ಬೆಂಗಳೂರು:ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕನಿಗೆ ಆಘಾತಕಾರಿ ಅನುಭವವಾಗಿದೆ. ಪ್ಯಾಂಟ್​ ಒಳಗೆ ಏರಿದ ಹಾವು ಆತ ಅದನ್ನು ಹಿಡಿದು ಎಸೆಯುವಷ್ಟರಲ್ಲಿ ಖಾಸಗಿ ಅಂಗಾಂಗವನ್ನು ಕಚ್ಚಿಹಿಡಿದಿದೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ 56ರ ವ್ಯಕ್ತಿಗೆ ಮುಖ ಗುರುತುಸಿಗದಂತೆ ಪಂಚ್​ಕೊಟ್ಟ ತಾಯಿ!
ಮಾಸ್ಟರ್ ಫಿಶರ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಟ್ರೆಕ್ಕಿಂಗ್ ಹೋಗುತ್ತಿದ್ದ ಯುವಕನ ಪ್ಯಾಂಟ್‌ಗೆ ಹಾವೊಂದು ನುಗ್ಗಿದೆ. ಇದರಿಂದ ಆ ವ್ಯಕ್ತಿ ಆಘಾತಕ್ಕೊಳಗಾಗುತ್ತಾನೆ. ಹೇಗೋ ಕಷ್ಟ ಪಟ್ಟು ಹಾವನ್ನು ಹೊರ ತೆಗೆದಿದ್ದಾನೆ. ಆದರೆ ತಕ್ಷಣ, ಅದು ಆ ವ್ಯಕ್ತಿಯ ಖಾಸಗಿ ಭಾಗವನ್ನು ಕಚ್ಚಿ ಹಿಡಿದಿದೆ.
ಯುವಕ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಹಾವು ಸ್ವಲ್ಪ ಹೊತ್ತು ಹಾಗೆಯೇ ಕಚ್ಚಿ ಹಿಡಿದಿದೆ. ನೋವು ತಾಳಲಾರದೆ ಹೇಗೋ ಹಾವನ್ನು ಬಿಡಿಸಿಕೊಂಡು ಕಡೆಗೆ ಆ ಹಾವನ್ನು ದೂರ ಎಸೆಯುತ್ತಾನೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರಗಳಿಲ್ಲ. ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಟ್ರೆಂಡ್ ಆಗಿದೆ.
ಇನ್ನು ವಿಡಿಯೋ ನೋಡಿದ ನೆಟ್ಟಿಗರು ಭಯಾನಕ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾವು ಕಚ್ಚಿಸಿಕೊಂಡವರು ಬದುಕಿದ್ದಾರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು.. ಅಬ್ಬಾಬ್ಬಾ ಬ್ರೋ.. ಎಂದು ತಮಾಷೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
