ್ಲಿ ಶೇಕಡಾ 23.55ರಷ್ಟು ಲಾಭ ತಂದುಕೊಟ್ಟಿದೆ. ಎಸ್‌ಬಿಐ ಸ್ಮಾಲ್ ಕ್ಯಾಪ್ ಫಂಡ್ ಮತ್ತು ಆಕ್ಸಿಸ್ ಸ್ಮಾಲ್ ಕ್ಯಾಪ್ ಫಂಡ್ ಅಂದಾಜು ಶೇಕಡಾ 21ರಷ್ಟು ಪ್ರಾಫಿಟ್​ ಗಳಿಸಿಕೊಟ್ಟಿವೆ.
ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಮೂರು ವರ್ಷಗಳ ಅವಧಿಯಲ್ಲಿ ಸರಾಸರಿ ಶೇಕಡಾ 34.91ರಷ್ಟು ಆದಾಯವನ್ನು ನೀಡಿವೆ. ಅಂದರೆ, ಕಳೆದ ಮೂರು ವರ್ಷಗಳಲ್ಲಿ ವಾರ್ಷಿಕವಾಗಿ ಶೇ. 34ಕ್ಕೂ ಅಧಿಕ ಲಾಭ ದೊರಕಿಸಿಕೊಟ್ಟಿವೆ. ಅಂದರೆ, ಪ್ರತಿ ತಿಂಗಳಿಗೆ ಅಂದಾಜು ಶೇಕಡಾ 3ರಷ್ಟು ಲಾಭ!!
ಇನ್ನು ಕಳೆದೊಂದು ವರ್ಷದಲ್ಲಿ ಕೆಲ ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಶೇಕಡಾ 40ಕ್ಕೂ ಅಧಿಕ ಲಾಭ ಗಳಿಸಿಕೊಟ್ಟಿವೆ.
ಮ್ಯೂಚುಯಲ್ ಫಂಡ್ಸ್​ ಆರ್ ಸಬ್ಜೆಕ್ಟ್​ ಟು ಮಾರ್ಕೆಟ್​ ರಿಸ್ಕ್ (ಷೇರು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತವೆ) ಈ ಘೋಷಣೆಯನ್ನು ನೀವೇ ಕೇಳಿಯೇ ಇರುತ್ತೀರಿ. ಹುಷಾರಾಗಿ, ಲೆಕ್ಕಾಚಾರ ಹಾಕಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹಣ ತೊಡಗಿಸಿದರೆ ಲಾಭ ಖಚಿತ. ಭಾರತದ ಪ್ರಸ್ತುತ ಷೇರು ಮಾರುಕಟ್ಟೆಯ ಪ್ರಗತಿ ನೋಡಿದರೆ, ಮ್ಯೂಚುಯಲ್ ಫಂಡ್‌ಗಳಲ್ಲಿ ತೊಡಗಿಸುವ ಹಣವು ಬ್ಯಾಂಕ್​ ಬಡ್ಡಿಗಿಂತಲೂ ಹೆಚ್ಚಿನ ಲಾಭ (ರಿಟರ್ನ್​) ನೀಡುವುದು ನಿಶ್ಚಿತ.

ಜಪಾನ್‌ನ ಈ ಸ್ನೇಕ್​ ವಿಸ್ಕಿ ವಿಷಪೂರಿತವೇ? ‘ಹಬುಶು’ ಸೇವಿಸಿದರೆ ಪರಲೋಕಕ್ಕೆ ಪ್ರಯಾಣವೇ?

ಮೂರು ರಾಜ್ಯಗಳಲ್ಲಿ ಯಾರಾಗಲಿದ್ದಾರೆ ಸಿಎಂ?: ವೀಕ್ಷಕರ ನೇಮಕಕ್ಕೆ ಬಿಜೆಪಿ ಸಜ್ಜು

ಮೈಚಾಂಗ್ ಚಂಡಮಾರುತ: ಆಂಧ್ರಕ್ಕೆ ರೂ. 493 ಕೋಟಿ; ತಮಿಳುನಾಡಿಗೆ ರೂ. 450 ಕೋಟಿ ಕೇಂದ್ರ ನೆರವು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × four =
Remember me
