ನವದೆಹಲಿ:ಲಾಕ್​ಡೌನ್​ 4.0 ಸಡಿಲಿಕೆ ಮಾಡಿದ್ದರೂ, ಯಾವುದೇ ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ. ಸಾಮಾಜಿಕ ಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ.ಆದರೆ ಉತ್ತರಪ್ರದೇಶದ ಅಲಿಗಢ್​​ನಲ್ಲಿ 150 ಮಂದಿ ಗೋವಿನ ಅಂತ್ಯಕ್ರಿಯೆಗಾಗಿ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇವರೆಲ್ಲರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಅಲಿಗಢ್​ನ ಮೆಮ್ಡಿ ಗ್ರಾಮದಲ್ಲಿ ಹಸುವೊಂದು ಮೃತಪಟ್ಟಿತ್ತು. ಆ ಹಸುವಿನ ಮೃತದೇಹವನ್ನು ಅಂತ್ಯಕ್ರಿಯೆ ಮಾಡುವ ಮೊದಲು ಅದ್ದೂರಿಯಾಗಿ ಮೆರವಣಿಗೆ ಮಾಡಲಾಗಿದೆ. ಸುಮಾರು 150 ಮಂದಿ ಈ ಮೆರವಣಿಗೆಯಲ್ಲಿ ಗುಂಪುಗೂಡಿದ್ದರು. ಸಾಮಾಜಿಕ ಅಂತರ ನಿಯಮಗಳ ಪಾಲನೆ ಮಾಡಿರಲಿಲ್ಲ.
ಇದನ್ನೂ ಓದಿ:Video: ಹೃದಯಾಘಾತಕ್ಕೆ ಒಳಗಾಗಿದ್ದ ಬೀದಿನಾಯಿಗೆ ಮರುಜೀವ ನೀಡಿದ ಯುವಕ
ಹಸುವಿನ ಮೃತದೇಹ ಮೆರವಣಿಗೆ, ಅಂತ್ಯಕ್ರಿಯೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಈ ವಿಡಿಯೋ ನೋಡಿದ ಪೊಲೀಸರು 150 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್​ 188 ( ಆದೇಶ ಉಲ್ಲಂಘನೆ), ಸೆಕ್ಷನ್​ 269 ( ಸೋಂಕು ಹರಡುವಂತಹ ಕಾರ್ಯ) ಮತ್ತು 1897ರ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇದು ಗುರುವಾರ ಬೆಳಗ್ಗೆ ನಡೆದ ಘಟನೆ. ಮೆಮ್ಡಿ ಗ್ರಾಮದಲ್ಲಿದ್ದ ಈ ಹಸು ಯಾರ ಮನೆಯದ್ದೂ ಆಗಿರಲಿಲ್ಲ. ಅಲ್ಲಿ ಇಲ್ಲಿ ಓಡಾಡಿಕೊಂಡಿತ್ತು. ಕೆಲವು ದಿನಗಳಿಂದಲೂ ಅನಾರೋಗ್ಯಕ್ಕೀಡಾಗಿತ್ತು. ಗುರುವಾರ ಕಿರಾಣಿ ಅಂಗಡಿಯೊಂದರ ಬಳಿ ಮೃತಪಟ್ಟಿತ್ತು. ಅದನ್ನು ನೋಡಿದ ಸ್ಥಳೀಯರು ಸಕಲ ಸಂಪ್ರದಾಯಗಳೊಂದಿಗೆ ಅದಕ್ಕೆ ಅಂತಿಮ ವಿಧಿವಿಧಾನ ನೆರವೇರಿಸಲು ನಿರ್ಧರಿಸಿದರು.
ಇದನ್ನೂ ಓದಿ:ತಲೆ ಮೇಲೆ ಹಲಸಿನ ಹಣ್ಣು ಬಿತ್ತು; ಆಸ್ಪತ್ರೆಗೆ ಹೋದ್ರೆ ಕರೊನಾ ಪಾಸಿಟಿವ್ ಬಂತು!
ಹಿಂದುಗಳು ಗೋವನ್ನು ದೇವರಂತೆ ಪೂಜಿಸುತ್ತಾರೆ. ಅದಕ್ಕೆ ಸಂಪ್ರದಾಯಬದ್ಧವಾಗಿ ಅಂತ್ಯಕ್ರಿಯೆ ಮಾಡುವುದು ಸಾಮಾನ್ಯ. ಹಾಗೇ ಇಲ್ಲಿನ ಜನರೂ ಸಹ ಹಸುವಿನ ಮೃತದೇಹದ ಮೆರವಣಿಗೆ ಮಾಡಿ, ಅಂತಿಮ ಸಂಸ್ಕಾರ ಮಾಡಿದ್ದಾರೆ. ಆದರೆ ಇಷ್ಟೊಂದು ಜನರು ಸೇರಿ, ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ಹಸುವಿನ ಅಂತ್ಯಕ್ರಿಯೆ ನಡೆಸಲು ನಾನು ಮೊದಲು ನಿರ್ಧಾರ ಮಾಡಿದೆ. ಕೆಲವೇ ಜನರ ಸಹಾಯ ಕೇಳಿದೆ. ಆದರೆ ಹಳ್ಳಿಯ ಅನೇಕರು ಸ್ವ ಇಚ್ಛೆಯಿಂದ ಬಂದು ಕಾರ್ಯದಲ್ಲಿ ಪಾಲ್ಗೊಂಡರು. ಈ ಹಸು ಹಲವು ವರ್ಷಗಳಲ್ಲಿ ನಮ್ಮ ಊರಲ್ಲಿ ಓಡಾಡಿಕೊಂಡಿದೆ. ಬಹುತೇಕರು ಇದರ ಹೊಟ್ಟೆಗೆ ಹಾಕಿದ್ದಾರೆ. ಈಗ ಸತ್ತಾಗ ಅಂತ್ಯಕ್ರಿಯೆಯಲ್ಲಿ ನಾವೂ ಪಾಲ್ಗೊಳ್ಳುತ್ತೇವೆ ಎಂದು ಬಂದರೆ ನಾನು ಹೇಗೆ ಬರಬೇಡಿ ಎನ್ನಲಿ ಎಂದು ಕಿರಾಣಿ ಅಂಗಡಿ ಮಾಲೀಕ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಕ್ರಮ ತೆಗೆದುಕೊಂಡರೂ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:VIDEO: ರಸ್ತೆ ಮಧ್ಯೆ ಧಗಧಗ ಉರಿದ ಕಾರು; ಕಾರಣ ಎಣ್ಣೆ ಬಾಟಲಿಗಳು…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
