ಉತ್ತರಪ್ರದೇಸ: ಆಸ್ಕರ್​​ ಪ್ರಶಸ್ತಿ ವಿಜೇತೆ ಪಿಂಕಿ ಸೋಂಕರ್ ವಾಸಿಸುತ್ತಿರುವ ಮನೆಯನ್ನ ಕೆಡವಲಿದ್ದೇವೆ ಎಂದು ಅರಣ್ಯ ಇಲಾಖೆ ನೋಟಿಸ್​​ ನೀಡಿದೆ. ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂಬ ಆರೋಪ ಮಾಡಿರುವ ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದ್ದು, ಇದೀಗ ಸ್ಮೈಲ್​​ ಪಿಂಕಿ ಮನೆ ಕೆಡವಲು ಆದೇಶಿಸಲಾಗಿದೆ.
2008 ರಲ್ಲಿ ಪಿಂಕಿಯ ಜೀವನವನ್ನು ಆಧರಿಸಿದ ‘ಸ್ಮೈಲ್​​ ಪಿಂಕಿ’ ಸಾಕ್ಷ್ಯಾ ಚಿತ್ರವು, ಆಸ್ಕರ್​​ ಪ್ರಶಸ್ತಿಯನ್ನ ಪಡೆದುಕೊಂಡಿತ್ತು. ಇದೀಗ ಆಕೆಯನ್ನ ಹೊರತು ಪಡಿಸಿ ಗ್ರಾಮದಲ್ಲಿ ವಾಸಿಸುತ್ತಿರುವ 30 ಜನರಿಗೆ ಮನೆ ನೆಲಸಮದ ನೋಟಿಸ್​​ ನೀಡಲಾಗಿದೆ. ಕಾರಣ ಇದು ಸರ್ಕಾರಿ ಜಾಗದಲ್ಲಿ ನೀವು ಮನೆ ಮಾಡಿಕೊಂಡಿದ್ದೀರಿ, ಹಾಗಾಗಿ ಇದು ಅಕ್ರಮ ಆಸ್ತಿ ಎಂದು ಬಣ್ಣಿಸಿ ಅರಣ್ಯ ಅಧುಇಕಾರಿಗಳು ಮನೆ ನೆಲಸಮಕ್ಕೆ ನೋಟಿಸ್​​ ನೀಡಿದ್ದಾರೆ.
ಪಿಂಕಿ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ರಾಂಪುರ ಧಾಬಿ ಗ್ರಾಮದ ನಿವಾಸಿ. ಗ್ರಾಮಸ್ಥರು ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಜಾಗ ಸರ್ಕಾರಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆ ನೋಟಿಸ್​ನಲ್ಲಿ ತಿಳಿಸಿದೆ.
ಪಿಂಕಿಯ ತಂದೆ ರಾಜೇಂದ್ರ ಸೋಂಕರ್ ಮಾತನಾಡಿ, ಈ ಭಾಗದಲ್ಲಿ ಮನೆ ನಿರ್ಮಿಸುವಾಗ ಅರಣ್ಯ ಇಲಾಖೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕಾ ನಿರಂಜನ್.
ಈ ಸೂಚನೆಗಳನ್ನು ಪರಿಶೀಲಿಸಲು ವಿಶೇಷ ಸಮಿತಿಯನ್ನು ರಚಿಸಲಾಗಿದೆ. ನ್ಯಾಯಯುತವಾಗಿ ಸಮಸ್ಯೆ ಬಗೆಹರಿಯಲಿದೆ, ಈ ವಿಚಾರದಲ್ಲಿ ಯಾರೂ ಆತಂಕ ಪಡಬೇಡಿ. ಈ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 15 =
Remember me
