ನವದೆಹಲಿ:ಕಾಂಗ್ರೆಸ್​ನ ನಾಯಕ ರಾಹುಲ್​ ಗಾಂಧಿ ಮಾಡಿದ್ದ ಟ್ವೀಟ್​ ಒಂದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಟ್ವೀಟ್​ ಮಾಡುವುದಕ್ಕೂ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಸಚಿವೆ ಕಾಂಗ್ರೆಸ್​ ನಾಯಕನಿಗೆ ಎಚ್ಚರಿಸಿದ್ದಾರೆ.
ಸೇನೆಯಲ್ಲಿ ಹೆಣ್ಣು ಗಂಡು ಎನ್ನುವ ಭೇದ-ಭಾವ ಮಾಡಬಾರದು, ಮಹಿಳೆಯರಿಗೆ ಭೂಸೇನೆಯಲ್ಲಿ ಶಾಶ್ವತ ಆಯೋಗ ರಚನೆಯಾಗಬೇಕು ಎಂದು ಸುಪ್ರೀಂ ಕೋರ್ಟ್​ ಕೊಟ್ಟ ಆದೇಶದ ಕುರಿತಾಗಿ ಟ್ವೀಟ್​ ಮಾಡಿದ್ದ ರಾಹುಲ್​ ಗಾಂಧಿ, “ಸರ್ಕಾರವು ಸೇನೆಯಲ್ಲಿ ಕಮಾಂಡ್​ ಪೋಸ್ಟ್​ಗಳನ್ನು ಹೆಣ್ಣು ಮಕ್ಕಳಿಗೆ ನೀಡದೇ ಮಹಿಳೆಯರಿಗೆ ಅಗೌರವ ಸೂಚಿಸುತ್ತಿತ್ತು. ಧೈರ್ಯವಾಗಿ ಎದ್ದು ನಿಂತು ಬಿಜೆಪಿ ಸರ್ಕಾರ ತಪ್ಪು ಎಂದು ತೋರಿಸಿದ್ದಕ್ಕೆ ಭಾರತದ ಎಲ್ಲ ಮಹಿಳೆಯರಿಗೆ ಅಭಿನಂದನೆಗಳು” ಎಂದು ಟ್ವೀಟ್​ ಮಾಡಿದ್ದರು.
ರಾಹುಲ್​ ಗಾಂಧಿಯ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ, “ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಆಯೋಗ ರಚನೆಯನ್ನು ಘೋಷಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರು. ನಿಮ್ಮ ಸರ್ಕಾರ ಅದರ ಬೆರಳನ್ನು ತಿರುಚಲು ಪ್ರಯತ್ನಿಸಿದಾಗ ಬಿಜೆಪಿ ಮಹಿಳಾ ಮೋರ್ಚಾ ಆ ವಿಚಾರವನ್ನು ಕೈಗೆತ್ತುಕೊಂಡಿತು. ಟ್ವೀಟ್​ ಮಾಡುವ ಮೊದಲು ಪರಿಶೀಲನೆ ಮಾಡಿಕೊಳ್ಳಿ.” ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.(ಏಜೆನ್ಸೀಸ್​)
आदरणीय बेगानी शादी में अब्दुल्ला दीवाने,
It was PM@narendramodiJi who announced Permanent Commission for Women in Armed Forces, thereby ensuring gender justice &@BJPMahilaMorchatook up this issue when your Govt. twiddled its thumbs. Tweet से पहले टीम को बोलो check kare 🙏https://t.co/DQhm3tRc0g
— Smriti Z Irani (@smritiirani)February 17, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
