ಮುಂಬೈ:ಮುಂಬೈನಲ್ಲಿ ಅಪಹರಣಕ್ಕೆ ಒಳಗಾದ 6 ವರ್ಷದ ಬಾಲಕನೊಬ್ಬನನ್ನು ಕೇವಲ 90 ನಿಮಿಷಗಳಲ್ಲಿ ಪತ್ತೆ ಮಾಡಲಾಗಿದೆ. ಈ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಲಿಯೋ…
ಮುಂಬೈನ ಅಂಧೇರಿ (ಪೂರ್ವ) ಪ್ರದೇಶದ ಅಶೋಕ್ ನಗರ ಕೊಳೆಗೇರಿಯಲ್ಲಿ ತನ್ನ ಮನೆಯಿಂದ 500 ಮೀಟರ್ ದೂರದಲ್ಲಿ ಅಪಹರಣಕ್ಕೊಳಗಾದ ಬಾಲಕನನ್ನು ಲಿಯೋ ಎಂಬ ಹೆಸರಿನ ಈ ಡಾಬರ್‌ಮ್ಯಾನ್ ನಾಯಿ ಪತ್ತೆ ಮಾಡಿದೆ.
6 ವರ್ಷದ ಈ ಮಗು ನವೆಂಬರ್ 23 ರಂದು ತನ್ನ ಮನೆಯ ಬಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದೆ. ಮಗು ಬಹಳ ಹೊತ್ತಿನವರೆಗೆ ಮನೆಗೆ ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಆತಂಕಗೊಂಡು ಹುಡುಕಾಟ ಪ್ರಾರಂಭಿಸಿದ್ದಾರೆ, ಆದರೆ, ಮಗು ದೊರೆಯದಿದ್ದಾಗ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಬಾಲಕ ಆಟವಾಡಲು ಹೊರಡುವ ಮುನ್ನ ಬಟ್ಟೆ ಬದಲಾಯಿಸಿದ್ದ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಪೋಲೀಸರು ಶ್ವಾನ ಲಿಯೋನನ್ನು ಕರೆತಂದು, ಹುಡುಗನ ಟೀ-ಶರ್ಟ್ ಮೂಸಲು ಅದಕ್ಕೆ ನೀಡಿದ್ದಾರೆ.
ಹುಡುಗನ ಟೀ ಶರ್ಟ್ ಮೂಸಿದ ತಕ್ಷಣವೇ ಲಿಯೋ ತನ್ನ ಬೇಟೆ ಪ್ರಾರಂಭಿಸಿದೆ. ಹತ್ತಿರದ ಕಟ್ಟಡದಲ್ಲಿ ಹುಡುಗ ಇರುವುದನ್ನು ಪತ್ತೆಹಚ್ಚಿದೆ. ಅಪಹರಣಕಾರರು ಯಾರು ಎಂಬುದು ತಿಳಿದುಬಂದಿಲ್ಲ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ.
ರಷ್ಯಾದ ಮಹಿಳೆಯರು ಕನಿಷ್ಠ 8 ಮಕ್ಕಳನ್ನು ಹೊಂದಬೇಕು… ಹೀಗೆಂದು ಕರೆ ನೀಡಿದ್ದು ಯಾರು ಗೊತ್ತೆ?

ಡೈರಿ ಪುಟಗಳಿಂದಲೇ ಪ್ಲೇಯಿಂಗ್ ಕಾರ್ಡ್‌ ತಯಾರಿಸಿ ಟೈಮ್​ ಪಾಸ್ ಮಾಡಿದ ಕಾರ್ಮಿಕರು

ಭಾರತದ ಮೊದಲ ಫೀಲ್ಡ್ ಮಾರ್ಷಲ್ ಕುರಿತ ‘ಸ್ಯಾಮ್ ಬಹದ್ದೂರ್’ ಚಿತ್ರ ಬಿಡುಗಡೆ; ಕಣ್ಣೀರು ಹಾಕಿದ ಪುತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
