ಹೈದರಾಬಾದ್:ನಾಗರಿಕ ಸೇವೆಗಳಲ್ಲಿ ಅಂಗವಿಕಲರ ಕೋಟಾದ ಔಚಿತ್ಯವೇನಿದೆ ಎಂದು ಐಎಎಸ್​ ಅಧಿಕಾರಿ ಸ್ಮಿತಾ ಸಬರ್ವಾಲ್​ ಪ್ರಶ್ನಿಸಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:‘ಟ್ರೋಲ್‌ಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ’..ನಟಿ ಜಾಹ್ನವಿ ಕಪೂರ್ ಹೀಗೆ ಹೇಳಿದ್ದೇಕೆ?
ಮಹಾರಾಷ್ಟ್ರದ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಅಂಗವಿಕಲ ಪ್ರಮಾಣಪತ್ರದ ಕುರಿತು ಚರ್ಚೆಯಾಗುತ್ತಿರುವ ಬೆನ್ನಲ್ಲೇ ತೆಲಂಗಾಣ ಹಣಕಾಸು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿರುವ ಸ್ಮಿತಾ ಸಬರ್ವಾಲ್ ಅಂಗವಿಕಲರ ಮೀಸಲಾತಿ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಇದು ವಿವಾದಕ್ಕೆಡೆ ಮಾಡಿಕೊಟ್ಟಿದೆ.
As this debate is blowing up-
With all due respect to the Differently Abled. 🫡Does an Airline hire a pilot with disability? Or would you trust a surgeon with a disability.
The nature of the#AIS( IAS/IPS/IFoS) is field-work, long taxing hours, listening first hand to…
— Smita Sabharwal (@SmitaSabharwal)July 21, 2024

ಅಂಗವಿಕಲರ ಬಗ್ಗೆ ನನಗೆ ಗೌರವವಿದೆ. ಆದರೆ ಯಾವುದಾದರೂ ವಿಮಾನಯಾನ ಸಂಸ್ಥೆ ಅಂಗವಿಕಲರನ್ನು ಪೈಲಟ್ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತದೆಯೇ? ಅಂಗವಿಕಲತೆ ಇರುವ ಸರ್ಜನ್‌ನಲ್ಲಿ ನೀವು ನಂಬಿಕೆ ಇರಿಸುತ್ತೀರಾ? ಎಂದು ಅವರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.
ನಾಗರಿಕ ಸೇವಾ ಕೆಲಸದ ಸ್ವರೂಪವು ಕ್ಷೇತ್ರ ಕಾರ್ಯವಾಗಿದೆ. ಇದಕ್ಕೆ ಸದೃಢವಾದ ಮಾನಸಿಕ ಅಥವಾ ದೈಹಿಕ ಪ್ರಯತ್ನ ಅವಶ್ಯಕತೆಯಿರುತ್ತದೆ. ದೂರ ಪ್ರಯಾಣಿಸುವುದರ ಜತೆಗೆ ಜನರ ಅಹವಾಲುಗಳನ್ನು ನೇರವಾಗಿ ಆಲಿಸಬೇಕಿರುತ್ತದೆ. ಇಂತಹ ಪ್ರಮುಖ ಸೇವೆಗೆ ಕೋಟಾ ವ್ಯವಸ್ಥೆಯಾದರೂ ಯಾಕೆ ಇರಬೇಕು ಎಂದು ಸ್ಮಿತಾ ಪ್ರಶ್ನಿಸಿದ್ದಾರೆ.
ಇದರ ನಡುವೆ ಅನೇಕ ನೆಟಿಜನ್‌ಗಳು ಸ್ಮಿತಾ ಸಬರ್ವಾಲ್ ಅವರ ಕಾಮೆಂಟ್‌ಗಳನ್ನು ಖಂಡಿಸಿದ್ದಾರೆ. ಅಂಗವಿಕಲತೆಯೇ ಒಂದು ಶಕ್ತಿ. ಬುದ್ಧಿವಂತಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಪೋಸ್ಟ್ ನೋಡಿದಾಗ ತಿಳಿವಳಿಕೆ ಮತ್ತು ಜ್ಞಾನೋದಯ ಬಹಳ ಅವಶ್ಯಕ ಎಂದು ತೋರುತ್ತದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕರುಣಾ ಪ್ರತಿಕ್ರಿಯಿಸಿದ್ದಾರೆ.
ಈ ಪೋಸ್ಟ್ ಅನ್ನು ನೋಡಿದಾಗ ಅಧಿಕಾರಿಗಳು ಹೇಗೆ ವರ್ತಿಸುತ್ತಿದ್ದಾರೆ? ಅವರ ಚಿಂತನೆ ಯಾವ ನಿಟ್ಟಿನಲ್ಲಿದೆ ಎಂಬುದು ಮನದಟ್ಟಾಗುತ್ತದೆ ಎಂದು ಸಂಸದ ಪ್ರಿಯಾಂಕಾ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ.
ಡೆಮಾಕ್ರಟಿಕ್ ಪಕ್ಷದಲ್ಲಿ ಅನಿರೀಕ್ಷಿತ ಬದಲಾವಣೆ ಎಂದ ಒಬಾಮಾ..ಬಿಡೆನ್ ನಿರ್ಧಾರ ಶ್ಲಾಘಿಸಿದ ಮಾಜಿ ಅಧ್ಯಕ್ಷ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + one =
Remember me
