ನವದೆಹಲಿ:ವೈದ್ಯರೊಬ್ಬರು ಮಹಿಳೆಯ ಬಾಯಿಯಿಂದ ಬೃಹತ್ ಉದ್ದದ ಹಾವನ್ನು ಹೊರತೆಗೆಯುತ್ತಿರುವ ವಿಡಿಯೋ ವೈರಲ್​​​ ಆಗಿದೆ. ಹಾವು  ಬಾಯಿಯನ್ನು ಹೇಗೆ ಪ್ರವೇಶಿಸಿದೆ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ವಿಡಿಯೋದಲ್ಲಿ ಏನಿದೆ?:ಮಹಿಳೆಯ ದೇಹಕ್ಕೆ ನುಗ್ಗಿದ ಹಾವನ್ನು ಮಹಿಳಾ ವೈದ್ಯೆ ಹಾಗೂ ನರ್ಸ್ ಹೊರತೆಗೆಯುತ್ತಿದ್ದಾರೆ. ಉದ್ದನೆಯ ಕೊಳವೆಯ ಸಹಾಯದಿಂದ ಹಾವನ್ನು ಹೊರತೆಗೆದಿದ್ದಾರೆ. ಇದರಿಂದ ಪಕ್ಕದಲ್ಲಿದ್ದ ನರ್ಸ್‌ಗೆ ಭಯ ಪಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
Another fear is unlockedpic.twitter.com/ykNg8wKOZl
— Insane Reality Leaks (@InsaneRealitys)October 7, 2023

ಹಾವು ಒಂದು ಮೀಟರ್ ಉದ್ದವಿದ್ದು, ಅದರ ದೇಹವನ್ನು ಪ್ರವೇಶಿಸಿದ ಮಹಿಳೆ ರಷ್ಯಾದ ಡಾಗೆಸ್ತಾನ್ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಮಹಿಳೆ ತನ್ನ ಹಿತ್ತಲಿನಲ್ಲಿ ಮಲಗಿದ್ದಾಗ ಹಾವು ಆಕೆಯ ದೇಹವನ್ನು ಪ್ರವೇಶಿಸಿದೆ ಎನ್ನಲಾಗಿದೆ.
ಮಹಿಳೆಗೆ ಬಾಯಿ ತೆರೆದು ಮಲಗುವ ಅಭ್ಯಾಸವಿದೆ. ಅದರಿಂದಾಗಿ ಹಾವು ಅವಳ ಬಾಯಿಗೆ ಹರಿದಾಡಿತು. ಹಾವು ಆಕೆಯ ದೇಹವನ್ನು ಪ್ರವೇಶಿಸಿದ ನಂತರ ಮಹಿಳೆಯ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮೊದಲು ಮಹಿಳೆಗೆ ಅರಿವಳಿಕೆ ನೀಡಿ ನಂತರ ಶಸ್ತ್ರಚಿಕಿತ್ಸೆ ನಡೆಸಿದರು. ಆದರೆ, ವೈರಲ್ ಆಗುತ್ತಿರುವ ಈ ವಿಡಿಯೋ ಹಳೆಯದಾದರೂ ಮತ್ತೆ ವೈರಲ್ ಆಗುತ್ತಿದೆ.
VIDEO | ಟ್ರಾನ್ಸ್‌ಜೆಂಡರ್‌ ನಡೆಸುತ್ತಿರುವ ಕೆಫೆ..ಇಲ್ಲಿನ ವಿಶೇಷತೆ ಏನು ಗೊತ್ತಾ?

Sign in to your account
Please enter an answer in digits:8 + 18 =
Remember me
