ನವದೆಹಲಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾಡೆಲ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ್ದು ನಂತರ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರು. ರಾಜಕೀಯಕ್ಕೆ ಬರುವ ಮೊದಲು ಅವರು ಕಿರುತೆರೆ ನಟಿಯಾಗಿ ಮನೆ ಮಾತಾಗಿದ್ದರು. ಮಾಡೆಲ್ ಹಾಗೂ ನಟಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಒಮ್ಮೆ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು.
ಇಂದಿಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೇಂದ್ರ ಸಚಿವೆ ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯರಾಗಿದ್ದಾರೆ. ನಿನ್ನೆ ಮಾರ್ಚ್ 23ರಂದು ಸ್ಮೃತಿ ಇರಾನಿಯ ಜನ್ಮದಿನ. ಈ ಸಂದರ್ಭದಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.
25 ವರ್ಷಗಳ ಹಿಂದೆ 1998 ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಅವರು ಕಿತ್ತಳೆ ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್‌ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದರು. ಈ ವಿಡಿಯೋವನ್ನು ಕ್ರಿಪ್ಟಿಕ್ ಮೈಂಡ್ ಎನ್ನುವ ಬಿಜೆಪಿಯನ್ನು ಟ್ರೋಲ್ ಮಾಡುವ ಇನ್ಸ್ಟಾಗ್ರಾಂ ಖಾತೆ ಹಂಚಿಕೊಂಡಿದ್ದು ಅದರಲ್ಲಿ ಈಗ ಸ್ಮೃತಿ ಇರಾನಿಯನ್ನು ಬಾಯ್ಕಾಟ್ ಮಾಡುವುದಿಲ್ಲವೇ ಎಂದು ಬರೆಯಲಾಗಿದೆ.


A post shared by Cryptic Miind (@crypticmiind)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 5 =
Remember me
