ಭೋಪಾಲ್​:ಇತ್ತೀಚಿನ ದಿನಗಳಲ್ಲಿ ನಿರುದ್ಯೋಗಿಗಳು ಹೆಚ್ಚಾಗಿ ಸ್ವಂತ ಉದ್ದಿಮೆಯ ಕಡೆ ವಾಲುತ್ತಿದ್ದು, ವಿಭಿನ್ನ ಪ್ರಯತ್ನಗಳ ಮೂಲಕ ಜನರಿಗೆ ಹತ್ತಿರವಾಗಲು ಮುಂದಾಗುತ್ತಿದ್ದಾರೆ. ಇದರಲ್ಲಿ ಪ್ರಮುಖ ವ್ಯಾಪಾರ ಎಂದರೆ ಈಟರಿ ಶಾಪ್​ ಎಂದು ಹೇಳಬಹುದಾಗಿದೆ. ಇದರಲ್ಲಿ ಚಾಟ್ಸ್​, ಐಸ್​ಕ್ರೀಂ ಹಾಗೂ ಸೋಡಾ ಅಂಗಡಿಗಳು ಸಹ ಒಳಪಟ್ಟಿರುತ್ತವೆ. ಆದರೆ, ಸೋಡಾ ಅಂಗಡಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರೆ ತಿಂಗಳಿಗೆ 50 ಸಾವಿರ ಅಂದರೆ ವರ್ಷಕ್ಕೆ 6 ಲಕ್ಷ ರೂಪಾಯಿ ಸಂಬಳ ಕೊಡುವವರನ್ನು ನೀವು ಎಲ್ಲಾದರೂ ನೋಡಿದ್ದೀರಾ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್​ ಆಗುತ್ತಿದ್ದು, ಸಖತ್​ ಟ್ರೆಂಡ್​ ಆಗುತ್ತಿದೆ.
ಮಧ್ಯಪ್ರದೇಶದ ಭೋಪಾಲ್​ ಮೂಲದ ಕಂಟೆಂಟ್​ ಕ್ರಿಯೇಟರ್​ ನರೇಂದ್ರ ರಜಪೂತ್​ ಎಂಬುವವರು ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇದಲ್ಲದೆ ವಿಡಿಯೋ ಈವರೆಗೂ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ನೆಟ್ಟಿಗರು ಕಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.
View this post on InstagramA post shared by Narendra Rajpoot (@nsworld06)

A post shared by Narendra Rajpoot (@nsworld06)
ಇದನ್ನೂ ಓದಿ:ಗಣೇಶೋತ್ಸವದ ವೇಳೆ ಪ್ರಸಾದ ವಿನಿಯೋಗಕ್ಕೂ ಬಂತು ರೂಲ್ಸ್​; FSSAI ಅನುಮತಿ ಕಡ್ಡಾಯ, ಇಲ್ಲದಿದ್ರೆ ಕಠಿಣ ಕ್ರಮ
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಸೋಡಾ ಅಂಗಡಿಯ ಮಾಲೀಕ ನರೇಂದ್ರ ರಜಪೂತ್​ ರಾಜಸ್ಥಾನಿ ಸೋಡಾ ಶಾಪ್, ಡೆಪೋ ಚೌರಾಹಾದಲ್ಲಿರುವ ಅಂಗಡಿಗೆ ಸಹಾಯಕರು ಬೇಕಾಗಿದ್ದು, ನಾನು ತಿಂಗಳಿಗೆ 50 ಸಾವಿರ ಅಂದರೆ ವರ್ಷಕ್ಕೆ 6 ಲಕ್ಷ ರೂಪಾಯಿ ಸಂಬಳ ಕೊಡುತ್ತೇನೆ. ನನ್ನ ದೈನಂದಿನ ಆದಾಯವನ್ನು ನೀವು ಕೇಳಬೇಡಿ. ನಿಮಗೆ ಕೆಲಸ ಬೇಕೇ ಇಲ್ಲಿಗೆ ಬನ್ನಿ. ಮುಖ್ಯವಾಗಿ ಫ್ರೆಶರ್​ಗಳು ಬಂದರೆ ಉತ್ತಮ ಎಂದು ಹೇಳುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಫ್ಯಾಕ್ಟ್​ಚೆಕ್​ ಮಾಡಿದಾಗ ಇದು ಮನರಂಜನೆಯ ಉದ್ಧೇಶಕ್ಕಾಗಿ ಮಾಡಲಾಗಿದೆ ಎಂದು ಹೇಳಲಾಗಿದ್ದು, ಜನರು ರೀಲ್ಸ್​ಗೆ ತಮ್ಮದೇ ಶೈಲಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರು ಐಟಿ ಸೆಕ್ಟರ್​ನವರಿಗೆ ನೀವು ಟಕ್ಕರ್​ ಕೊಡಲು ಮುಂದಾಗಿದ್ದೀರಾ ಎಂದು ಹೇಳಿದರೆ. ಹಲವರು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಮನರಂಜನೆಗಾಗಿ ಮಾಡಿದ ಈ ವಿಡಿಯೋ ಈಗ ಸಖತ್​ ಟ್ರೆಂಡ್​ ಆಗುತ್ತಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × 2 =
Remember me
