ವಾರಣಾಸಿ (ಉತ್ತರ ಪ್ರದೇಶ):ಇಲ್ಲಿನ ಅಶೋಕ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯ ವಿದ್ಯಾರ್ಥಿಯೋರ್ವ ಸ್ಮಾರ್ಟ್​ ಹೆಲ್ಮೆಟ್​ ಅನ್ನು ಸಂಶೋಧಿಸಿದ್ದು, ವಿಶೇಷ ಹೆಲ್ಮೆಟ್​ ಕೇವಲ ಜೀವ ರಕ್ಷಣೆ ಮಾತ್ರವಲ್ಲದೆ, ಇಂಧನ ಉಳಿತಾಯವನ್ನು ಮಾಡುತ್ತದೆ.
ಹೆಲ್ಮೆಟ್​ನಲ್ಲಿ ಸೆನ್ಸರ್​ ಅಳವಡಿಸಲಾಗಿದ್ದು, ಟ್ರಾಫಿಕ್​ ರೆಡ್​ ಸಿಗ್ನಲ್​ ಬೀಳುತ್ತಿದ್ದಂತೆ ಬೈಕ್ ತನ್ನಷ್ಟಕ್ಕೆ ತಾನೇ ಆಫ್​ ಆಗುತ್ತದೆ. ಆದರೆ, ಹೆಲ್ಮೆಟ್​ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಟ್ರಾಫಿಕ್​​ ಸಿಗ್ನಲ್​ನ 50 ಮೀಟರ್ ಒಳಗಿರಬೇಕು.​ ತನ್ನಷ್ಟಕ್ಕೆ ತಾನೇ ಬೈಕ್​ ನಿಲ್ಲುವುದರಿಂದ ಟ್ರಾಫಿಲ್​ ಸಮಯದ ಪೆಟ್ರೋಲ್​ ಉಳಿತಾಯ ಮಾಡಿದಂತಾಗುತ್ತದೆ.
ಇದನ್ನೂ ಓದಿರಿ:ನಿಮ್ಮ ಕಣ್ಣಿಗೊಂದು ಸವಾಲ್: ಈ​ ಚಿತ್ರದಲ್ಲಿ ಬಾಟಲಿ ಹಿಡಿದಿರುವ ಕೈಗಳೆಷ್ಟೆಂದು ಗುರುತಿಸಿದ್ರೆ ಫುಲ್​ ಮಾರ್ಕ್ಸ್​!​ವಿದ್ಯಾರ್ಥಿಯ ಪ್ರಕಾರ ಹೆಲ್ಮೆಟ್,​ ರೇಡಿಯೋ ಫ್ರೀಕ್ವೆನ್ಸಿ ಟ್ರಾನ್ಸ್​ಮಿಟರ್​ಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ. ಸ್ಮಾರ್ಟ್​ ಹೆಲ್ಮೆಟ್​ ಸಾಧನವು ಎರಡು ಟ್ರಾನ್ಸ್​ಮಿಟರ್ ಮತ್ತು ಎಂದು ರಿಸೀವರ್​ ಹೊಂದಿದೆ. ರಿಸೀವರ್​ ಅನ್ನು ಬೈಕ್​ನಲ್ಲಿ ಅಳವಡಿಸಲಾಗುತ್ತದೆ. ಒಂದು ಟ್ರಾನ್ಸ್​ಮಿಟರ್​ ಅನ್ನು ಹೆಲ್ಮೆಟ್​ನಲ್ಲಿ ಅಳವಡಿಸಲಾಗುತ್ತದೆ. ಹೆಲ್ಮೆಟ್​ ಧರಿಸುವಾಗ ಅದನ್ನು ಆಕ್ಟಿವೇಟ್​ ಮಾಡಿಕೊಳ್ಳಬೇಕು. ಬೈಕ್​ ಸ್ಟಾರ್ಟ್​ ಮಾಡಿದಾಗ ರಿಸೀವರ್​ ಆನ್​ನಲ್ಲಿ ಇರಬೇಕು ಮತ್ತು ಸವಾರ ಹೆಲ್ಮೆಟ್​​ ಧರಿಸಿರಬೇಕು ಎಂದು ವಿದ್ಯಾರ್ಥಿ ವಿವರಿಸಿದ್ದಾನೆ.
ಅದೇ ಸಮಯದಲ್ಲಿ ಎರಡನೇ ಟ್ರಾನ್ಸ್​ಮಿಟರ್ ಅನ್ನು ಇಂಟರ್​ಸೆಕ್ಷನ್​ ಸಿಗ್ನಲ್​ ಸಿಸ್ಟಮ್​ ಬಳಿ ಇಡಲಾಗುತ್ತದೆ ಮತ್ತು ರೆಡ್​ ಸಿಗ್ನಲ್​ ಸಂಪರ್ಕದಲ್ಲಿರುವ ಟ್ರಾನ್ಸ್​ಮಿಟರ್​ ಸಂಪರ್ಕಕ್ಕೆ ವಾಹನ ಬಂದಾಗ ರಿಸೀವರ್​ ಬೈಕ್​ ಅನ್ನು ತಕ್ಷಣ ನಿಲ್ಲಿಸುತ್ತದೆ. ​
ಇದನ್ನೂ ಓದಿರಿ:ನರ್ಸಿಂಗ್​ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ! ಪ್ರಕರಣ ಬೆನ್ನತ್ತ ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲು
ಒಂದು ವೇಳೆ ಅಪಘಾತ ಸಂಭವಿಸಿದರೆ, ಸ್ಮಾರ್ಟ್​ ಹೆಲ್ಮೆಟ್​ನಲ್ಲಿ ಅಳವಡಿಸಿರುವ ಸೆನ್ಸಾರ್​ ಅಪಘಾತದ ಸ್ಥಳದ ಮಾಹಿತಿಯನ್ನು ಪೊಲೀಸರು, ಆಂಬುಲೆನ್ಸ್​ ಮತ್ತು ಕುಟುಂಬದ ಸದಸ್ಯರಿಗೆ ರವಾನಿಸುವ ಮೂಲಕ ನೆರವಾಗುತ್ತದೆ. ಇನ್ನು ವಿದ್ಯಾರ್ಥಿ ಪೇಟೆಂಟ್​ ಪಡೆಯಲು ಮುನ್ನ ಸಾಧನದ ಮತ್ತಷ್ಟು ಸುಧಾರಣೆಗೆ ಗಮನಹರಿಸಿದ್ದಾನೆ. ಆ ಬಳಿಕ ವಾಣಿಜ್ಯ ಉತ್ಪಾದನೆಗೆ ಬರಲಿದೆ ಎಂದು ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ.(ಏಜೆನ್ಸೀಸ್​)
VIDEO| ದೋಸೆ ಬಡಿಸುವ ಪರಿಗೆ ನೆಟ್ಟಿಗರು ಫಿದಾ: ಒಂದೇ ವಾರದಲ್ಲಿ 8 ಕೋಟಿಗೂ ಹೆಚ್ಚು ವೀಕ್ಷಣೆ!

ಮೀ ಟೂ ಆರೋಪ: ಮಾನನಷ್ಟ ಕೇಸ್ ಹಾಕಿದ್ದ ಮಾಜಿ ಕೇಂದ್ರ ಸಚಿವಗೆ ಮುಖಭಂಗ

ಪೇಪರ್ ಬಾಟೆಲ್​ನಲ್ಲೇ ಬರಲಿದೆ ಕೋಕಾ ಕೋಲಾ! 2030ರೊಳಗೆ ಪ್ಲಾಸ್ಟಿಕ್​ ಮುಕ್ತ ಕೋಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 6 =
Remember me
