ಮುಂಬೈ:ಮಹಾರಾಷ್ಟ್ರದ ಮುಂಬೈ ಕೋವಿಡ್​-19 ಸೋಂಕಿನ ಕೇಂದ್ರ ಬಿಂದು ಆಗಿದೆ. ವಾಣಿಜ್ಯ ರಾಜಧಾನಿಯಲ್ಲಿ ಸಾಮೂಹಿಕವಾಗಿ ಕೋವಿಡ್​-19 ಪರೀಕ್ಷೆ ಮಾಡುವ ಮೂಲಕ ಸೋಂಕು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸ್ಮಾರ್ಟ್​ ಹೆಲ್ಮೆಟ್​ಗಳು ತುಂಬಾ ಸಹಕಾರಿಯಾಗಿವೆ.
ಕಂಟೇನ್ಮೆಂಟ್​ ವಲಯಗಳಲ್ಲಿ ಮನೆಯಿಂದ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತರು ಸ್ಕ್ರೀನಿಂಗ್​ ಮಾಡುತ್ತಿದ್ದು, ಈ ಕಾರ್ಯದಲ್ಲಿ ಸ್ಮಾರ್ಟ್​ ಹೆಲ್ಮೆಟ್​ ತುಂಬಾ ಸಹಕಾರಿ ಎಂದು ಸಾಬೀತಾಗಿದೆ. ಇವನ್ನು ಬಳಸಿ ಒಂದು ನಿಮಿಷದಲ್ಲಿ 200 ಜನರನ್ನು ಸಾಮೂಹಿಕವಾಗಿ ಸ್ಕ್ರೀನಿಂಗ್​ ಮಾಡಲಾಗುತ್ತಿದೆ.
ಸಾಮೂಹಿಕ ಸ್ಕ್ರೀನಿಂಗ್​ಗಾಗಿ ಬೃಹನ್ಮುಂಬೈ ಮಹಾನಗರಪಾಲಿಕೆ ಅಧಿಕಾರಿಗಳಿಗೆ ನೆರವಾಗುತ್ತಿರುವ ಭಾರತೀಯ ಜೈನ ಸಂಘದ ಸದಸ್ಯ ಡಾ. ನೀಲು ಜೈನ್​ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಸ್ಮಾರ್ಟ್​ ಹೆಲ್ಮೆಟ್​ಗಳನ್ನು ಬಳಸಿ ಪ್ರತಿದಿನ ತಲಾ 2 ಸಾವಿರ ಜನರನ್ನು ಸ್ಕ್ರೀನಿಂಗ್​ ಮಾಡಲಾಗುತ್ತಿದೆ. ಇದುವರೆಗೆ 15 ಸಾವಿರ ಜನರನ್ನು ಸ್ಕ್ರೀನಿಂಗ್​ಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಧ್ಯಪ್ರದೇಶದ ಗಣಿಯಲ್ಲಿ ಪತ್ತೆಯಾದ 11 ಕ್ಯಾರಟ್​ ವಜ್ರದ ಹರಳಿನ ಬೆಳೆ ಕೇಳಿದರೆ ಶಾಕ್​ ಆಗುತ್ತೀರಿ
ಭಾರತದಲ್ಲಿ ಮೊದಲ ಬಾರಿಗೆ ಸ್ಕ್ರೀನಿಂಗ್​ ಕಾರ್ಯದಲ್ಲಿ ಸ್ಮಾರ್ಟ್​ ಹೆಲ್ಮೆಟ್​ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರತಿಯೊಂದು ಹೆಲ್ಮೆಟ್​ಗೆ 6 ಲಕ್ಷ ರೂ. ಬೆಲೆ ಇದೆ. ಇಂಥ ನಾಲ್ಕು ಹೆಲ್ಮೆಟ್​ಗಳನ್ನು ಮಹಾರಾಷ್ಟ್ರದಲ್ಲಿ ಬಳಸಲಾಗುತ್ತಿದ್ದು, ಎರಡು ಹೆಲ್ಮೆಟ್​ಗಳು ಮುಂಬೈನಲ್ಲಿ ಹಾಗೂ ಇನ್ನೆರಡು ಹೆಲ್ಮೆಟ್​ಗಳು ಪುಣೆಯಲ್ಲಿ ಬಳಕೆಯಲ್ಲಿವೆ. ಭಾರತೀಯ ಜೈನ ಸಂಘ ಈ ಹೆಲ್ಮೆಟ್​ಗಳನ್ನು ಭಾರತಕ್ಕೆ ತಂದಿದ್ದು, ಪ್ರತಿಯೊಂದು ಹೆಲ್ಮೆಟ್​ನಲ್ಲಿ 64 ಜಿಬಿ ಡೇಟಾವನ್ನು ಸಂಗ್ರಹಿಸಿಡಬಹುದಾಗಿದೆ.
ಸ್ಮಾರ್ಟ್​ ಹೆಲ್ಮೆಟ್​ಗಳಲ್ಲಿ ಎರಡು ಕ್ಯಾಮರಾಗಳಿವೆ. ಒಂದು ಕ್ಯಾಮರಾ ಜನರ ವಿಡಿಯೋ ಚಿತ್ರೀಕರಿಸಿದರೆ, ಇನ್ನೊಂದು ಬದಿಯಲ್ಲಿರುವ ಕ್ಯಾಮರಾ ಜನರ ದೇಹದ ತಾಪಮಾನವನ್ನು ಅಳೆದು, ದಾಖಲಿಸಿಕೊಳ್ಳುತ್ತದೆ.
ಇದನ್ನೂ ಓದಿ:ಟ್ರಯಲ್​ ಯಶಸ್ವಿಯಾಗದಿದ್ದರೂ 1,490 ಕೋಟಿ ರೂ. ಮೌಲ್ಯದ ಕೋವಿಡ್​ ಲಸಿಕೆ ಸಿದ್ಧ
ಸ್ಮಾರ್ಟ್​ ಹೆಲ್ಮೆಟ್​ಗಳು ಸ್ಕ್ರೀನಿಂಗ್​ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಥರ್ಮಲ್​ ಗನ್​ ಬಳಸಿ ಸ್ಕ್ರೀನಿಂಗ್​ ಮಾಡಿದರೆ ಒಂದು ದಿನದಲ್ಲಿ ಹೆಚ್ಚು ಜನರನ್ನು ಸ್ಕ್ರೀನಿಂಗ್​ಗೆ​ ಒಳಪಡಿಸಲು ಸಾಧ್ಯವಾಗುವುದಿಲ್ಲ. ಯಾವುದಾದರೂ ಒಬ್ಬ ವ್ಯಕ್ತಿಯ ದೇಹದ ತಾಪಮಾನ ನಿಗಿದಿಗಿಂತ ಹೆಚ್ಚಾಗಿರುವುದು ಕಂಡು ಬಂದರೆ, ಅಂಥ ವ್ಯಕ್ತಿಯನ್ನು ಆ ಪ್ರದೇಶದಲ್ಲಿರುವ ಬೃಹನ್ಮುಂಬೈ ಮಹಾನಗರಪಾಲಿಕೆಯ ಶಿಬಿರಕ್ಕೆ ಕಳುಹಿಸಲಾಗುತ್ತದೆ. ಅವರನ್ನು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜತೆಗೆ ಪರೀಕ್ಷೆಗೆ ಒಳಪಡಿಸಿದ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಬೃಹನ್ಮುಂಬೈ ಮಹಾನಗರಪಾಲಿಕೆಯ ತಂಡದ ಡಾ. ವಂದನಾ ಹೇಳುತ್ತಾರೆ.
ಸದ್ಯಕ್ಕೆ ಈ ಹೆಲ್ಮೆಟ್​ಗಳನ್ನು ಬಳಸಿ ಮುಂಬೈನ ಉತ್ತರ ಭಾಗದಲ್ಲಿ ಸ್ಕ್ರೀನಿಂಗ್​ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೆಲದಿನಗಳಿಂದ ಈ ಪ್ರದೇಶ ಹೊಸ ಹಾಟ್​ಸ್ಪಾಟ್​ ಆಗಿ ಹೊಮ್ಮಿರುವುದು ಇದಕ್ಕೆ ಕಾರಣ. ಒಟ್ಟಾರೆ ಹೇಳುವುದಾದರೆ ನಾವು ಪ್ರತಿದಿನ 10 ಬಡಾವಣೆಗಳಲ್ಲಿ ಸ್ಕ್ರೀನಿಂಗ್​ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡುತ್ತಾರೆ.
ಗುಂಡಿಗೆ ಪತ್ರಕರ್ತ ಬಲಿ: ಘಟನೆ ಬಳಿಕವಷ್ಟೇ ತಪ್ಪಿತಸ್ಥ ಪೊಲೀಸರ ಅಮಾನತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nineteen =
Remember me
