ಕೊಚ್ಚಿ:ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದೊಂದು ಮಾಹಿತಿ ಬಹಿರಂಗವಾಗಿದ್ದು, ಆರೋಪಿಗಳು ಶಾಸಕರೊಬ್ಬರಿಗಾಗಿ ಚಿನ್ನ ಕಳ್ಳಸಾಗಣೆ ನಡೆಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಆರೋಪಿಗಳ ಪೈಕಿ ಸಂದೀಪ್​ ನಾಯರ್ ಎಂಬಾತನ ಪತ್ನಿ ಬಿ.ಎಸ್​. ಸೌಮ್ಯ ಈ ವಿಷಯನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದು ಕಸ್ಟಮ್ಸ್​ ಅಧಿಕಾರಿಗಳ ವರದಿಯಿಂದ ಬಹಿರಂಗಗೊಂಡಿದೆ.
ಕೊಜಿಕೋಡ್ ಜಿಲ್ಲೆಯ ಕೂಡುವಳ್ಳಿಯ ಶಾಸಕ ಕಾರಟ್ ರಜಾಕ್​ ಹಾಗೂ ಕೂಡುವಳ್ಳಿ ಮುನಿಸಿಪಾಲಿಟಿಯ ಕೌನ್ಸಿಲರ್ ಕಾರಟ್​ ಫೈಜಲ್ ಅವರಿಗಾಗಿ ತನ್ನ ಪತಿ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿದ್ದಾಗಿ ಹೇಳಿಕೆ ನೀಡಿದ್ದಾರೆ.
ಎಲ್​ಡಿಎಫ್​ ಬೆಂಬಲಿತ, ಪಕ್ಷೇತರ ಶಾಸಕ ಕಾರಟ್ ರಜಾಕ್​ ಹಾಗೂ ಕೌನ್ಸಿಲರ್​ ಕಾರಟ್​ ಫೈಜಲ್​ ಅವರಿಗಾಗಿ ಸಂದೀಪ್​ ಮತ್ತು ರಾಮೀಸ್ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದರು ಎಂಬುದು ಗೊತ್ತಿತ್ತು. ಅದನ್ನು ಆಕ್ಷೇಪಿಸಿದ್ದಕ್ಕೆ ಸಂದೀಪ್​ ಥಳಿಸುತ್ತಿದ್ದ ಬಗ್ಗೆಯೂ ಆತನ ಪತ್ನಿ ಸೌಮ್ಯ ಹೇಳಿಕೊಂಡಿರುವುದು ಕಸ್ಟಮ್ಸ್ ವರದಿಯಲ್ಲಿ ಉಲ್ಲೇಖವಾಗಿದೆ.
ಕಾರ್ಗೋನಲ್ಲಿ ಬಂದ ಬ್ಯಾಗೇಜ್​ ವಿಲೇವಾರಿ ಸಂದರ್ಭ ಸ್ವಪ್ನ ಸುರೇಶ್​ ಹಾಗೂ ಸರಿತ್ ನೆರವು ಸಿಗುತ್ತಿದ್ದ ಬಗ್ಗೆಯೂ ಸಂದೀಪ್ ಹೇಳಿಕೊಂಡಿದ್ದ ಎಂಬುದಾಗಿ ಸೌಮ್ಯ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 4 =
Remember me
