ನವದೆಹಲಿ: ಮದುವೆ ಎಂದರೆ ಯುವಕ, ಯುವತಿಗೆ ಎಷ್ಟೋ ಕನಸುಗಳು ಇರುತ್ತವೆ. ಎತ್ತರ, ಬಣ್ಣ, ಮನೆತನ ಎಂದು ವಿಚಾರಿಸಿ ಮದುವೆಯಾಗುತ್ತೇವೆ. ಆದರೆ ಇಲ್ಲಿ 3 ಅಡಿಯಿರೋ ಬಾಡಿಬಿಲ್ಡರ್ 4 ಅಡಿ ಎತ್ತರದ ವಧುವನ್ನು ಮದುವೆಯಾಗಿದ್ದಾರೆ.
ಭಾರತದ ದೇಹದಾರ್ಢ್ಯ ಪಟು ಪ್ರತೀಕ್ ಮೋಹಿತೆ ಅವರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಬಾಡಿ ಬಿಲ್ಡರ್‌ ಪ್ರತೀಕ್ ಮೋಹಿತೆ ಸ್ವತಃ 3 ಅಡಿಯಿದ್ದಾರೆ. ಇತ್ತೀಚೆಗಷ್ಟೇ ಈ ಬಾಡಿಬಿಲ್ಡರ್ 4 ಅಡಿ ಎತ್ತರದ ವಧುವನ್ನು ಮದುವೆಯಾಗಿದ್ದಾರೆ. ಇವರ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ:ಹಣ್ಣಿನ ಅಂಗಡಿಯಲ್ಲಿ ಉಡುಗೊರೆಯಾಗಿ ಸಿಗುತ್ತೆ ಪುಸ್ತಕ; ಈ ಯೋಜನೆ ಹಿಂದಿದೆ ಮಾಲೀಕನ ಕಣ್ಣೀರಿನ ಕಥೆ
ವಿಡಿಯೋದಲ್ಲಿ ಏನಿದೆ?:ಪ್ರತೀಕ್, ವಧುವನ್ನು ಕರೆದೊಯ್ಯಲು ಡಿಜೆಯ ಕಾರಿನ ಮೇಲೆ ನಿಂತಿದ್ದಾಗ ನೃತ್ಯ ಮಾಡುವುದನ್ನು ನೋಡಬಹುದು. ಇದರಲ್ಲಿ ಕ್ರೀಂ ಮತ್ತು ಮರೂನ್ ಕಲರ್ ಶೇರ್ವಾನಿ ಧರಿಸಿ ಮೆರೂನ್ ಕಲರ್ ಪೇಟ ತೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಅವರು ಮೈ ಹೂನ್ ಡಾನ್ ಹಾಡಿನಲ್ಲಿ ನೃತ್ಯ ಮಾಡುತ್ತಿದ್ದಾರೆ
ಇದನ್ನೂ ಓದಿ:ತಾಯಿ ಕಣ್ಮುಂದೆ ಕಟ್ಟಡದ ಮೇಲಿನಿಂದ ಬಿದ್ದು ಪ್ರಾಣ ಕಳೆದುಕೊಂಡ ಮಗು
ಪ್ರತೀಕ್ ಮೋಹಿತೆ ಯಾರು?:ಪ್ರತೀಕ್ ರಾಯಗಢದ ನಿವಾಸಿ, ಅವರ ಪತ್ನಿ ಪುಣೆಯವರು. ಪ್ರತೀಕ್ 2016ರಲ್ಲಿ ದೇಹದಾರ್ಢ್ಯವನ್ನು ಪ್ರಾರಂಭಿಸಿದರು ಮತ್ತು 28 ನೇ ವಯಸ್ಸಿನಲ್ಲಿ ಪ್ರತೀಕ್ ವಿಶ್ವದ ಅತ್ಯಂತ ಕಿರಿಯ ದೇಹದಾರ್ಢ್ಯಗಾರನಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದರು.


A post shared by Pratik Mohite (@pratikmohite_official)

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
