ಶ್ರೀನಗರ :ರಜೆಯ ಮೇಲಿದ್ದ ಭಾರತೀಯ ಸೇನೆಯ ಸೈನಿಕರೊಬ್ಬರನ್ನು ಲಷ್ಕರ್​ಎತೈಬಾದ ಇಬ್ಬರು ಭಯೋತ್ಪಾದಕರು ಗುಂಡಿಟ್ಟು ಕೊಂದಿರುವ ಘಟನೆ ಕಾಶ್ಮೀರದಿಂದ ವರದಿಯಾಗಿದೆ. ಮೂರು ಬಾರಿ ಕಮೆಂಡೇಷನ್ ಕಾರ್ಡ್ (ಮೆಚ್ಚುಗೆ ಪತ್ರ) ನೀಡಲಾಗಿದ್ದ 35 ವರ್ಷ ವಯಸ್ಸಿನ ಮೊಹಮ್ಮದ್ ಸಲೀಂ ಅಖೂನ್ ಎಂಬುವರೇ ಹುತಾತ್ಮರಾದ ಸೈನಿಕ.
ಅಖೂನ್ ಅವರು ಕಾಶ್ಮೀರದ ಬಿಜ್​ಬೆಹಾರಾ ಜಿಲ್ಲೆಯ ಜಬ್ಲಿಪೋರ ಪ್ರದೇಶದಲ್ಲಿದ್ದ ತಮ್ಮ ನಿವಾಸದಲ್ಲಿದ್ದಾಗ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದು, ಮೊದಲು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅಲ್ಲಿಂದ ಶ್ರೀನಗರದ ಜಿಎಂಸಿ ಆಸ್ಪತ್ರೆಗೆ ಕರದೊಯ್ದಾಗ ಮೃತರೆಂದು ಘೋಷಿಸಲಾಯಿತು ಎನ್ನಲಾಗಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರದ ಶಾಲೆಗಳಿಗೆ ತ್ರಿವರ್ಣ ಫಲಕಗಳು
ಸೇನಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಮೊಹಮ್ಮದ್ ಸಲೀಂ ಅಖೂನ್ ಅವರಿಗೆ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಯೋತ್ಪಾದಕರು ಬೆದರಿಕೆ ನೀಡಿದ್ದರು. ಆದಾಗ್ಯೂ ಕೆಚ್ಚೆದೆಯ ಅಖೂನ್ ಅವರ ಉತ್ಸಾಹ ಕುಗ್ಗಿರಲಿಲ್ಲ ಎನ್ನಲಾಗಿದೆ.(ಏಜೆನ್ಸೀಸ್)
ಕರೊನಾ ಲಸಿಕೆ : ಅತಿ ವೇಗದಲ್ಲಿ 10 ಕೋಟಿ ಡೋಸ್​ ನೀಡಿರುವ ಭಾರತ !

ಪ್ರತಿಭಟನೆ ಮುಂದೂಡಿ, ಮಾತುಕತೆಗೆ ಬನ್ನಿ : ಸಚಿವರ ಆಗ್ರಹ

ಏಪ್ರಿಲ್ 11 ರಿಂದ ಕೆಲಸದ ಸ್ಥಳಗಳಲ್ಲೇ ಕರೊನಾ ಲಸಿಕೆ ಸೌಲಭ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
