ಮಲಪ್ಪುರಂ:ಆಕಸ್ಮಿಕವಾಗಿ ಕೊಳವೊಂದರಲ್ಲಿ ಬಿದ್ದ 50 ಸಾವಿರ ರೂ. ಮೌಲ್ಯದ ದುಬಾರಿ ಸ್ಮಾರ್ಟ್​ಫೊನ್​ ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ಅಗ್ನಿಶಾಮಕ ಸಿಬ್ಬಂದಿ ನೆರವಾದ ಘಟನೆ ಕೇರಳದಲ್ಲಿ ನಡೆದಿದೆ.​ಕಡಂಬುಜಾ ನೆಡುವಂಚೇರಿ ನಿವಾಸಿ ಶಿಹಾಬುದೀನ್ ಗುರುವಾರ​ ತಮ್ಮ ಮನೆ ಸಮೀಪದ ಕೊಳದಲ್ಲಿ ದುಬಾರಿ ಮೊಬೈಲ್​ ಅನ್ನು ಕಳೆದುಕೊಂಡಿದ್ದರು. ಈ ವೇಳೆ ನೆರೆ ಮನೆಯವರ ಜತೆ ಸೇರಿ ಸಾಕಷ್ಟು ಹುಡುಕಾಡಿದರೂ ಮೊಬೈಲ್​ ಮಾತ್ರ ಪತ್ತೆಯಾಗಲಿಲ್ಲ. ಕೊಳವು ಸಾಕಷ್ಟು ಕೆಸರು ಮತ್ತು ಕಳೆಗಳಿಂದ ಕೂಡಿದ್ದರಿಂದ ಮೊಬೈಲ್​ ಪತ್ತೆ ಕಷ್ಟವಾಗಿತ್ತು.
ಇದನ್ನೂ ಓದಿ:ಸರ್ಕಾರ ಸೂಕ್ತ ರಕ್ಷಣೆ ಕೊಟ್ರೆ ಸತ್ಯ ಹೇಳ್ತೇನೆ: ಸ್ಯಾಂಡಲ್​ವುಡ್​ ಕುರಿತು ಇಂದ್ರಜಿತ್​ ಲಂಕೇಶ್​ ಸ್ಫೋಟಕ ಹೇಳಿಕೆ!
ಹುಡುಕುವುದು ಸಾಧ್ಯವಿಲ್ಲ ಎಂದರಿತ ಶಿಹಾಬುದೀನ್ ಬಳಿಕ ಮಲಪ್ಪುರಂ ಅಗ್ನಿಶಾಮಕ ಸಿಬ್ಬಂದಿ ಮೊರೆ ಹೋದರು. ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಅಧಿಕಾರಿ ಪಿ ಮುಹಮ್ಮದ್​, ಶಿಬಿನ್​ ಮತ್ತು ಸರತ್​ ಕುಮಾರ್ ಸ್ಕೂಬಾ ಸೆಟ್​ ಬಳಿಸಿಕೊಂಡು​ 20 ಅಡಿ ಆಳದ ಕೊಳಕ್ಕೆ ಜಿಗಿದು ಮೊಬೈಲ್​ ಪತ್ತೆ ಮಾಡಿದರು.
ಮೊಬೈಲ್ ತುಂಬಾ ಆಧುನಿಕ ಫೀಚರ್ ಹೊಂದಿದ್ದರಿಂದ ನೀರಿಗೆ ಬಿದ್ದರೂ ಸಹ ಮೊಬೈಲ್​ಗೆ ಏನು ಆಗಿರಲಿಲ್ಲ. ಮೊಬೈಲ್​ ಮರಳಿ ಪಡೆದ ಶಿಹಾಬುದೀನ್ ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.(ಏಜೆನ್ಸೀಸ್​)
ಇದನ್ನೂ ಓದಿ:ಮಗಳು ಬೇರೆ ಜಾತಿಯವನನ್ನು ಮದುವೆ ಆದಳೆಂದು ಅಪ್ಪ-ಅಮ್ಮ ಸಂಪಿಗೆ ಹಾರಿದ್ರು..
ತಲೆನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಶಾಕ್​: 17 ವರ್ಷದಿಂದ ಮೆದುಳಿನಲ್ಲೇ ಇತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 5 =
Remember me
