ಇಂದೋರ್:‘ಅಗರ್ ತುಮ್ ಮಿಲ್​ ಜಾವೊ ಜಮಾನಾ ಛೋಡ್​ದೇಂಗೆ ಹಮ್​..’ ಎಂದೆನಿಸುವಂಥ ಪ್ರಕರಣವಿದು. ಏಕೆಂದರೆ ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ನಡುವೆ ಆರಂಭವಾದ ಯುಗಳ ಗೀತೆ(?) ಒಬ್ಬರ ಪಾಲಿಗೆ ಚರಮಗೀತೆಯಾಗಿ ಪರಿಣಮಿಸಿದೆ. ಪ್ರಿಯಾ ಅಗರ್​ವಾಲ್​ ಎಂಬಾಕೆ ತನ್ನ ಸ್ನೇಹಿತನನ್ನು ಮಾತನಾಡಿಸಲು ಹೋಗಿ ಇಹಲೋಕವನ್ನೇ ತ್ಯಜಿಸುವಂತಾದ ದುರಂತವಿದು.
ಪ್ರಿಯಾ ಅಗರ್​ವಾಲ್​ ಎಂಬ 26 ವರ್ಷದ ಯುವತಿ, ತನ್ನ ಪತಿ ಶ್ಯಾಮ್​ ಅಗರ್​ವಾಲ್​ ಹಾಗೂ ಪುತ್ರಿಯ ಜತೆ ಇಂದೋರ್​ನ ಲಸೂದಿಯಾದಲ್ಲಿ ನೆಲೆಸಿದ್ದಳು. ಆದರೆ ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಅಪರಿಚಿತನೊಂದಿಗೆ ಉಂಟಾದ ಪರಿಚಯ ಈಕೆಯ ಜೀವ-ಜೀವನವನ್ನೇ ಕೊನೆಯಾಗಿಸಿದೆ. ಸೌರಭ್ ಅಲಿಯಾಸ್ ಗೋಲು ಗೊಟ್ರೆ ಎಂಬಾತನೊಂದಿಗೆ ಪ್ರಿಯಾಗೆ ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಉಂಟಾಗಿ, ಬಳಿಕ ಸ್ನೇಹಕ್ಕೆ ತಿರುಗಿತ್ತು. ಒಂದು ವರ್ಷದಿಂದ ಇಬ್ಬರೂ ಚಾಟ್​​ನಲ್ಲಿ ತೊಡಗಿದ್ದರು.
ಇದನ್ನೂ ಓದಿ:ಪ್ರಿಯಕರನೊಂದಿಗೆ ಓಡಿ ಹೋಗುವುದಕ್ಕಾಗಿ ಎರಡು ವರ್ಷದ ಕಂದನನ್ನು ಗೋಡೆಗೆ ಗುದ್ದಿ ಕೊಂದ ಪಾಪಿ ಅಮ್ಮ!
ಇತ್ತೀಚೆಗೆ ಅವಳು ತನ್ನನ್ನು ಸರಿಯಾಗಿ ಮಾತಾಡಿಸುತ್ತಿಲ್ಲ ಎಂದು ಸೌರಭ್ ಕೋಪಗೊಂಡಿದ್ದ ಎನ್ನಲಾಗಿದೆ. ಗುರುವಾರ ಸಂಜೆ 7 ಗಂಟೆಯ ವೇಳೆಗೆ ಪಟ್ಟಣದ ಗ್ಯಾನಶೀಲ ಸೂಪರ್ ಸಿಟಿ ಬಳಿ ಖಾಲಿ ಜಾಗವೊಂದಕ್ಕೆ ಅವಳನ್ನು ಮಾತನಾಡಲು ಕರೆಸಿಕೊಂಡಿದ್ದಾನೆ. ಅಲ್ಲಿಗೆ ತನ್ನ ಮಗಳೊಂದಿಗೆ ಬಂದ ಪ್ರಿಯಾ ಜೊತೆ ಜಗಳ ಮಾಡಿ ಅವಳನ್ನು ಕತ್ತರಿಯಿಂದ ಮತ್ತೆ ಮತ್ತೆ ಚುಚ್ಚಿ ತೀವ್ರವಾಗಿ ಗಾಯಗೊಳಿಸಿದ್ದಾನೆ. ಮುಖ ಮತ್ತು ಕತ್ತಿನಿಂದ ರಕ್ತ ಹರಿಯುತ್ತಿದ್ದ ಪ್ರಿಯಾ ಹತ್ತಿರದ ಅಂಗಡಿಗಳ ಬಳಿಗೆ ನಡೆದು ಬಂದು ಕುಸಿಯುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಿಯಾ ತನ್ನ ಮಗಳ ಮುಂದೆ ಉಸಿರಾಡಲು ಕಷ್ಟ ಪಡುತ್ತಿರುವಾಗ ಸೌರಭ್ ಆರಾಮವಾಗಿ ತನ್ನ ಸ್ಕೂಟರ್ ಹತ್ತಿ ಹೋಗುವುದು ಕೂಡ ವೀಡಿಯೋದಲ್ಲಿ ಕಾಣುತ್ತದೆ.
ತನ್ನನ್ನು ಭೇಟಿಯಾಗಲು ಮಗಳೊಂದಿಗೆ ಬಂದವಳನ್ನು ಅವನು ಚುಚ್ಚಿ ಚುಚ್ಚಿ ಕೊಂದ; ಗಂಡ-ಹೆಂಡತಿ-ಮಗಳು ಮತ್ತು ಅವನು..!!!ವಿವರಗಳಿಗೆhttps://t.co/YaFZZbZDD9ನೋಡಿpic.twitter.com/NELyCTRor7
— Vijayavani (@VVani4U)January 29, 2021

ನೆರೆದ ಜನರು ಪ್ರಿಯಾಳನ್ನು ಆಸ್ಪತ್ರೆಗೆ ಸೇರಿಸಿದರಾದರೂ ಆಕೆ ಸಾವಿಗೀಡಾಗಿದಳು. ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು, ಕುಡಿದ ಅಮಲಿನಲ್ಲಿದ್ದ ಸೌರಭ್ ತಪ್ಪೊಪ್ಪಿಕೊಂಡಿದ್ದಾನೆ. ಪ್ರಿಯಾಳ ಪತಿ ಶ್ಯಾಂ ಅಗರ್ವಾಲ್ ಅವರಿಬ್ಬರ ಸ್ನೇಹದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಇದು ಬರೀ ಸ್ನೇಹನಾ ಅಥವಾ ಪ್ರೀತಿಯಾ ಎಂಬಿತ್ಯಾದಿ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)
ಈ ಸಲ ಶಾಲೆಗೆ ಡೊನೇಷನ್​ ನೀಡಬೇಡಿ, ಫೀಸು ಕೂಡ ಪೂರ್ತಿ ಕೊಡಬೇಡಿ..

ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
