ಜೈಪುರ:ಮೊದಲ ಬಾರಿ ಹಾವು ಕಡಿದಾಗ ಚಿಕಿತ್ಸೆ ಪಡೆದು ಗುಣವಾಗಿದ್ದ ವ್ಯಕ್ತಿಯೊಬ್ಬ ಮತ್ತೆ ಹಾವು ಕಡಿತದಿಂದಲೇ ದುರಂತ ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಪೊಖ್ರಾನ್​ನಲ್ಲಿ ನಡೆದಿದೆ.
40 ವರ್ಷದ ಜಾಸಬ್​ ಖಾನ್ ಮೃತ ದುರ್ದೈವಿ. ಜಾಸಬ್​ ಅವರು ಜೂನ್​ 20ರಂದು ಹಾವು ಕಡಿತಕ್ಕೆ ಒಳಗಾಗಿದ್ದರು. ಪೊಖ್ರಾನ್​ನಲ್ಲಿರುವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ನಾಲ್ಕು ದಿನಗಳ ಬಳಿಕ ಗುಣವಾಗಿದ್ದರು. ಆದರೆ, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಮರಳಿದ ಮರು ದಿನ (ಜೂನ್​ 26) ಮತ್ತೆ ಜಾಸಬ್​ಗೆ ಹಾವು ಕಡಿದಿದೆ. ಜೋಧ್​ಪುರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೇ ಜಾಸಬ್​ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಇಲೆಕ್ಟ್ರಿಕಲ್ ವಿಮಾನ ಸಂಶೋಧನೆ ತಂಡದಲ್ಲಿ ಕನ್ನಡತಿ: ಪ್ರಾಯೋಗಿಕ ಹಾರಾಟ ನಡೆಸಲು ಸಿದ್ಧತೆ; 2025ರೊಳಗೆ ಬಳಕೆಗೆ ಲಭ್ಯ ಸಾಧ್ಯತೆ
ಜಾಸಬ್​ ಅವರು ಜೋಧಪುರ್​ ಜಿಲ್ಲೆಯ ಮೆಹ್ರಾಂಗಢ ಗ್ರಾಮದ ನಿವಾಸಿಯಾಗಿದ್ದರು. ಎರಡೂ ಬಾರಿಯೂ ಜಾಸಬ್​ ಅವರಿಗೆ ಬಂದಿ ಎಂದು ಕರೆಯಲ್ಪಡುವ ಮಂಡಲದ ಹಾವಿನ ಉಪ ಜಾತಿಯ ಹಾವು ಕಚ್ಚಿದೆ ಎಂದು ತಿಳಿದುಬಂದಿದೆ. ಈ ಬಂದಿ ಹಾವು ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಈ ದುರಂತ ಮತ್ತು ವಿಲಕ್ಷಣ ಘಟನೆಯನ್ನು ಇದೀಗ ಭನಿಯಾನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೂನ್​ 20ರಂದು ಹಾವು, ಜಾಸಬ್​ ಅವರ ಪಾದಕ್ಕೆ ಕಚ್ಚಿತು. ಬಳಿಕ ಜಾಸಬ್​ ಪೊಖ್ರಾನ್​ನಲ್ಲಿರುವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಜೂನ್​ 25ರಂದು ಮನೆಗೆ ಮರಳಿದ್ದರು. ಆದರೆ, ಮಾರನೇ ದಿನ ಅಂದರೆ ಜೂನ್​ 26ರಂದು ಮತ್ತೊಂದು ಕಾಲಿಗೆ ಹಾವು ಕಚ್ಚಿತು.
ಮೊದಲ ಬಾರಿಯ ಕಡಿತದಿಂದ ಗುಣವಾಗುತ್ತಿರುವ ಸಮಯದಲ್ಲೇ ಮತ್ತೆ ಹಾವು ಕಡಿದಿದ್ದರಿಂದ ಎರಡನೇ ಬಾರಿ ಅವರನ್ನು ಉಳಿಸಿಕೊಳ್ಳಲೂ ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಹಿಂದೂಗಳಿಂದ ಸರಕು ಖರೀದಿಸದಂತೆ ಮುಸ್ಲಿಂ ವ್ಯಕ್ತಿಯ ಭಾಷಣ; ವಿಡಿಯೋ ಅಸಲಿಯತ್ತನ್ನು ಬಯಲು ಮಾಡಿದ ಪೊಲೀಸರು
ಜಾಸಬ್​ ಅವರು ತಾಯಿ, ಪತ್ನಿ, ನಾಲ್ವರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗುವನ್ನು ಅಗಲಿದ್ದಾರೆ. ಜಸಾಬ್ ಸಾವಿಗೆ ಕಾರಣವಾದ ಹಾವನ್ನು ಆತನ ಕುಟುಂಬಸ್ಥರು ಹೊಡೆದು ಕೊಂದು ಹಾಕಿದ್ದಾರೆ.(ಏಜೆನ್ಸೀಸ್​)
ವಾಹನ ನೋಂದಣಿ ದಂಧೆಗೆ ತನಿಖೆ ಬಿಸಿ, ಹೊಸಕೋಟೆ ಯಾರ್ಡ್​ಗೆ ಖಾಕಿ ಪಡೆ ಲಗ್ಗೆ

ಆಸ್ತಿ ವಿವರ ಸಲ್ಲಿಸಲು ನಿರ್ಲಕ್ಷ್ಯ: ಲೋಕಾಯುಕ್ತಕ್ಕೆ ಮಾಹಿತಿ ನೀಡಲು ಜನಪ್ರತಿನಿಧಿಗಳ ಹಿಂದೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
