ಬೆಂಗಳೂರು:ಹಿರಿಯ ನಟ ಅನಂತ್ ನಾಗ್ ಅವರಿಗೆ ಇದುವರೆಗೂ ಪದ್ಮಶ್ರೀ ಪ್ರಶಸ್ತಿ ಸಿಗದಿರುವ ಬಗ್ಗೆ ಕನ್ನಡಿಗರಲ್ಲಿ ಹಲವು ವರ್ಷಗಳಿಂದ ಬೇಸರ ಇದೆ. ಈ ಬೇಸರವನ್ನು ಆಗಾಗ ಹಲವರು ಸೋಷಿಯಲ್ ಮೀಡಿಯಾದಲ್ಲಿ ಹೊರಹಾಕುತ್ತಿರುತ್ತಾರೆ. ಅನಂತ್ ನಾಗ್ ಅವರನ್ನು ಯಾಕೆ ಪ್ರತಿ ಬಾರಿ ಕಡೆಗಣಿಸಲಾಗುತ್ತಿದೆ ಎಂದು ಪ್ರಶ್ನಿಸುತ್ತಲೇ ಇರುತ್ತಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರೇ 2022ರ ಸಾಲಿನ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡುವುದಕ್ಕೆ ಜನರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಪೀಪಲ್ಸ್​ಪದ್ಮ ಹ್ಯಾಶ್​ಟ್ಯಾಗ್​ನಡಿ ಅಭಿಯಾನವೊಂದು ಶುರುವಾಗಿದೆ.
ಈ ಅಭಿಯಾನದಲ್ಲಿ, ಆಯಾ ರಾಜ್ಯದವರು ತಮ್ಮಲ್ಲಿರುವ ಅರ್ಹರನ್ನು ಪದ್ಮ ಪ್ರಶಸ್ತಿಗಳಿಗೆ ಸೂಚಿಸಬಹುದಾಗಿದೆ. ಇನ್ನು, ಕರ್ನಾಟಕದಲ್ಲೂ ‘ಅನಂತ್​ನಾಗ್​ಫಾರ್​ಪದ್ಮ’ ಎಂಬ ಹ್ಯಾಶ್​ಟ್ಯಾಗ್​ನಡಿ ಅಭಿಯಾನ ಶುರುವಾಗಿದ್ದು, ಈ ಅಭಿಯಾನಕ್ಕೆ ಜನಸಾಮಾನ್ಯರಲ್ಲದೆ ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ಕೈಜೋಡಿಸಿದ್ದಾರೆ. ಪ್ರಮುಖವಾಗಿ, ರಿಷಬ್ ಶೆಟ್ಟಿ ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರವನ್ನೇ ಬರೆದಿದ್ದಾರೆ. ಈ ಮೂಲಕ ಅನಂತ್ ನಾಗ್ ಅವರ ಹೆಸರನ್ನು ಸೂಚಿಸುವುದಕ್ಕೆ ಕರೆ ನೀಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ಎಂತಹ ಪಾತ್ರಗಳೇ ಆಗಲಿ, ಲೀಲಾಜಾಲವಾಗಿ ಅಭಿನಯಿಸಿ, ಚಿತ್ರರಸಿಕರ ಮನ ಗೆಲ್ಲುತ್ತ ಬಂದಿರುವ ‘ಅಭಿನಯ ಬ್ರಹ್ಮ’ನಿಗೆ ಪದ್ಮ ಪ್ರಶಸ್ತಿಯೊಂದು ಸಲ್ಲಬೇಕಾಗಿದ್ದು ನ್ಯಾಯ. ಅದಕ್ಕಾಗಿ ನಾವೆಲ್ಲರೂ ಒಂದುಗೂಡಿ, ನಮ್ಮ ನಾಡಿನ ಪರವಾಗಿ ಅನಂತ್ ನಾಗ್ ಅವರನ್ನು ಪೀಪಲ್ಸ್ ಪದ್ಮಗೆ ನಾಮನಿರ್ದೇಶಿಸೋಣ. ಇದಕ್ಕೆ ಸೆಪ್ಟೆಂಬರ್ 15ರವರೆಗೂ ಸಮಯವಿದ್ದು, ಅಲ್ಲಿಯವರೆಗೂ ‘ಅನಂತ್ ನಾಗ್ ಫಾರ್ ಪದ್ಮ’ ಎಂಬ ಹ್ಯಾಶ್​ಟ್ಯಾಗ್ ಬಳಸುವ ಮೂಲಕ ಎಲ್ಲರೂ ಬೆಂಬಲ ಸೂಚಿಸೋಣ’ ಎಂದು ಹೇಳಿದ್ದಾರೆ.
ಇದಕ್ಕೆ ರಕ್ಷಿತ್ ಶೆಟ್ಟಿ ಸಹ ಧ್ವನಿಗೂಡಿಸಿದ್ದಾರೆ. ‘ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಅನಂತ್ ನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ’ ಎಂದಿದ್ದಾರೆ. ಈ ಅಭಿಯಾನಕ್ಕೆ ಸಂಸದ ಪ್ರತಾಪ್ ಸಿಂಹ, ನಿರ್ದೇಶಕರಾದ ಹೇಮಂತ್ ರಾವ್, ಪವನ್ ಒಡೆಯರ್ ಸೇರಿ ಹಲವರು ಬೆಂಬಲ ಸೂಚಿಸಿದ್ದಾರೆ.
ನಟ ದರ್ಶನ್​ ಪ್ರಕರಣದಲ್ಲಿ ಟ್ವಿಸ್ಟ್​: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!

ಮದುವೆಯಾಗಿದ್ದರೂ ಇನ್ನೊಬ್ಬರ ಜತೆ ಪ್ರೇಮ: ಮನೆಬಿಟ್ಟು ಬಂದವರ ಪರಿಸ್ಥಿತಿ ಗಂಭೀರ

ದೇಶದ ಪ್ರಪ್ರಥಮ ಕೋವಿಡ್​ ಸೋಂಕಿತೆಗೆ ಈಗ ಮತ್ತೆ ಕರೊನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + nineteen =
Remember me
