ವಿಜಯಪುರ:ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದ ಯೋಧ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸೇವೆಯಲ್ಲಿರುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಅಸುನೀಗಿದ್ದಾರೆ. ದಯಾನಾಂದ ಮಲ್ಲಿಕಾರ್ಜುನ ಪಾಟೀಲ (28) ಮೃತ ಯೋಧ. ಶ್ರೀನಗರದಲ್ಲಿ ಮಂಗಳವಾರ ಸಂಜೆ ಸೇವಾ ನಿರತರಾಗಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.
ಕಳೆದ ಐದು ವರ್ಷಗಳ ಹಿಂದೆ ಸಿಎಸ್​ಐಎಸ್​​ಎಫ್ ಹುದ್ದೆಗೆ ನೇಮಕವಾಗಿದ್ದ ದಯಾನಂದ ಈಚೆಗಷ್ಟೆ ಮದುವೆಯಾಗಿದ್ದರು. ಮದುವೆಯಾಗಿ ವರ್ಷವೂ ಪೂರ್ಣಗೊಂಡಿಲ್ಲ. ತಂದೆ ಮಲ್ಲಿಕಾರ್ಜುನ ಲಾರಿ ಚಾಲಕರಾಗಿದ್ದು, ತಾಯಿ ಮನೆಗೆಲಸ ಮಾಡಿಕೊಂಡಿದ್ದಾರೆ. ದಯಾನಂದಗೆ ಒಬ್ಬರು ಅಣ್ಣ, ಇಬ್ಬರು ಅಕ್ಕ ಹಾಗೂ ಓರ್ವ ತಂಗಿ ಇದ್ದು, ಎಲ್ಲರೂ ಮದುವೆಯಾಗಿದ್ದಾರೆ.
ಇದನ್ನೂ ಓದಿ:ಆಟವಾಡುತ್ತಿದ್ದಾಗ ಮಹಡಿಯಿಂದ ಕೆಳಕ್ಕೆ ಬಿದ್ದು ನಾಲ್ಕು ವರ್ಷದ ಮಗು ಸಾವು!
ತೀರ ಬಡಕುಟುಂಬದಿಂದ ಬಂದಿರುವ ದಯಾನಂದ ಸೇನೆಗೆ ಸೇರಬೇಕೆಂಬ ಅಗಾಧ ಕನಸು ಕಟ್ಟಿಕೊಂಡು ಅಂದುಕೊಂಡಿದ್ದನ್ನು ಸಾಧಿಸಿದ್ದರು. ದಯಾನಂದ ಸೇನೆಗೆ ಸೇರಿದ ಬಳಿಕ ಕೊಂಚ ಬಡತನ ನಿವಾರಣೆಯಾಗಿತ್ತು. ಇದೀಗ ಆತನ ನಿಧನ ಸುದ್ದಿ ಕುಟುಂಬಕ್ಕೆ ಆಘಾತ ನೀಡಿದೆ.
ಈಗಾಗಲೇ ದಯಾನಂದನ ಕಳೇಬರ ತವರಿಗೆ ಕಳುಹಿಸಲಾಗಿದ್ದು ನಾಳೆಯಷ್ಟೊತ್ತಿಗೆ ಬೆಳಗಾವಿ ತಲುಪಬಹುದೆಂದು ಸೇನೆಯಿಂದ ಮಾಹಿತಿ ಲಭ್ಯವಾಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಶಾಸಕರಿಂದ ಸಾಂತ್ವನ:ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್‌, ತಕ್ಷಣ ದಯಾನಂದ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಧೈರ್ಯ ತುಂಬುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಯೊಂದಿಗೆ ಸಂಪರ್ಕ ಸಾಧಿಸುತ್ತಿದ್ದು ದಯಾನಂದ ಅವರ ಕಳೇಬರವನ್ನು ತವರಿಗೆ ತರಲು ಎಲ್ಲ ಅನುಕೂಲ ಮಾಡಕೊಡಲಾಗುವುದೆಂದು ತಿಳಿಸಿದರು.
ರೌಡಿಯ ಹೆಂಡ್ತಿಗೇ ಮೆಸೇಜ್ ಮಾಡ್ತಿದ್ದ ಕಿಡಿಗೇಡಿ!; ಬಳಿಕ ರಸ್ತೆಯಲ್ಲಿದ್ದ ವಾಹನಗಳ ಗಾಜು ಪುಡಿಪುಡಿ..

ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
