ನವದೆಹಲಿ:ಮದ್ಯಪಾನ, ಧೂಮಪಾನ ಪ್ರಿಯರಿಗೆ ಇದು ಆಘಾತಕಾರಿ ಸುದ್ದಿ. ಅಧ್ಯಯನವೊಂದರಲ್ಲಿ ಕಂಡುಬಂದಿರುವ ಈ ಅಂಶಗಳು ಮದ್ಯ ಹಾಗೂ ಬೀಡಿ-ಸಿಗರೇಟ್​ ಕೈಗೆತ್ತಿಕೊಳ್ಳುವ ಮುನ್ನ ಒಮ್ಮೆ ಯೋಚಿಸುವಂತೆ ಮಾಡಿದರೂ ಅಚ್ಚರಿ ಏನಲ್ಲ. ಇಂಥದ್ದೊಂದು ಆತಂಕಕಾರಿ ಅಂಶ ಈ ಜಾಗತಿಕ ಅಧ್ಯಯನಲ್ಲಿ ಕಂಡುಬಂದಿದೆ.
ಯುನಿವರ್ಸಿಟಿ ಆಫ್​ ವಾಷಿಂಗ್ಟನ್ಸ್​ ಸ್ಕೂಲ್​ ಆಫ್​ ಮೆಡಿಸಿನ್​ನ ಇನ್​ಸ್ಟಿಟ್ಯೂಟ್​ ಫಾರ್​​ ಹೆಲ್ತ್​ ಮೆಟ್ರಿಕ್ಸ್​ ಆ್ಯಂಡ್ ಇವ್ಯಾಲ್ಯುವೇಷನ್​ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಅವರು ಮಂಡಿಸಿದ ಅಧ್ಯಯನದಲ್ಲಿ ಈ ಆಘಾತಕಾರಿ ಅಂಶಗಳು ಕಂಡುಬಂದಿದ್ದು, ಇದನ್ನು ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಪ್ರಕಟಿಸಿದೆ. ಈ ಅಧ್ಯಯನದಲ್ಲಿನ ಅಂಶಗಳು ಮದ್ಯ ಹಾಗೂ ಧೂಮಪಾನಪ್ರಿಯರಿಗೆ ಎಚ್ಚರಿಕೆ ಗಂಟೆಯಂತಿದೆ.
ಲ್ಯಾನ್ಸೆಟ್​​ನಲ್ಲಿ ಪ್ರಕಟಗೊಂಡಿರುವ ‘ಗ್ಲೋಬಲ್​ ಬರ್ಡನ್​ ಆಫ್ ಡಿಸೀಸಸ್​, ಇಂಜುರೀಸ್ ಆ್ಯಂಡ್ ರಿಸ್ಕ್​ ಫ್ಯಾಕ್ಟರ್ಸ್​ (ಜಿಬಿಡಿ) ರಿಪೋರ್ಟ್-2019’ ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿನ ಅಂಶಗಳು ಒಂದಷ್ಟು ಮಾಹಿತಿಯನ್ನು ಹೊರಹಾಕಿವೆ. ಇದರ ಪ್ರಕಾರ 2019ರಲ್ಲಿ ಭಾರತದಲ್ಲಿನ ಕ್ಯಾನ್ಸರ್​ ರೋಗಿಗಳಲ್ಲಿ ಸತ್ತವರ ಪೈಕಿ ಶೇ. 37 ರೋಗಿಗಳ ಸಾವಿಗೆ ಧೂಮಪಾನ, ಮದ್ಯಪಾನ ಮತ್ತು ಹೈ ಬಾಡಿ ಮಾಸ್​ ಇಂಡೆಕ್ಸ್​ (ಬಿಎಂಐ) ಕಾರಣ ಎಂಬುದು ಕಂಡುಬಂದಿದೆ. ಜಾಗತಿಕವಾಗಿ ಹೇಳುವುದಾದರೆ, ಕ್ಯಾನ್ಸರ್​​ನಿಂದ ಸತ್ತವರ ಪೈಕಿ ಶೇ. 44.4 ಸಾವಿಗೆ ಈ ರಿಸ್ಕ್​ ಫ್ಯಾಕ್ಟರ್​​ಗಳೇ ಕಾರಣ ಎಂದು ತಿಳಿದುಬಂದಿದೆ.
ಇದೇ ಅಧ್ಯಯನದ ಪ್ರಕಾರ, 2019ರಲ್ಲಿ ಜಗತ್ತಿನಲ್ಲಿ ಸಂಭವಿಸಿದ ಪುರುಷ ಕ್ಯಾನ್ಸರ್​ ರೋಗಿಗಳ ಸಾವಿನಲ್ಲಿ ಶೇ. 50.6ರಷ್ಟು ಸಾವು ಹಾಗೂ ಮಹಿಳಾ ಕ್ಯಾನ್ಸರ್​ ರೋಗಿಗಳಲ್ಲಿ ಶೇ. 36.3 ಸಾವು ಈ ರಿಸ್ಕ್ ಫ್ಯಾಕ್ಟರ್​ಗಳಿಂದ ಸಂಭವಿಸಿದೆ ಎಂಬುದು ಕಂಡುಬಂದಿದೆ. ಅಂದರೆ ಈ ಅವಧಿಯಲ್ಲಿನ ಕ್ಯಾನ್ಸರ್​ ರೋಗಿಗಳಲ್ಲಿ 2.88 ದಶಲಕ್ಷ ಪುರುಷರು ಮತ್ತು 1.58 ದಶಲಕ್ಷ ಮಹಿಳೆಯರ ಸಾವು ಧೂಮಪಾನ, ಮದ್ಯಪಾನ, ಅತಿಯಾದ ಬಿಎಂಐ ಮುಂತಾದ ರಿಸ್ಕ್​ ಫ್ಯಾಕ್ಟರ್​ಗಳಿಂದ ಸಂಭವಿಸಿದೆ ಎಂದು ಈ ಅಧ್ಯಯನ ಹೇಳಿದೆ.
ಈ ಅಧ್ಯಯನವು 23 ವಿವಿಧ ಕ್ಯಾನ್ಸರ್​ಗಳಲ್ಲಿ ಸಾವು ಅಥವಾ ಆರೋಗ್ಯ ಅತಿಯಾಗಿ ಹದಗೆಡುವಂಥದ್ದಕ್ಕೆ ಕಾರಣವಾಗುವ 34 ವಿಧದ ರಿಸ್ಕ್​ ಫ್ಯಾಕ್ಟರ್​ಗಳ ವಿಶ್ಲೇಷಣೆ ನಡೆಸಿದೆ. ಅವುಗಳ ಪೈಕಿ ಧೂಮಪಾನ, ಮದ್ಯಪಾನ ಮತ್ತು ಅತಿಯಾದ ಬಾಡಿ ಮಾಸ್ ಇಂಡೆಕ್ಸ್​ ಪುರುಷ ಹಾಗೂ ಮಹಿಳೆಯರಿಬ್ಬರಲ್ಲೂ ಸಾವು ಹಾಗೂ ಆರೋಗ್ಯ ಹದಗೆಡುವಲ್ಲಿ ಪ್ರಮುಖ ಕಾರಣವಾಗುತ್ತಿವೆ ಎಂದು ಡಾ.ಮುರ್ರೆ ತಿಳಿಸಿದ್ದಾರೆ.
ಫುಲ್​ ಟೈಟ್ ಆಗಿ ಹೈ-ವೋಲ್ಟೇಜ್​ ವಿದ್ಯುತ್ ಕಂಬಕ್ಕೇರಿದ ಯುವಕ; ಕೆಳಗಿಳಿಯದೆ ಗಂಟೆಗಟ್ಟಲೆ ತಲೆನೋವಾಗಿದ್ದ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + two =
Remember me
