Smriti Irani Hits Venture Capital Funds For Not Backing Women-Led Startupsಮುಂಬೈ:ಮಹಿಳೆಯರು ನಡೆಸುತ್ತಿರುವ ನವೀನ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸದ ವೆಂಚರ್ ಕ್ಯಾಪಿಟಲ್ ಫಂಡ್‌ಗಳ (ವಿಸಿ) ನಡವಳಿಕೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:‘ಭಾರತ 2026ಕ್ಕೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ’: ಪನಗಾರಿಯಾ
“ಇಂದಿಗೂ ಸಹ, ವೆಂಚರ್ ಕ್ಯಾಪಿಟಲಿಸ್ಟ್‌ಗಳು ಪುರುಷರು ನಡೆಸುವ ಕಂಪನಿಗಳಿಗೆ ಹೋಲಿಸಿದರೆ ಮಹಿಳೆಯರು ನಡೆಸುವ ಸ್ಟಾರ್ಟ್‌ಅಪ್ ಕಂಪನಿಗಳಲ್ಲಿ ಆಸಕ್ತಿ ಹೊಂದಿಲ್ಲ” ಎಂದು ಮೆಂಟರ್ ಮೈಬೋರ್ಡ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಇರಾನಿ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಮಹಿಳಾ ಸಂಶೋಧಕರಿದ್ದಾರೆ. ಅವರ ಪ್ರಯತ್ನಗಳು ವಾಣಿಜ್ಯ ಉದ್ಯಮಗಳಾಗಿ ಪರಿವರ್ತನೆಯಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಪೊರೇಟ್ ಮಂಡಳಿಗಳಲ್ಲಿ ಎಷ್ಟು ಮಹಿಳೆಯರು ಸ್ಥಾನ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸಲು ಸೂಚಿಸಲಾಗಿದೆ. ಮಹಿಳೆಯರಿಗೆ ಮಾಸಿಕ ರಜೆ ನೀಡುವ ಅಗತ್ಯವಿಲ್ಲ ಎಂದು ಇತ್ತೀಚೆಗೆ ಸಚಿವೆ ಸ್ಮೃತಿ ಇರಾನಿ ಹೇಳಿಕೆಗೆ ಟೀಕೆ ವ್ಯಕ್ತವಾಗಿರುವುದು ಗೊತ್ತೇ ಇದೆ. ಆದರೆ ಅವರು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, “ನಿಮ್ಮ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಸ್ಥರು ಪ್ರತಿ ತಿಂಗಳು ನಿಮ್ಮ ಸಂಬಳದ ಬಗ್ಗೆ ಕೇಳುವ ಪರಿಸ್ಥಿತಿಯನ್ನು ನೀವು ಊಹಿಸಬಲ್ಲಿರಾ?” ಎಂದು ಅವರು ಪ್ರಶ್ನಿಸಿದರು.
ಮಾಸಿಕ ರಜೆ ನೀಡುವುದು ಕೂಡ ಪ್ರಸ್ತುತ ಕಾನೂನುಗಳಿಗೆ ವಿರುದ್ಧವಾಗಿದೆ. ಈ ಹಿಂದೆ ಮಹಿಳೆಯರು ಅವಕಾಶಗಳನ್ನು ನಿರಾಕರಿಸುವುದನ್ನು ನಾವು ನೋಡಿದ್ದೇವೆ. ಏಕೆಂದರೆ ಅವರು ಮದುವೆ, ಮಕ್ಕಳ ಕಾರಣದಿಂದಾಗಿ ಪ್ರಗತಿ ತೋರಿಸುವುದಿಲ್ಲ ಎಂಬ ಕಾರಣ ತೋರಿ ಉದ್ಯೋಗ ನಿರಾಕರಿಸುವ ಪರಿಸ್ಥಿತಿ ಇತ್ತು. ಮತ್ತೆ ಅಂತಹ ಸ್ಥಿತಿ ಸೃಷ್ಟಿಸುವುದು ಅಗತ್ಯವೆಂದು ನೀವು ಭಾವಿಸುತ್ತೀರಾ? ಎಂದು ಇರಾನಿ ಪ್ರಶ್ನಿಸಿದರು.
ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವಲ್ಲಿ ಒಂದೇ ವಿಧಾನ ಸೂಕ್ತವಲ್ಲ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ್ಯವನ್ನು ಬೆಳೆಸುವತ್ತ ಗಮನಹರಿಸುವಂತೆ ಅವರು ವಾಣಿಜ್ಯ ಶಾಲೆಗಳಿಗೆ ಅವರು ಸಲಹೆ ನೀಡಿದರು.
ಯುಪಿಯಲ್ಲಿ ಆಲೂಗಡ್ಡೆ ಇಳುವರಿ ಬಂಪರ್: ಗ್ರಾಹಕರಿಗೆ ಸಿಹಿ – ರೈತರೇ ಎಚ್ಚರ..ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
