ನವದೆಹಲಿ:ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕನೊಬ್ಬ ತನ್ನ ಹೆಂಡತಿಯ ಮೇಲೆ ತಮಿಳುನಾಡಿನಲ್ಲಿ 100 ಕ್ಕೂ ಹೆಚ್ಚು ಜನರು ಸೇರಿ ಹಲ್ಲೆ ನಡೆಸಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವೈರಲ್ ಆಗುತ್ತಿರುವ ವೀಡಿಯೊದ ದಿನಾಂಕ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಹೀಗಾಗಿ ಅದರ ಸತ್ಯಾಸತ್ಯತೆಯನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ತನ್ನನ್ನು ತಾನು ಹವಲ್ದಾರ್ ಪ್ರಭಾಕರ್ ಎಂದು ಗುರುತಿಸಸಿಕೊಂಡ ಸೈನಿಕ, “ತನ್ನ ಹೆಂಡತಿಯನ್ನು ಅರೆಬೆತ್ತಲೆಗೊಳಿಸಿ ತುಂಬಾ ಕೆಟ್ಟದಾಗಿ ಥಳಿಸಲಾಗಿದೆ” ಎಂದು ಹೇಳಿಕೊಂಡಿದ್ದಾನೆ.
என் மனைவியை அரை நிர்வானமாக்கி மிகவும் மோசமாக அடித்து இருக்கிறார்கள் இது எந்த உலகத்தில் நியாயம் என்று கேட்டு காப்பாற்ற கூறி காஷ்மீரில் பணியில் இருக்கும் இராணுவ வீரர் மண்டியிடும் பரிதாப நிலை.@tnpoliceofflஉடனடியாக நடவடிக்கை எடுக்க வேண்டும்.pic.twitter.com/OW3wWdCfmV
— Lt Col N Thiagarajan Veteran (@NTR_NationFirst)June 10, 2023

ವಿಡಿಯೋ ವೈರಲ್ ಆಗುತ್ತಿದ್ದಂತೆ ತಿರುವಣ್ಣಾಮಲೈನ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯನ್ ಸ್ಪಷ್ಟೀಕರಣ ನೀಡಿದ್ದಾರೆ. ಯೋಧನ ಪತ್ನಿಯ ಮೇಲೆ ಹಲ್ಲೆ ನಡೆದಿರುವುದನ್ನು ನಿರಾಕರಿಸಿದ ಅವರು, ಭೂಮಿಗೆ ಸಂಬಂಧಿಸಿದಂತೆ ವೈಯಕ್ತಿಕ ವಿವಾದವಿದೆ ಎಂದು ಹೇಳಿದರು. “ಸೈನಿಕನಿಗೆ ತಪ್ಪಾಗಿ ಮಾಹಿತಿ ನೀಡಲಾಗಿದ್ದು ನಾವು ಮಹಿಳೆಗೆ ರಕ್ಷಣೆ ನೀಡುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು.
தமிழக காவல்துறையின் முதற்கட்ட விசாரணையில் இராணுவ வீரர் மிகைப்படுத்தி கூறியிருப்பதாகவும் மானபங்கம் போன்றவை நடக்கவில்லை என்றும் தெரிவித்திருக்கிறார்கள்.@tnpoliceofflஉண்மை தன்மை அறிந்து பாரபட்சமற்ற முழுமையான விசாரணை நடத்தி நீதி வழங்க வேண்டும்.pic.twitter.com/OEfOMRwOW8
— Lt Col N Thiagarajan Veteran (@NTR_NationFirst)June 11, 2023
ಯೋಧನ ಮನವಿಗೆ ಸ್ಪಂದಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ಯೋಧನ ಪತ್ನಿಗೆ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಣ್ಣಾಮಲೈ, “ಕಾಶ್ಮೀರದಲ್ಲಿ ನಮ್ಮ ದೇಶಕ್ಕೆ ಧೈರ್ಯದಿಂದ ಸೇವೆ ಸಲ್ಲಿಸುತ್ತಿರುವ ತಿರುವಣ್ಣಾಮಲೈ ಮೂಲದ ಹವಲ್ದಾರ್ ಅವರ ಪತ್ನಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಅವಳ ಕಥೆಯನ್ನು ಕೇಳಿ ನಿಜವಾಗಿಯೂ ದುಃಖಿತನಾಗಿದ್ದೇನೆ. ನಮ್ಮ ತಮಿಳು ಮಣ್ಣಿನಲ್ಲಿ ಅವಳಿಗೆ ಇದು ಸಂಭವಿಸಿದೆ ಎಂದು ನನಗೆ ನಾಚಿಕೆಯಾಯಿತು! ವೆಲ್ಲೂರಿನ ಆಸ್ಪತ್ರೆಗೆ ದಾಖಲಾಗಿರುವ ಅವರನ್ನು ನೋಡಿಕೊಳ್ಳಲು ನಮ್ಮ ಪಕ್ಷದ ಜನರು ಧಾವಿಸುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
Had a telephonic conversation with the Havildar, who is bravely serving our country in Kashmir and his wife, based out of Tiruvannamalai. Truly gutted to hear her story & I felt ashamed that this had happened to her on our Tamil soil!
Our party people are rushing to attend to…https://t.co/E1E3vbXr3n
— K.Annamalai (@annamalai_k)June 11, 2023
ಲೆಫ್ಟಿನೆಂಟ್ ಕರ್ನಲ್ ಎನ್ ತ್ಯಾಗರಾಜನ್ (ನಿವೃತ್ತ) ಅವರು, “ಇದು ಯಾವ ಜಗತ್ತಿನಲ್ಲಿ ನ್ಯಾಯಯುತವಾಗಿದೆ? ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದ ಸೇನಾ ಸೈನಿಕನೊಬ್ಬ ತಮಿಳುನಾಡಿನಲ್ಲಿ ತನ್ನ ಹೆಂಡತಿಯನ್ನು ಉಳಿಸಲು ಮಂಡಿಯೂರಿ ನಮಸ್ಕರಿಸುವ ಕರುಣಾಜನಕ ಸ್ಥಿತಿ ಇದು. ಎಂದು ಟ್ವೀಟ್ ಮಾಡಿದ್ದಾರೆ.
A serving army soldier’s wife was badly hit and molested by the local goons and was admitted at the GH Vellore, adukkamparai, TN.I have spoken to her personally, she is undergoing severe pain and trauma. Request to@CMOTamilnaduto extend suitable medical help to save her life.
— Lt Col N Thiagarajan Veteran (@NTR_NationFirst)June 11, 2023
“ಒಬ್ಬ ಸೈನಿಕನು ದೇಶವನ್ನು ರಕ್ಷಿಸಲು ಹೊರಟಾಗ, ಸೈನಿಕನ ಪತ್ನಿ ಮತ್ತು ಕುಟುಂಬವನ್ನು ನೋಡಿಕೊಳ್ಳುವುದು ಸರ್ಕಾರದ ಅತ್ಯುನ್ನತ ಜವಾಬ್ದಾರಿಯಾಗಿದೆ. ತಮಿಳುನಾಡಿನಲ್ಲಿ ಇಂತಹ ಘಟನೆಗಳ ಹೆಚ್ಚಳವು ಕಾನೂನುಬಾಹಿರ ಸ್ಥಿತಿಯನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.
ಸೂಕ್ತ ಕ್ರಮ ಕೈಗೊಂಡು ಮಹಿಳೆಯರ ಘನತೆಯನ್ನು ಕಾಪಾಡುವಂತೆ ತಮಿಳುನಾಡು ರಾಜ್ಯಪಾಲರು, ರಾಜ್ಯ ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ.(ಏಜೆನ್ಸೀಸ್)
“ನನ್ನ ಹೆಂಡತಿ ನನ್ನನ್ನು ಸೋಲಿಸಿದಳು” ಎಂದು ಟ್ವೀಟ್ ಮಾಡಿದ ಭಾರತದಲ್ಲಿನ ಜಪಾನ್ ರಾಯಭಾರಿ! ಪ್ರಧಾನಿ ಮೋದಿ ಪ್ರತಿಕ್ರಿಯೆ ಹೀಗಿತ್ತು…

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಇಬ್ಬರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ನೋಟೀಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
