ನವದೆಹಲಿ:ಮಾಜಿ ರೂಪದರ್ಶಿ, ನಟಿ, ನಿರ್ಮಾಪಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸೋಶಿಯಲ್​​​​​ ಮೀಡಿಯಾದಲ್ಲಿ ಆಕ್ವೀವ್ ಆಗಿರುತ್ತಾರೆ. ಜೊತೆಗೆ ತಮಗನಿಸಿದ್ದನ್ನು ಅನುಯಾಯಿಗಳೊಂದಿಗೆ ಆಗಾಗ್ಗೆ ಶೇರ್​​ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಮಾತ್ರ ಸ್ಮೃತಿ ತಾಯಿಯ ಫೋಟೋ ಹಂಚಿಕೊಂಡಿದ್ದಾರೆ. ಫೋಟೋವನ್ನು ಪೋಸ್ಟ್ ಮಾಡುವಾಗ, ಅವರು ಪೋಷಕರಿಗೆ ಸಮಯವನ್ನು ನೀಡಬೇಕೆಂದು ಒತ್ತಿ ಹೇಳಿದ್ದಾರೆ. ಸ್ಮೃತಿ ಇರಾನಿ, ‘ನಮಗೆ ಎಷ್ಟು ಸಮಯವಿದೆ ಎಂದು ನಮಗೆ ತಿಳಿದಿಲ್ಲ, ಅದಕ್ಕಾಗಿಯೇ ಸಮಯ ತೆಗೆದುಕೊಂಡು ನಿಮ್ಮ ಪೋಷಕರಿಗೆ ಸ್ವಲ್ಪ ಸಮಯ ನೀಡಿ’ ಎಂದು ಬರೆದಿದ್ದಾರೆ.
ಸ್ಮೃತಿ ಇರಾನಿ ಅವರು ತಮ್ಮ ತಾಯಿಯ ಫೋಟೋ ಶೇರ್ ಮಾಡುವ ಮೂಲಕ ಈ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಮಾತಿನ ಶೈಲಿಗೆ ಹೆಸರುವಾಸಿಯಾಗಿರುವ ಸ್ಮೃತಿ, ಈ ಬಾರಿ ತಮ್ಮ ತಾಯಿಗಾಗಿ ಭಾವನಾತ್ಮಕ ಬರಹವೊಂದನ್ನು ಬರೆದುಕೊಡಿದ್ದಾರೆ. ತಮ್ಮ ತಾಯಿಯ ಚಿತ್ರದೊಂದಿಗೆ ಇನ್‌ಸ್ಟಾಗ್ರಾಮ್​​​ನಲ್ಲಿ ಸಂದೇಶವನ್ನು ಹಂಚಿಕೊಂಡಿರುವ ಸ್ಮೃತಿ, ನಮಗೆಲ್ಲರಿಗೂ ನಮ್ಮ ಹೆತ್ತವರು ಬೇಷರತ್ತಾಗಿ ನೀಡುವ ಪ್ರೀತಿ ಎಷ್ಟು ಮುಖ್ಯ ಎಂದು ಹೇಳಿದ್ದಾರೆ.
A post shared by Smriti Irani (@smritiiraniofficial)
‘ಅಮ್ಮಾ, ನಿಮ್ಮ ಫೋಟೋವನ್ನು ಪೋಸ್ಟ್ ಮಾಡಲು ನನಗೆ ಯಾವುದೇ ಕಾರಣವಿಲ್ಲ ಎಂದು ಬರಹರವನ್ನು ಆರಂಭಿಸಿರುವ ಸ್ಮೃತಿ, ನಿಮ್ಮ ಪೋಷಕರಿಗೆ ಹಲೋ ಹೇಳಲು ಸ್ವಲ್ಪ ಸಮಯ ಮೀಸಲಿಡಿ, ಅವರೊಂದಿಗೆ ಮಾತನಾಡಿ’ ಎಂದು ಸುಧೀರ್ಘವಾಗಿ ಬರೆದುಕೊಂಡಿದ್ದಾರೆ.
ಸ್ಮೃತಿ ಅವರು ಇತ್ತೀಚೆಗೆ ತಮ್ಮ ತಂದೆಯನ್ನು ಪಿಎಂ ಮೋದಿ ಅವರನ್ನು ಭೇಟಿ ಮಾಡಿಸಲು ಕರೆದೊಯ್ದ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅಂದಹಾಗೆ ಪ್ರಧಾನಿ ಕಚೇರಿಯಿಂದ ಹೊರಬಂದ ತಂದೆಯ ಚಿತ್ರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು.
ರಾಜಕೀಯ ಜೀವನದಲ್ಲಿ ಯಶಸ್ವಿಯಾಗಿರುವ ಸ್ಮೃತಿ ಇರಾನಿ ಅವರು ಕಿರುತೆರೆಯಲ್ಲಿಯೂ ಸದ್ದು ಮಾಡಿದ್ದಾರೆ. ಧಾರಾವಾಹಿ ಆತಿಶ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸ್ಮೃತಿ ಇರಾನಿ ಅವರು ಹಮ್ ಹೈ ಕಲ್ ಆಜ್ ಔರ್ ಕಲ್, ಕವಿತಾ ಮತ್ತು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿಯಂತಹ ಧಾರಾವಾಹಿಗಳ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಚಿತ್ರದಲ್ಲಿ ತುಳಸಿ ಪಾತ್ರವನ್ನು ನಿರ್ವಹಿಸುವ ಮೂಲಕ ಸ್ಮೃತಿ ಇರಾನಿ ಸಾಕಷ್ಟು ಜನಪ್ರಿಯರಾದರು. ಈ ಧಾರಾವಾಹಿ ಅವರಿಗೆ ಟಿವಿ ಉದ್ಯಮದಲ್ಲಿ ನಿಜವಾದ ಮನ್ನಣೆ ನೀಡಿತು. ಇದರ ಹೊರತಾಗಿ, ಸ್ಮೃತಿ ಇರಾನಿ ಅನೇಕ ದೈನಂದಿನ ಧಾರವಾಹಿಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವಂತೆ ಪ್ರಧಾನಿ ಮೋದಿ ತಿಳಿಸಿದ ಆ ಮಹಿಳೆ ಯಾರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
