ನವದೆಹಲಿ:ರಜೆ ಮೇಲೆ ಬಂದಿದ್ದ ಯೋಧ ಪ್ರೀತಿಗೆ ಬಲಿಯಾಗಿದ್ದಾನೆ. ಆರೋಪಿಗಳು ಸೈನಿಕನಿಗೆ ಗುಂಡಿಟ್ಟು ಕೊಂದಿದ್ದಲ್ಲದೆ, ಆತನ ಕಾರನ್ನೂ ಹಾನಿಗೊಳಿಸಿದ್ದಾರೆ. ಉತ್ತರಪ್ರದೇಶದ ಅಲಿಘರ್​ನಲ್ಲಿ ಈ ಕೊಲೆ ನಡೆದಿದೆ.
ಉತ್ತರಪ್ರದೇಶದ ತಪ್ಪಲ್ ಪೊಲೀಸ್​ ಠಾಣಾ ವ್ಯಾಪ್ತಿಯ ರಸೂಲ್​ಪುರ ಗ್ರಾಮದಲ್ಲಿ ಭಾನುವಾರ ಸಂಜೆ ಮನೆಯಿಂದ ಹೊರಗೆ ಹೊರಟಿದ್ದ ಯೋಧನನ್ನು ಗುಂಡಿಟ್ಟು ಕೊಂದು, ಆತನ ಕಾರನ್ನು ಜಖಂಗೊಳಿಸಿ ಹೋಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರೂಪಿಸಲಾಗಿದೆ.
ಹತ್ಯೆಗೀಡಾದ ಯೋಧನ ಪತ್ನಿ ಅರುಷಿ ನೀಡಿದ ಮಾಹಿತಿ ಪ್ರಕಾರ, ಪತಿ ಅ. 21ರಂದು ರಜೆ ಮೇಲೆ ಮನೆಗೆ ಮರಳಿದ್ದು, ನಂತರ ಇಬ್ಬರೂ ಜತೆಯಾಗಿ ಆಕೆಯ ತಾಯಿಯ ಮನೆಗೆ ಹೋಗಿದ್ದರು. ಒಂದು ದಿನ ಅಲ್ಲಿದ್ದ ಬಳಿಕ ಪತಿ ತನ್ನ ಮನೆಗೆ ಕರೆದೊಯ್ದಿದ್ದು, ಸ್ವಲ್ಪ ಕೆಲಸ ಇದೆ ಎಂದು ಹೇಳಿ ಹೊರಗೆ ಹೊರಟಿದ್ದಾಗ ಈ ಪ್ರಕರಣ ನಡೆದಿದೆ ಎಂದು ಆಕೆ ತಿಳಿಸಿದ್ದಾರೆ. ಯೋಧನ ಪ್ರೇಮಪ್ರಕರಣದ ಹಿನ್ನೆಲೆಯಲ್ಲಿ ಹೀಗಾಗಿದೆ ಎಂದು ಹೇಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. –ಏಜೆನ್ಸೀಸ್
‘ಕಾಂತಾರ’ ಸಿನಿಮಾ ನೋಡಿ ಹೊರಬರುತ್ತಿದ್ದಾಗ ಹೃದಯಾಘಾತ; ಚಿತ್ರಮಂದಿರದಲ್ಲೇ ಸಾವು..
‘ಕಾಂತಾರ’ ಮತ್ತೊಂದು ದಾಖಲೆ; ಹೊಂಬಾಳೆ ಫಿಲ್ಮ್ಸ್​ಗೆ ಇದು ಸಂಭ್ರಮದ ಸಂಗತಿ..
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seven + 8 =
Remember me
