ಬೆಂಗಳೂರು:ರಾಜ್ಯರಾಜಧಾನಿಯಲ್ಲಿ ದಿನೇದಿನೆ ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಹೋಮ್ ಕ್ವಾರಂಟೈನ್‌ಗೆ ಒಳಗಾಗುವಂತೆ ಸೂಚಿಸಿದವರು ಮನೆಯಲ್ಲಿರದೆ ಹೊರಗೆ ತಿರುಗಾಡುತ್ತಿರುವುದನ್ನು ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ವ್ಯಕ್ತಿಗೆ ಹೋಮ್ ಕ್ವಾರಂಟೈನ್ ಎಂದು ನಿರ್ಧಾರವಾದ ತಕ್ಷಣ ಆತನ ಅಥವಾ ಆಕೆಯ ಕೈಗೆ ‘ಸ್ಮಾರ್ಟ್ ರಿಸ್ಟ್ ಬ್ಯಾಂಡ್’ ಕಟ್ಟಲಾಗುತ್ತದೆ. ಅದನ್ನು ಆ ವ್ಯಕ್ತಿ ತನಗೆ ಬೇಕೆಂದಾಗ ತೆಗೆದಿಡಲು ಆಗುವುದಿಲ್ಲ. ಒಂದು ವೇಳೆ ಅವರು ಮನೆ ಬಿಟ್ಟು ಹೊರ ಹೋದರೆ ಕೂಡಲೇ ಅದರ ಮಾಹಿತಿ ಅಧಿಕಾರಿಗಳಿಗೆ ಗೊತ್ತಾಗುತ್ತದೆ. ಆತ/ಆಕೆ ಆ ಕ್ಷಣದಲ್ಲಿ ಇರುವ ಸ್ಥಳ ಯಾವುದು ಎಂಬುದರ ವಿವರವೂ ಲಭ್ಯವಾಗುತ್ತದೆ. ಪೊಲೀಸರು ಧಾವಿಸಿ ಆ ವ್ಯಕ್ತಿಯನ್ನು ನಿಯೋಜಿತ ಕೋವಿಡ್ ಹೋಟೆಲ್‌ಗೆ ಸ್ಥಳಾಂತರಿಸುತ್ತಾರೆ. ಹೋಟೆಲ್‌ನ ವಾಸ ಮತ್ತು ಊಟದ ವೆಚ್ಚವನ್ನು ಆ ವ್ಯಕ್ತಿಯೇ ಭರಿಸಬೇಕಾಗುತ್ತದೆ.ಇದನ್ನೂ ಓದಿರಿಬೆಂಗಳೂರಿನಲ್ಲಿ ಕೋವಿಡ್​ ಸೋಂಕನ್ನೇ ಮಣಿಸಿದ 100 ವರ್ಷದ ಅಜ್ಜಿ!
ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೋಮ್ ಕ್ವಾರಂಟೈನ್ ವ್ಯವಸ್ಥೆಯ ಹೊಣೆ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ತಿಳಿಸಿದ್ದಾರೆ.
ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ಕುರಿತು ಸಾರ್ವಜನಿಕರು 080-45451111 ಅಥವಾ 97777 77684ಕ್ಕೆ ಮಾಹಿತಿ ನೀಡಬೇಕೆಂದೂ ಕೋರಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಸೋಂಕಿತರು ಇರುವ ಪ್ರದೇಶಗಳ ನೋಂದಾಯಿತ ಸಂಸ್ಥೆಗಳು, ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳ ಪದಾಧಿಕಾರಿಗಳು ಸ್ವಯಂಸೇವಕರಾಗಿ ‘ಸಿಟಿಜನ್ ಹೋಮ್ ಕ್ವಾರಂಟೈನ್ ಸ್ಕ್ವಾಡ್’ ಟೀಮನ್ನು ಸೇರಿಕೊಳ್ಳಬಹುದು. ಸ್ವಯಂಸೇವಕರ ಜವಾಬ್ದಾರಿ, ಕೆಲಸದ ಅವಧಿ ಮುಂತಾದ ನಿರ್ದಿಷ್ಟ ನಿಯಮಗಳನ್ನು ಸರ್ಕಾರ ಈಗಾಗಲೇ ರೂಪಿಸಿದೆ ಎಂದು ತಿಳಿಸಿದ್ದಾರೆ.
ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
