ನಾಗಪುರ:ಅಯೋಧ್ಯೆಯಲ್ಲಿ ಆಗಸ್ಟ್​ 5ರಂದು ನಡೆಯಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿ ಹಾಗೂ ರಾಮತೇಕ್​ನ ಶ್ರೀರಾಮ ಮಂದಿರದಿಂದ ಮಣ್ಣು ರವಾನೆ ಮಾಡಲಾಗಿದೆ.
ರಾಮತೇಕ್​ ಮಂದಿರ ಹಾಗೂ ಆರ್​ಎಸ್​ಎಸ್​ ಕೇಂದ್ರ ಕಚೇರಿಯಿಂದ ಮಣ್ಣು ಹಾಗೂ ನಾಗಪುರದ ನದಿಗಳ ನೀರನ್ನು ಕೂಡ ಅಯೋಧ್ಯೆಗೆ ಕಳುಹಿಸಲಾಗಿದೆ ಎಂದು ವಿಶ್ವ ಹಿಂದು ಪರಿಷದ್​ನ ವಿದರ್ಭ್​ ಪ್ರಾಂತ ಪ್ರಮುಖ್​ ಗೋವಿಂಡ್​ ಶೆಂಡೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಕರೊನಾ ಸಂಕಷ್ಟ; ದೆಹಲಿ, ಅಹಮದಾಬಾದ್​, ದೆಹಲಿಯಿಂದ ಬರುತ್ತಿದೆ ಶುಭಸುದ್ದಿ; ಏನದು?
ದೇಶದೆಲ್ಲೆಡೆಯ ಧಾರ್ಮಿಕ ಸ್ಥಳಗಳ ಮಣ್ಣು ಹಾಗೂ ನದಿಗಳ ನೀರನ್ನು ಸಂಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಜನರು ಅಯೋಧ್ಯೆಗೆ ತೆರಳಬೇಕಿತ್ತು. ಆದರೆ, ಕೋವಿಡ್​ ಸಂಕಷ್ಟ ಕಾರಣದಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಅಲ್ಲದೇ, ಆಗಸ್ಟ್​ 5ರಂದು ತರಾತುರಿಯಲ್ಲಿ ಭೂಮಿ ಪೂಜೆ ನಡೆಯಲಿರುವುದರಿಂದ ದೇಶದೆಲ್ಲೆಡೆಯ ಜನರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲ. ಮಣ್ಣು ಹಾಗೂ ನೀರನ್ನು ಕೊರಿಯರ್​ ಮೂಲಕ ಕಳುಹಿಸಲಾಗುತ್ತಿದೆ ಎಮದು ಮಾಹಿತಿ ನೀಡಿದರು.
ರಾಮಮಂದಿರ ಭೂಮಿ ಪೂಜೆಗೆ ಆ.5ರ ಮುಹೂರ್ತ ಚೆನ್ನಾಗಿಲ್ಲ; ವಾರಾಣಸಿ ಶ್ರಿಗಳು ಆಕ್ಷೇಪಿಸುತ್ತಿರುವುದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 2 =
Remember me
