ಕೊಲ್ಲಂ:ಹಾವಿನಿಂದ ಕಚ್ಚಿಸಿ ಪತ್ನಿ ಕೊಲೆಗೈದ ಪ್ರಕರಣ ಕೇರಳದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಉತ್ತರಾ ಪತಿ ಸೂರಜ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಹಾವಿಗೆ ತಯಾರಿ ನೀಡಿದ್ದ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾನೆ.
ಇದನ್ನೂ ಓದಿ:ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!
ಪತ್ನಿ ಉತ್ತರಾಳನ್ನು ಹತ್ಯೆಗೈಯ್ಯುವ ಮುನ್ನ ಸೂರಜ್​, ಬರೋಬ್ಬರಿ 11 ದಿನ ಹಾವನ್ನು ಬಾಟಲ್​ ಒಂದರಲ್ಲಿ ಕೂಡಿಟ್ಟು ಆಹಾರ ನೀಡದೇ ಹಿಂಸಿಸಿ ಚೆನ್ನಾಗಿ ಹಸಿಯುವಂತೆ ಮಾಡಿದ್ದನಂತೆ. ಏಪ್ರಿಲ್​ 24ರಿಂದ ಮೇ 6ರವರೆಗೂ ಹಾವನ್ನು ಬಾಟಲ್​ನಲ್ಲೇ ಇಟ್ಟಿದೆ ಎಂದು ಸೂರಜ್​ ಹೇಳಿದ್ದಾನೆ.
ಉತ್ತರ ದೇಹದ ಮೇಲೆ ಎಸೆಯುವ ಮುನ್ನ ಹಾವು ಸೂರಜ್​ನತ್ತ ಹಿಶ್​ ಎಂದು ಜೋರಾಗಿ ಶಬ್ದ ಮಾಡಿತ್ತಂತೆ. ಅದನ್ನು ಕೇಳಿ ತುಂಬಾ ಭಯವಾಯಿತು. ಮೇ 6ರ ಬೆಳಗ್ಗೆ 12ರಿಂದ 12:30ರ ಸಮಯದಲ್ಲಿ ಘಟನೆ ನಡೆಯಿತು. ಅದಕ್ಕೂ ಮುನ್ನ ಮಂಡಲದ ಹಾವನ್ನು ತಡರಾತ್ರಿ ಉತ್ತರ ಮೇಲೆ ಎಸೆದಿದ್ದೆ. ಆದರೆ, ಅದರಿಂದ ಏನು ಪ್ರಯೋಜನ ಆಗಲಿಲ್ಲ ಎಂದು ಆರೋಪಿ ಸೂರಜ್​ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ:ಉತ್ತರಾ ಮರ್ಡರ್ ಕೇಸ್​: ಹಾವು ಕಚ್ಚಿಸಿ ಕೊಲೆ ಮಾಡಿದ್ದೇಕೆಂದು ಬಾಯ್ಬಿಟ್ಟ ಪತಿ
ಇನ್ನು ಪ್ರಕರಣದಲ್ಲಿ ಸೂರಜ್​ ತಾಯಿ ರೇಣುಕಾ ಹಾಗೂ ಸಹೋದರಿ ಸೂರ್ಯಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರೋ ತನಿಖಾಧಿಕಾರಿ, ಉತ್ತರಾಳನ್ನು ಕೊಲೆ ಮಾಡುವ ಬಗ್ಗೆ ಸೂರಜ್​ ಕುಟುಂಬಕ್ಕೆ ತಿಳಿದಿರಲಿಲ್ಲ. ಆದಾಗ್ಯೂ ಸೂರಜ್​ ಅನೇಕ ಬಾರಿ ಮನೆಗೆ ಹಾವನ್ನು ತಂದಿದ್ದ. ಆಕೆಯ ಆಭರಣಗಳನ್ನು ಎಲ್ಲಿ ಹೂತಿಟ್ಟಿದ್ದ ಎಂಬುದನ್ನು ಪತಿ ಸುರೇಂದ್ರನ್​ ಕೆ ಪಂಚಿಕರ್​ ರೇಣುಕಾರಿಗೆ ತಿಳಿಸಿದ್ದರಂತೆ. ಸೂರ್ಯ ತಮ್ಮ ಸಹೋದರನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!
ಸೂರಜ್​ ತಂದೆಯನ್ನು ವಶಕ್ಕೆ ಪಡೆದಿದ್ದು, ಅವರನ್ನು ವಿವಿಧ ಪ್ರದೇಶಗಳಿಗೆ ಕರೆದೊಯ್ದು ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ.(ಏಜೆನ್ಸೀಸ್​)
5 ತಿಂಗಳು ಸಂಚು ರೂಪಿಸಿದ, ಹಾವಿನಿಂದ 2 ಬಾರಿ ಕಚ್ಚಿಸಿ ಪತ್ನಿಯ ಕೊಂದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 4 =
Remember me
