ನವದೆಹಲಿ:ಲಾಕ್‌ಡೌನ್ ನಿಂದಾಗಿ ವಿವಿಧೆಡೆ ಸಿಲುಕಿರುವ ವಲಸಿಗರು ಮನೆಗೆ ಮರಳಲು ಸಹಾಯ ಮಾಡಿದ್ದಕ್ಕೆ ನಟ ಸೋನು ಸೂದ್ ಅವರನ್ನು ಸಚಿವೆ ಸ್ಮೃತಿ ಇರಾನಿ ಶ್ಲಾಘಿಸಿದ್ದಾರೆ.ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಜನರು ಸೋನು ಅವರಿಗೆ ಸಹಾಯ ಕೋರಿ ಟ್ವೀಟ್ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಸೋನು ಸಹಾಯ ನೀಡುವುದಾಗಿ ಭರವಸೆ ನೀಡಿದ್ದರು.ಅದರಂತೆ ಕಳೆದ ಕೆಲವು ವಾರಗಳಲ್ಲಿ ವಲಸಿಗರು ತಮ್ಮ ರಾಜ್ಯಗಳಿಗೆ ಮರಳಲು ಸೋನು ಬಸ್ ಸೌಲಭ್ಯ ಕಲ್ಪಿಸಿದ್ದರು.
ಇದನ್ನೂ ಓದಿ:ಕೋವಿಡ್-19: ಕ್ಯಾಂಪಸ್ ತೊರೆದು ಊರು ಸೇರಿ ಎಂದ ಜೆಎನ್​​ಯು
ಒಬ್ಬ ವ್ಯಕ್ತಿಗೆ ಸೋನು ನೀಡಿದ ಪ್ರತಿಕ್ರಿಯೆಯೊಂದಕ್ಕೆ ಸ್ಮೃತಿ ಇರಾನಿ ರಿಟ್ವೀಟ್ ಮಾಡಿದ್ದಾರೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಿದ್ದಕ್ಕಾಗಿ ನಟನಿಗೆ ಧನ್ಯವಾದ ಅರ್ಪಿಸಿದರು.” ಕಳೆದ 2 ದಶಕಗಳಿಂದ ಸಹೋದ್ಯೋಗಿಯಾಗಿ ಸೋನು ಸೂದ್ ಎಂಬ ನಟನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿತ್ತು. ಆದರೆ ಈ ಸಂಕಷ್ಟ ಪರಿಸ್ಥಿತಿಯಲ್ಲಿ ಅಗತ್ಯವಿರುವವರಿಗೆ ನೀವು ನೀಡಿದ ಸಹಾಯ, ತೋರಿದ ದಯೆ ನಿಮ್ಮ ಬಗ್ಗೆ ಮತ್ತಷ್ಟು ಹೆಮ್ಮ ಪಡುವಂತೆ ಮಾಡಿದೆ ಎಂದು ಸ್ಮೃತಿ ಟ್ವೀಟ್ ಮಾಡಿದ್ದಾರೆ.ತನು ವೆಡ್ಸ್ ಮನು ಮತ್ತು ಬುಲೆಟ್ ರಾಜಾ ಚಿತ್ರಗಳಲ್ಲಿ ಕಾಣಿಸಿಕೊಂಡ ನಟ, ರಾಜಕಾರಣಿ ರವಿ ಕಿಶನ್, ಸ್ಮೃತಿ ಇರಾನಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿ ಸೋನು ಅವರನ್ನು ಹೊಗಳಿದ್ದಾರೆ.ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸಿಗರಿಗೆ ಸಹಾಯ ಮಾಡಿದ ಉದಾತ್ತ ಕಾರ್ಯಕ್ಕೆ ಸೋನು ಸೂದ್​​ಗೆ ಶನಿವಾರ ಶ್ಲಾಘನೆಯ ಸುರಿಮಳೆಯೇ ಆಗಿತ್ತು. ಉತ್ತರಪ್ರದೇಶ ಸರ್ಕಾರದಿಂದ ವಿಶೇಷ ಅನುಮತಿ ಪಡೆದ ನಂತರ ವಲಸಿಗರಿಗೆ ಬಸ್​ಗಳನ್ನು ವ್ಯವಸ್ಥೆ ಮಾಡಿದರು.
ಇದನ್ನೂ ಓದಿ:ಹಿಟ್ಲರ್​​ಗೆ​ ಸೇರಿದ್ದೆನ್ನಲಾದ ಮೊಸಳೆ ವಿಧಿವಶ
ಇದಲ್ಲದೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಕಾರ್ಮಿಕರಿಗಾಗಿ ಸೋನು ಅನೇಕ ಬಸ್ ಸೇವೆಗಳನ್ನು ಸಹ ಆಯೋಜಿಸಿದ್ದಾರೆ. ಪಂಜಾಬ್‌ನಾದ್ಯಂತ ವೈದ್ಯರಿಗೆ 1500 ಪಿಪಿಇ ಕಿಟ್‌ಗಳನ್ನು ನೀಡಿದ್ದಾರೆ.ಜೋಧಾ ಅಕ್ಬರ್, ದಬಾಂಗ್, ಹ್ಯಾಪಿ ನ್ಯೂ ಇಯರ್, ಕುಂಗ್ ಫೂ ಯೋಗ ಮತ್ತು ಸಿಂಬಾ ಚಿತ್ರಗಳಲ್ಲಿ ಕಾಣಿಸಿಕೊಂಡ ಈ ನಟ ಈಗ ನಿಜ ಜೀವನದಲ್ಲೂ ಹೀರೋ ಆಗಿ ಎಲ್ಲರ ಮನ ಗೆದ್ದಿದ್ದಾರೆ.
ಅಂಥದ್ದೊಂದು ಪ್ರಯತ್ನ ಕನ್ನಡದಲ್ಲಿ ಆಗಲೇ ಆಗಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
