ಡೆಹ್ರಾಡೂನ್​:ವಾಹನನಿಬಿಡ ರಸ್ತೆ ಮಧ್ಯದಲ್ಲಿ ಕುಳಿತು ಮದ್ಯ ಸೇವಿಸಿದ್ದಲ್ಲದೆ, ಪೊಲೀಸರಿಗೆ ಬೆದರಿಕೆ ಹಾಕಿರುವ ಇನ್​​ಸ್ಟಾಗ್ರಾಂ ಇನ್ಫ್ಲ್ಯುಯೆನ್ಸರ್ ಬಾಬಿ ಕಟಾರಿಯಾ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್​ ಜಾರಿಯಾಗಿದ್ದು, ಶೀಘ್ರದಲ್ಲೇ ಆತನ ಬಂಧನವಾಗಲಿದೆ.
ಮಿ. ಕಟಾರಿಯಾ ಜುಲೈ 28ರಂದು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದ. ರಸ್ತೆ ಮೇಲೆ ಎಂಜಾಯ್​ ಮಾಡುವ ಸಮಯವಿದು ಎಂದು ಅಡಿಬರಹ ನೀಡಿದ್ದ. ವಿಡಿಯೋದಲ್ಲಿ ಡೆಹ್ರಾಡೂನ್​ನ ವಾಹನ ನಿಬಿಡ ರಸ್ತೆಯ ಮಧ್ಯದಲ್ಲೇ ಕುರ್ಚಿ ಮತ್ತು ಟೇಬಲ್​ ಹಾಕಿಕೊಂಡು ಕುಳಿತು ಮದ್ಯ ಸೇವಿಸುತ್ತಿರುವ ದಶ್ಯವಿದೆ.

A post shared by Bobby Kataria (@katariabobby)

ಕಟಾರಿಯಾ ಆಪ್ತರೊಬ್ಬರು ವಿಡಿಯೋ ರೆಕಾರ್ಡ್​ ಮಾಡಿ, ರೋಡ್​ ಆಪ್ನೆ ಬಾಪ್​ ಕಿ (ರಸ್ತೆ ನಮ್ಮಪ್ಪನಿಗೆ ಸೇರಿದ್ದು) ಎಂಬ ಹಾಡನ್ನು ವಿಡಿಯೋ ಬ್ಯಾಕ್​ಗ್ರೌಂಡ್​ ಹಾಕಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದೆ. ಈ ವಿಡಿಯೋ ವೈರಲ್​ ಆಗಿ ಕ್ರಮಕ್ಕೆ ಒತ್ತಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ಉತ್ತರಾಖಂಡದ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಕಟಾರಿಯಾ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು.
ಇದೀಗ ನಾಪತ್ತೆಯಾಗಿರುವ ಕಟಾರಿಯಾ ಬಂಧನಕ್ಕಾಗಿ ಉತ್ತರಾಖಂಡ ಪೊಲೀಸರು ಜಿಲ್ಲಾ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್​ ಪಡೆದುಕೊಂಡಿದ್ದಾರೆ. ಈ ಕುರಿತು ಎಸ್​ಎಚ್​ಒ ರಾಜೇಂದ್ರ ಸಿಂಗ್​ ರಾವತ್​ ಮಾಹಿತಿ ನೀಡಿದ್ದಾರೆ. ಆರೋಪಿಯ ಬಂಧನಕ್ಕಾಗಿ ಅನೇಕ ಪೊಲೀಸ್​ ತಂಡಗಳನ್ನು ರಚನೆ ಮಾಡಲಾಗಿದ್ದು, ಹರಿಯಾಣ ಸೇರಿದಂತೆ ವಿವಿಧ ಸ್ಥಳಗಳಿಗೆ ಕಟಾರಿಯಾ ಬಂಧನಕ್ಕಾಗಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಗುರುಂಗಾವ್​ ಮೂಲದ ಕಟಾರಿಯಾ ಇನ್​ಸ್ಟಾಗ್ರಾಂನಲ್ಲಿ 6 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಈ ಹಿಂದೆ ಸ್ಪೈಸ್​ ಜೆಟ್​ ವಿಮಾನದ ಒಳಗೆ ಧೂಮಪಾನ ಮಾಡುತ್ತಿರುವ ವಿಡಿಯೋ ಸಹ ವೈರಲ್​ ಆಗಿತ್ತು. ಆದರೆ, ಡಮ್ಮಿ ವಿಮಾನ ಎಂದು ಕಟಾರಿಯಾ ಸಮರ್ಥನೆ ನೀಡಿದ್ದರು. ದುಬೈನಲ್ಲಿ ಶೂಟಿಂಗ್​ನಲ್ಲಿದ್ದಾಗ ತೆಗೆದ ಚಿತ್ರವಿದು ಎಂದು ಹೇಳಿದ್ದಾರೆ. ಅಲ್ಲದೆ, ಅದು ಹಳೆಯ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಆದರೆ, ಈಗ ರಸ್ತೆ ಮಧ್ಯೆ ಕುಳಿತ ಮದ್ಯ ಸೇವಿಸಿದ ಪ್ರಕರಣದಲ್ಲಿ ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ.(ಏಜೆನ್ಸೀಸ್​)
ನಮ್ಮಪ್ಪನಿಗೆ ಸೇರಿದ್ದು ಅಂತ ನಡುರಸ್ತೆಯಲ್ಲೇ ಎಣ್ಣೆ ಕುಡಿದ ಸೋಶಿಯಲ್​ ಮೀಡಿಯಾ ಸ್ಟಾರ್​ಗೆ ಎದುರಾಯ್ತು ಸಂಕಷ್ಟ!

ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎನ್ನುತ್ತಲೇ ತೆರೆಮರೆಯಲ್ಲಿ ಸಂಸದೆ ಸುಮಲತಾ ಮೆಗಾ ಪ್ಲಾನ್?!

ಧನಶ್ರೀ-ಚಾಹಲ್​ ದಾಂಪತ್ಯ ಜೀವನ ಮುರಿದುಬಿತ್ತಾ? ಸ್ಪಿನ್​ ಮಾಂತ್ರಿಕ ಯಜುವೇಂದ್ರ ಚಾಹಲ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
