ಮಹಾರಾಷ್ಟ್ರ:ಬಹು ಸಂಖ್ಯೆಯಲ್ಲಿ ಬ್ರಹ್ಮಚಾರಿಗಳು ಮದುವೆ ಗಂಡಿನಂತೆ ಸಿಂಗರಿಸಿಕೊಂಡು ಕುದುರೆ ಸವಾರಿ ಮತ್ತು ಬ್ಯಾಂಡ್ ವಾದ್ಯದೊಂದಿಗೆ ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ. ಅರ್ರೇ, ಮದುವೆ ಗಂಡು, ಮದುವೆ ಹಾಲ್​ಗೆ ತೆರಳದೆ ಜಿಲ್ಲಾಧಿಕಾರಿ ಕಚೇರಿಗೆ ಯಾಕೆ ಬಂದ್ರು ಅನ್ನೋ ಮೂಡುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ.
ಮಹಾರಾಷ್ಟ್ರದ ವಧು-ವರ ಮೋರ್ಚಾ ಎಂಬ ಸಂಘಟನೆಯೊಂದು (Bridegroom Morcha) ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ರಾಜ್ಯದಲ್ಲಿ ಹುಡುಗಿಯರ ಸಂಖ್ಯೆ ಕಡಿಮೆಯಾಗಿದೆ. ಮಹಾರಾಷ್ಟ್ರದ ಲಿಂಗ ಅನುಪಾತವು 1,000 ಹುಡುಗರಿಗೆ 889 ಹುಡುಗಿಯರಿದ್ದಾರೆ. ಇದಿರಿಂದ ಬಹುಸಂಖ್ಯೆಯಲ್ಲಿ ಹುಡುಗರು ಅವಿವಾಹಿತರಾಗಿ ಉಳಿಯುತ್ತಿದ್ದಾರೆ. ಹೀಗಾಗಿ ಸೂಕ್ತ ವಧುವನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿ ಸೊಲ್ಲಾಪುರದಲ್ಲಿ ಮೆರವಣಿಗೆ ಮಾಡಿದ್ದಾರೆ.
ಹಲವಾರು ಸಂಖ್ಯೆಯಲ್ಲಿ ಮದುವೆಯಾಗದ ಹುಡುಗರು, ಮದುವೆ ಗಂಡಿನಂತೆ ಸಿಂಗರಿಸಿಕೊಂಡು ಕುದುರೆ ಸವಾರಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮದುವೆಯಾಗಲು ವಧುವನ್ನು ಹುಡುಕಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಒತ್ತಾಯಿಸಲಾಗಿದೆ.
ಮಹಾರಷ್ಟ್ರದಲ್ಲಿ ಪುರುಷ ಹಾಗೂ ಮಹಿಳೆಯರ ಲಿಂಗಾನುಪಾತ ಸುಧಾರಿಸಲು ಗರ್ಭಧಾರಣೆಯ ಪೂರ್ವ ಹಾಗೂ ಪ್ರಸವಪೂರ್ವ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಹೆಣ್ಣು ಭ್ರೂಣಹತ್ಯೆಯಿಂದಾಗಿ ರಾಜ್ಯದಲ್ಲಿ ಈ ಅಸಮಾನತೆ ಉಂಟಾಗಿದೆ. ಇದಕ್ಕೆ ನೇರವಾಗಿ ಸರ್ಕಾರವೇ ಹೊಣೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 5 =
Remember me
