ಮುಂಬೈ:ನಟಿ ಸ್ನೇಹಲ್ ರೈ ತಮಗಿಂತ 21 ವರ್ಷದ ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿರುವುದಾಗಿ ಹೇಳಿ ಸುದ್ದಿಯಾಗಿದ್ದರು. ಆದರೆ ಇದೀಗ ಭೀಕರವಾದ ರಸ್ತೆ ಅಪಘಾತದಿಂದ ಪಾರಾಗಿ ಬಂದಿರುವ ಕುರಿತಾಗಿ ಸೋಶಿಯಲ್​​ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.

ಮುಂಬೈ-ಪುಣೆ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರವಾದ ಕಾರು ಅಪಘಾತದಿಂದ ನಟಿ ಸ್ನೇಹಲ್ ರೈ ಬದುಕುಳಿದಿದ್ದಾರೆ. ಈ ಕುರಿತಾಗಿ ಸೋಶಿಯಲ್​ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.

ಕಾರು ನಿನ್ನೆ ಅಪಘಾತಕ್ಕೀಡಾಗಿದೆ. ಮುಂಬೈ-ಪುಣೆ ಹೈವೇನಲ್ಲಿ ಈ ಘಟನೆ ನಡೆದಿದೆ. ಸ್ನೇಹಲ್ ಪುಣೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೆದ್ದಾರಿ ಬಳಿ ಈ ದುರ್ಘಟನೆ ನಡೆದಿದೆ. ಮುಂಬೈ ಮೂಲಕ ಪಾಸ್ ಆಗುವಾಗ ಟ್ರಕ್ ಒಂದು ನಟಿಯ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್ ಸ್ನೇಹಲ್ ಹಾಗೂ ಅವರ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಟಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಯಾರೂ ಆತಂಕಗೊಳ್ಳಬೇಡಿ, ನಾನು ಆರಾಮಾಗಿದ್ದೇನೆ. ಅಪಘಾತ ಸಂಭವಿಸಿದಾಗ ಹೆದರಿಕೊಂಡಿದ್ದೆ. ಇನ್ನು ಕೆಲವು ದಿನಗಳ ತನಕ ಟ್ಯಾಕ್ಸಿ ಜಿಂದಾಬಾದ್ ಎಂದು ಬರೆದುಕೊಂಡಿದ್ದಾರೆ. ಈ ನಡುವೆಯೇ, ಸ್ನೇಹಲ್​, ಟ್ರಕ್ ಮಾಲೀಕರನ್ನು ನಷ್ಟ ಪರಿಹಾರ ಕೊಡುವಂತೆ ಕೇಳಿದ್ದರು. ಆದರೆ ಟ್ರಕ್​ ಚಾಲಕ ನಟಿಯನ್ನು ಬೆದರಿಸಿದ್ದಲ್ಲದೆ ಪರಿಹಾರ ಕೊಡಲು ನಿರಾಕರಿಸಿದ್ದಾನೆ ಹಾಗೂ ಅಪಘಾತ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸ್ನೇಹಲ್ ರೈ ಮಾತನಾಡಿ, ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿದ್ದೇನೆ. ನಟಿಯಾಗಿ ತಾನು ಮಾಧವೇಂದ್ರ ಹಾಗೂ ಅವರ ಕುಟುಂಬದಿಂದ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದು ಸ್ನೇಹಲ್ ರೈ ಬಹಿರಂಗಪಡಿಸಿದ್ದಾರೆ.
10 ವರ್ಷ ಹಿಂದೆಯೇ ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + two =
Remember me
