ಪಟ್ನಾ:ಹಾವಿನ ದ್ವೇಷ 12 ವರ್ಷ ನನ್ನ ರೋಷ 100 ವರ್ಷ ಎಂಬ ಪ್ರಸಿದ್ದ ವಾಕ್ಯ ನಮ್ಮೆಲರಿಗೂ ತಿಳಿದಿದೆ. ಇದೀಗ ಈ ಸಾಲುಗಳಿಗೆ ಜೀವಂತ ಸಾಕ್ಷಿ ಎಂಬಂತೆ ವ್ಯಕ್ತಿಯೋರ್ವನಿಗೆ ಹಾವು ಕಚ್ಚಿದೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಆ ವ್ಯಕ್ತಿ ಹಾವನ್ನು ಕಚ್ಚಿದ್ದು, ಇಬ್ಬರ ಕಚ್ಚಾಟದಲ್ಲಿ ಯಾರು ಗೆದ್ದರು ಎಂದು ನಿಮಗೆ ಊಹಿಸಲೂ ಸಾಧ್ಯವಿಲ್ಲದಿರುವ ಘಟನೆ ಒಂದು ಬಿಹಾರದ ನವಾಡದ ರಾಜೌಲಿ ಪ್ರದೇಶದಲ್ಲಿ ನಡೆದಿದೆ.
ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಜಾರ್ಖಂಡ್​ ಮೂಲದ ಕಾರ್ಮಿಕ ಸಂತೋಷ್​ ಲೋಹರ್​ಎಂಬಾತ ಹಾವನ್ನು ಕಚಗಚಿ ಸೇಡು ತೀರಿಸಿಕೊಂಡಿದ್ದು, ಈ ಘಟನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಬಳಿಕ ಆತ ನೀಡಿದ ಸ್ಪಷ್ಟನೆ ಕೇಳಿ ಅಲ್ಲಿನ ಅಧಿಕಾರಿಗಳು ಶಾಕ್​ಗೆ ಒಳಗಾಗಿದ್ದು, ಹೀಗೂ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಇದು ಹೇಗಿದೆ ಎಂದರೆ ಮಡಿಕೆಯೊಂದು…; ಸೂರ್ಯಕುಮಾರ್​ ಹಿಡಿದ ಕ್ಯಾಚ್ಅನ್ನು ಪ್ರಶ್ನಿಸಿದವರಿಗೆ ಖಡಕ್​ ಟಾಂಗ್​ ಕೊಟ್ಟ ಗಾವಸ್ಕರ್
ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ಎಂದಿನಂತೆ ಕೆಲಸ ಮುಗಿಸಿ ಸಂತೋಷ್​ ತನ್ನ ಕ್ಯಾಂಪ್​ನಲ್ಲಿ ಮಲಗಿದ್ದ. ರಾತ್ರಿ ಒಂದು ಹೊತ್ತಿನಲ್ಲಿ ವಿಷಕಾರಿ ಹಾವೊಂದು ಆತನಿಗೆ ಕಚ್ಚಿದ್ದು, ಇದರಿಂದ ಎಚ್ಚರಗೊಂಡ ಆತ ಕೂಗಿಕೊಳ್ಳುವ ಬದಲು ಸಿಟ್ಟಿನಿಂದ ಅದಕ್ಕೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದು, ಬಳಿಕ ಮೂರು ಬಾರಿ ಕಚ್ಚಿದ್ದಾನೆ. ಆ ವೇಳೆಗಾಗಲೇ ಹಾವು ಮೃತಪಟ್ಟಿದೆ.
ಆ ಬಳಿಕ ಶಬ್ದ ಆಗುತ್ತಿರುವುದನ್ನು ಕಂಡು ಕ್ಯಾಂಪ್​ನಲ್ಲಿದ್ದ ಇತರರು ನಿದ್ರೆಯಿಂದ ಎಚ್ಚರಗೊಂಡಿದ್ದು, ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಆತನ ಬಳಿ ಕೇಳಿದಾಗ ನನ್ನ ಹಳ್ಳಿಯಲ್ಲಿ ನಿಮಗೆ ಹಾವು ಕಚ್ಚಿದರೆ, ಆ ವಿಷವನ್ನು ತೆಗೆದುಹಾಕಲು ನೀವು ಅದಕ್ಕೆ ಎರಡು ಬಾರಿ ಕಚ್ಚಬೇಕು ಎಂಬ ನಂಬಿಕೆ ಇದೆ. ಹೀಗಾಗಿ, ನಾನು ಆ ಹಾವಿಗೆ ಕಚ್ಚಿದೆ ಎಂದು ಹೇಳಿದ್ದಾನೆ. ಕಾರ್ಮಿಕರ ಸುರಕ್ಷೆತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
