ನವದೆಹಲಿ:ಕೋವಿಡ್​ ನಿರ್ಬಂಧದ ಸಂದರ್ಭದಲ್ಲಿ ಬಾಡಿಗೆ ವಿಮಾನಗಳಲ್ಲಿ ರಾಜತಾಂತ್ರಿಕ ಸರಕುಗಳೊಂದಿಗೆ 30 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರಿಂದಲೇ ಹಗರಣ ಬಯಲಾಗಿ ಠಕ್ಕರು ಸಿಕ್ಕಿಬಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಕುರಿತು 2ನೇ ಎಫ್​ಐಆರ್​ ದಾಖಲಿಸಿರುವ ಎನ್​ಐಎ, ತಿರುವನಂತಪುರದ ಯುಎಇ ಕೌನ್ಸಲ್​ ಜನರಲ್​ ಕಚೇರಿಯ ಸರಕಿನೊಂದಿಗೆ 30 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರ ಬಗ್ಗೆ ನಾಲ್ವರ ವಿರುದ್ಧ ಭಯೋತ್ಪಾದನಾ ಕೃತ್ಯ ಸಂಬಂಧಿತ ಆರೋಪಗಳನ್ನು ಹೊರಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಶುಕ್ರವಾರ ವಹಿಸಿಕೊಂಡಿರುವ ಎನ್​ಐಎ, ಕಳ್ಳಸಾಗಣೆಯ ಚಿನ್ನದ ಮಾರಾಟದಿಂದ ಬರುತ್ತಿದ್ದ ಹಣವನ್ನು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಬಳಸಲಾಗುತ್ತಿತ್ತು ಎಂದು ಹೇಳಿದೆ.

ಕಳ್ಳಸಾಗಣೆಯ ಮಾಲು ಈ ಹಿಂದೆ ನಿಯಮಿತವಾದ ವಿಮಾನಗಳಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಹಾಗಾಗಿ ಅದು ಯಾರ ಗಮನಕ್ಕೂ ಬರುತ್ತಿರಲಿಲ್ಲ. ಆದರೆ, ಕೋವಿಡ್​-19 ನಿರ್ಬಂಧದ ಹಿನ್ನೆಲೆಯಲ್ಲಿ ಬಾಡಿಗೆ ವಿಮಾನಗಳಲ್ಲಿ ಅವನ್ನು ಸಾಗಿಸಲಾಗುತ್ತಿತ್ತು. ಹಾಗಾಗಿ ಇದು ತನಿಖಾ ಸಂಸ್ಥೆಯ ಗಮನಸೆಳೆಯಿತು ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಿನಲ್ಲಿ ಶನಿವಾರ ರಾತ್ರಿ ಬಂಧಿತರಾಗಿರುವ ಕೇರಳದ ಐಟಿ ಇಲಾಖೆಯ ಅಧಿಕಾರಿ ಹಾಗೂ ಯುಎಇ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್​ ಸೇರಿ ನಾಲ್ವರ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಭಯೋತ್ಪಾದನಾ ಕಾಯ್ದೆಯಡಿ, ಹಿಂಸಾ ಕೃತ್ಯಗಳ ಸಂಚು ರೂಪಿಸಿ, ಅವನ್ನು ಸಾಕಾರಗೊಳಿಸಲು ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಲ್ಲದೆ, ತನ್ಮೂಲಕ ರಾಷ್ಟ್ರದ ಆರ್ಥಿಕ ಭದ್ರತೆ ಮತ್ತು ಹಣಕಾಸು ಸ್ಥಿರತೆಗೆ ಧಕ್ಕೆಯನ್ನುಂಟು ಮಾಡುವ ಆರೋಪಗಳನ್ನೂ ಎಫ್​ಐಆರ್​ನಲ್ಲಿ ಹೊರಿಸಲಾಗಿದೆ.
https://www.vijayavani.net/rgvs-corona-virus-movie-heroine-dakkshi-guttikonda/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 11 =
Remember me
