ಮಲಪ್ಪುರಂ:ಮದುವೆಯಾಗಿ ಒಂದು ವಾರದ ಹಿಂದಷ್ಟೇ ಕರ್ತವ್ಯಕ್ಕೆ ಮರಳಿದ ಯೋಧನೊಬ್ಬ ಕಾಶ್ಮೀರದ ಲಡಾಕ್​ನಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತ ಯೋಧನನ್ನು ಕೋಲೋತ್ತೋಡಿ ನುಫೈಲ್ (27) ಎಂದು ಗುರುತಿಸಲಾಗಿದೆ. ಕೇರಳದ ಕುನಿ ಮೂಲದ ನುಫೈಲ್​, ಆರ್ಮಿ ಪೋಸ್ಟಲ್​ ಸರ್ವಿಸ್​ನಲ್ಲಿ ಸಿಪಾಯಿ ಆಗಿದ್ದರು.
ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಮಾಹಿತಿ ಸ್ವೀಕರಿಸಿದ್ದಾರೆ. ಮೃತದೇಹವನ್ನು ನಿವಾಸಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ನುಫೈಲ್​ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎರಡು ವರ್ಷಗಳಿಂದ ಕಾಶ್ಮೀರದಲ್ಲಿದ್ದರು.
ಡಿಸೆಂಬರ್​ ಕೊನೆಯ ವಾರದಲ್ಲಿ ತವರಿಗೆ ಮರಳಿದ್ದರು. ಜನವರಿ 2ರಂದು ಮುಕ್ಕಮ್​ನ ಕುಲನಗರದ ನಿವಾಸಿಯನ್ನು ಮದುವೆಯಾದ ಬಳಿಕ ಜ.22ರಂದು ಕರ್ತವ್ಯಕ್ಕೆ ಮರಳಿದ್ದರು. ಕೊಯಮತ್ತೂರಿಗೆ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿದ್ದ ನುಫೈಲ್​, ಇದೀಗ ಅಕಾಲಿಕ ಮರಣ ಹೊಂದಿದ್ದಾರೆ.
ಗುರುವಾರ ಬೆಳಗ್ಗೆ 10.30ಕ್ಕೆ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ, ಅದೇ ದಿನ ರಾತ್ರಿ 9:30ಕ್ಕೆ ಕೊನೆಯುಸಿರೆಳೆದಿದ್ದಾರೆ. ತಾಯಿ ಅಮೀನಾ ಹಾಗೂ ಸಹೋದರಿ ಹಾಗೂ ಪತ್ನಿಯನ್ನು ಬಿಟ್ಟು ಅಗಲಿದ್ದಾರೆ. ನುಫೈಲ್​ ಅವರು ಅಸ್ಸಾಂ ಮತ್ತು ಮೇಘಾಲಯದಲ್ಲೂ ಸೇವೆ ಸಲ್ಲಿಸಿದ್ದರು.(ಏಜೆನ್ಸೀಸ್​)
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ 124ನೇ ಜಯಂತಿ: ಕೊಡಗಿನ ವೀರನ ಸ್ಮರಣೆ ಹೊಸ ತಲೆಮಾರಿಗೆ ಇಂದಿಗೂ ಸ್ಫೂರ್ತಿ

ತರಬೇತಿ ಸಮಯದಲ್ಲಿ ವಾಯುಪಡೆಯ ಎರಡು ಯುದ್ಧ ವಿಮಾನ ಪತನ: ಮಧ್ಯಪ್ರದೇಶದಲ್ಲಿ ಘಟನೆ

ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್​ನಲ್ಲಿ ನಿರ್ಮಾಣವಾಗಿರುವ ಹೈಟೆಕ್ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಅಮಿತ್​ ಷಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twenty =
Remember me
