ಶ್ರೀನಗರ:ಈಗ ಎಲ್ಲೆಡೆ ಚಳಿ ಆರಂಭವಾಗಿದೆ. ದೇಶದ ದಕ್ಷಿಣ ಭಾಗದಲ್ಲೇ ನಡುಕ ಹುಟ್ಟಿಸುವಷ್ಟು ಚಳಿ ಇದೆ. ಹೀಗಿರುವಾಗ ಉತ್ತರ ಭಾರತದಲ್ಲಿ ಅದರಲ್ಲೂ ದೇಶದ ತುತ್ತತುದಿಯಲ್ಲಿರುವ ಶ್ರೀನಗರದಲ್ಲಿ ಹೇಗಿರಬಹುದು ಎಂದು ಕೇಳುವ ಹಾಗಿಲ್ಲ. ಏಕೆಂದರೆ ಈಗೇನಾದರೂ ನೀವು ಅಲ್ಲಿಗೆ ಹೋದರೆ ಮರಗಟ್ಟಿ ಹೋಗುತ್ತೀರಿ!.
ಹೌದು.. ಶ್ರೀನಗರದಲ್ಲಿ ಈ ಸೀಸನ್​ನಲ್ಲಿ ಇದುವರೆಗಿನ ಅತಿ ಕಡಿಮೆ ಎಂಬಷ್ಟು ಕನಿಷ್ಠ ತಾಪಮಾನ ಶನಿವಾರ ವರದಿಯಾಗಿದೆ. ಅಂದರೆ ಶನಿವಾರದ ವರದಿ ಪ್ರಕಾರ ಶ್ರೀನಗರದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್​ 6.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಡಿ. 17ರಂದು ಮೈನಸ್​ 6.4 ಡಿ.ಸೆ. ಇದ್ದ ಕನಿಷ್ಠ ತಾಪಮಾನ ಡಿ. 18ರಂದು ಮೈನಸ್​ 6.6ಕ್ಕೆ ಇಳಿದಿದೆ. ಇನ್ನು 2019ರ ಡಿ. 30 ಮತ್ತು 2016ರ ಡಿ. 21ರಂದು ಮೈನಸ್ 6.5 ಡಿ. ಸೆ. ಕನಿಷ್ಠ ತಾಪಮಾನ ವರದಿಯಾಗಿತ್ತು.
ಇದನ್ನೂ ಓದಿ:ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!
ಶ್ರೀನಗರದಲ್ಲಿ ಸಾಮಾನ್ಯವಾಗಿ ಡಿ. 21ರಿಂದ ಆರಂಭವಾಗಿ 40 ದಿನಗಳವರೆಗೆ ತೀವ್ರ ಚಳಿ ಇರುತ್ತದೆ. ಆದರೆ ಈಗಲೇ ಮೈನಸ್​ 6.6 ಡಿ.ಸೆ. ಕನಿಷ್ಠ ತಾಪಮಾನ ವರದಿ ಆಗಿರುವುದು, ಸದ್ಯದಲ್ಲೇ ಅದು ಇನ್ನೂ ಹೆಚ್ಚಿನ ಮಟ್ಟಕ್ಕೆ ಕುಸಿಯುವ ಸೂಚನೆ ನೀಡಿದೆ. (ಏಜೆನ್ಸೀಸ್​)
ಕರೊನಾ ವಾಕ್ಸಿನ್ ಹಾಕಿಸಿಕೊಂಡ ನಂತರ ಈಕೆಯ ಧ್ವನಿ ಪುರುಷರ ಧ್ವನಿಯಂತಾಯ್ತು!

ನೀವು ಕಾಂಗ್ರೆಸ್​ ಬಿಡೋದು ಯಾವಾಗ? ನಾನು ಕಾತರದಿಂದ ಕಾಯುತ್ತಿರುವೆ… ಎಂದ ಎಚ್​ಡಿಕೆ

ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಜೋಡಿ: ಹೊಸಬಾಳು ಆರಂಭಿಸುವ ಮುನ್ನವೇ ದುರಂತ ಸಾವು!

ಈ ಊರಿನಂಚಿನಲ್ಲೇ ಬೀಡುಬಿಟ್ಟಿವೆ 30ಕ್ಕೂ ಹೆಚ್ಚು ಕಾಡಾನೆಗಳು! ಹೊರ ಬರದಂತೆ ಗ್ರಾಮಸ್ಥರಿಗೆ ನಿರ್ಬಂಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 5 =
Remember me
