ಮುಂಬೈ:ಒರಾಂಗುಟನ್ ಮರಿ ಕಳ್ಳಸಾಗಣೆಯಾಗಿದ್ದು, ಪ್ರಾಣಿಗಳ ಹಕ್ಕುಗಳ ಗುಂಪು ಪೀಪಲ್ ಫಾರ್ ಎಥಿಕಲ್ ಟ್ರೀಟ್​ಮೆಂಟ್ ಆಫ್ ಅನಿಮಲ್ಸ್ (ಪೆಟಾ-ಇಂಡಿಯಾ) ಮುಂಬೈಯಲ್ಲಿ ಕಾಣೆಯಾದ ಒರಾಂಗುಟಾನ್ ಮರಿಯನ್ನು ಪತ್ತೆಹಚ್ಚಲು ಸಹಾಯ ಮಾಡಿದವರಿಗೆ ಸೋಮವಾರ ಒಂದು ಲಕ್ಷ ರೂ. ಬಹುಮಾನ ಘೋಷಿಸಿದೆ.“ಈ ಪ್ರಕರಣದ ಬಗ್ಗೆ ಮಾಹಿತಿ ಇರುವ ಯಾರಾದರೂ PETA-India ದ ತುರ್ತು ಸಹಾಯವಾಣಿ ಸಂಖ್ಯೆ +91 9820122602 ಅಥವಾ ಇಮೇಲ್:[email protected]ಗೆ ಸಂಪರ್ಕಿಸಬಹುದು. ಮಾಹಿತಿದಾರರು ಕೋರಿದಲ್ಲಿ ಅವರ ಹೆಸರು ಮತ್ತು ವಿವರವನ್ನು ಗೌಪ್ಯವಾಗಿಡಲಾಗುತ್ತದೆ. ಕೊನೆಯ ಬಾರಿ ಸಾಮಾಜಿಕ ಜಾಲತಾಣದಲ್ಲಿ ಅದನ್ನು ನೋಡಲಾಗಿದ್ದು, ಆ ಮರಿಯನ್ನು ಪತ್ತೆಹಚ್ಚಿ ರಕ್ಷಿಸಲು ಶ್ರಮಿಸುತ್ತಿದ್ದೇವೆ ಎಂದು ಪ್ರಾಣಿ ಹಕ್ಕುಗಳ ಸಂಘಟನೆ ಹೇಳಿದೆ.
ಇದನ್ನೂ ಓದಿ:ಆನ್‌ಲೈನ್‌ನಲ್ಲಿ ಬಟ್ಟೆ ಕೊಂಡವನಿಗೆ ಬಂತು ಜೀವಂತ ಹುಳುಗಳ ಬಾಕ್ಸ್‌!
ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ಪೆಟಾ ಪಶುವೈದ್ಯರು ನಡೆಸಿದ ತನಿಖೆಯ ಪ್ರಕಾರ, ಒರಾಂಗುಟಾನ್ ಕೊನೆಯ ಬಾರಿಗೆ ಮುಂಬೈನ ಅಗ್ರಿಪಾಡಾದ ಮನೆಯೊಂದರಲ್ಲಿ ಕಾಣಿಸಿಕೊಂಡಿತ್ತು. ಶಂಕಿತ ಒರಾಂಗುಟನ್ ಅನ್ನು ಅಕ್ರಮವಾಗಿ ವಶಕ್ಕೆ ವಶಪಡಿಸಿಕೊಂಡಿದ್ದಾನೆನ್ನಲಾಗಿದೆ.ಮತ್ತೊಂದೆಡೆ, ಬಾಂದ್ರಾದಲ್ಲಿರುವ ಮತ್ತೊಂದು ಕುಟುಂಬವು ಅದರ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ ಎಂದು ಆರೋಪಿಸಲಾಗಿದೆ. ಅರಣ್ಯ ಇಲಾಖೆ ನಡೆಸಿದ ತನಿಖೆಯಲ್ಲಿ ಒರಾಂಗುಟಾನ್ ಅನ್ನು ಅದರ ಮೂಲ ದೇಶದಿಂದ ಪರವಾನಗಿ ಇಲ್ಲದೆ ದೇಶಕ್ಕೆ ತರಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.ಅನಿಮಲ್ ಕ್ವಾರೆಂಟೈನ್ ಆ್ಯಂಡ್ ಸರ್ಟಿಫಿಕೇಶನ್ ಸರ್ವೀಸಸ್ ಅಥವಾ ಕಸ್ಟಮ್ಸ್ ಇಲಾಖೆಯಿಂದ ಯಾವುದೇ ಅನುಮೋದನೆ ಪಡೆಯಲಾಗಿಲ್ಲ ಎಂದು ಹೆಚ್ಚಿನ ತನಿಖೆಯಲ್ಲಿ ತಿಳಿದುಬಂದಿದೆ. ಒರಾಂಗುಟಾನ್ ಅನ್ನು ಭಾರತಕ್ಕೆ ಕರೆತಂದ ರಹಸ್ಯ ವಿಧಾನದ ಬಗ್ಗೆ ತಿಳಿದ ನಂತರ, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋಗೆ ಪೆಟಾ ದೂರು ನೀಡಿದೆ.
ಇದನ್ನೂ ಓದಿ:ಸೆಕ್ಸ್​ ಮಾಡಿ ನಿನ್ನನ್ನೇ ಮದ್ವೆಯಾಗ್ತೇನೆ ಎಂದ ಎಸ್ಐ ಸದ್ದಿಲ್ಲದೆ ಪರಾರಿ… ಇದು ಮಹಿಳಾ ಎಸ್​ಐ ದೂರು
ಇಂಥ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಆಟಿಕೆ ಅಥವಾ ಪ್ರದರ್ಶನ ವಸ್ತುವಾಗಿ ಬಳಸಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರ ಸಹಾಯ ಕೋರುತ್ತೇವೆ ಎಂದು ಪೇಟಾ ಪಶುವೈದ್ಯಕೀಯ ಸೇವೆಗಳ ವ್ಯವಸ್ಥಾಪಕಿ ಡಾ.ರಶ್ಮಿ ಗೋಖಲೆ ಹೇಳಿದರು.
ಅಂತ್ಯಕ್ರಿಯೆ ವೆಚ್ಚ 85,000 ರೂ.ಅಂತೆ…! ಖಾಸಗಿ ಅಂಬ್ಯುಲೆನ್ಸ್​​ನ ಸುಲಿಗೆ ಹಾದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 16 =
Remember me
