ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕುಂಭಾಶಿಯಿಂದ ದೂರದ ಜಮ್ಮು-ಕಾಶ್ಮೀರದವರೆಗಿನ 7 ಸಾವಿರ ಕಿಲೋಮೀಟರ್ ದೂರವನ್ನು ಬರೀ 12 ದಿನಗಳಲ್ಲಿ ಏಕಾಂಗಿಯಾಗಿ ಬೈಕ್​ನಲ್ಲಿ ಕ್ರಮಿಸಿ ವಾಪಸ್ ಬಂದಿದ್ದಾರೆ ಸಾಕ್ಷಿ ಹೆಗಡೆ. ಈ ಮೂಲಕ ದೇಶದಲ್ಲಿ ಹುಡುಗಿಯರು ಸುರಕ್ಷಿತ ಎಂಬುದನ್ನೂ ಇವರು ಸಾಕ್ಷೀಕರಿಸಿದ್ದಾರೆ.
ಮೇ 25ರಂದು ಕುಂಭಾಶಿಯಿಂದ ಹೊರಟ ಇವರು 15 ದಿನಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿ ಮರಳುವ ಯೋಜನೆ ಹಾಕಿಕೊಂಡಿದ್ದರು. ಆದರೆ ಅದನ್ನು ಹನ್ನೆರಡೇ ದಿನಗಳಲ್ಲಿ ಯಶಸ್ವಿಯಾಗಿ ಮುಗಿಸಿರುವ ಸಾಕ್ಷಿ ಇಂದು ಕುಂದಾಪುರಕ್ಕೆ ಮರಳಿದ್ದಾರೆ.
ಮೊದಲ ದಿನ ಕೊಲ್ಹಾಪುರ ತಲುಪಿ ಅಲ್ಲಿ ಒಂದು ದಿನ ಇದ್ದು, ನಂತರ ಪನ್ವೇಲ್​ಗೆ ತೆರಳಿ ಅಲ್ಲಿ ಅಕ್ಕನ ಮನೆಯಲ್ಲಿ ಒಂದು ದಿನ ತಂಗಿ, ನಂತರ ಅಹಮದಾಬಾದ್, ರಾಜಸ್ಥಾನದ ಮೂಲಕ ಜಮ್ಮು-ಕಾಶ್ಮೀರಕ್ಕೆ ತಲುಪಿ ಶ್ರೀನಗರದಲ್ಲಿ ಒಂದು ದಿನವಿದ್ದು, ಚಂಡೀಗಢಕ್ಕೆ ಹೋದೆ. ಅಲ್ಲಿಂದ ವಾಪಸ್ ಬರುವಾಗ ಬೇರೆ ಊರುಗಳನ್ನೂ ನೋಡಬೇಕು ಎಂಬ ಉದ್ದೇಶದಿಂದ ಮತ್ತೊಂದು ಮಾರ್ಗದಲ್ಲಿ ಮರಳಿದೆ. ಮಧ್ಯಪ್ರದೇಶ, ಉತ್ತರಪ್ರದೇಶ, ಲುಧಿಯಾನಗಳಲ್ಲಿ ಸಂಚರಿಸಿ ಮರಳಿದೆ ಎಂಬುದಾಗಿ ಸಾಕ್ಷಿ ತಮ್ಮ ಪ್ರಯಾಣದ ಕುರಿತು ಹೇಳಿಕೊಂಡಿದ್ದಾರೆ.
ಹುಡುಗಿಯರು ಎಲ್ಲ ಕಡೆ ಸುರಕ್ಷಿತವಾಗಿದ್ದಾರೆ, ಅವರಿಗೆ ಮನೆಯವರು ಬೆಂಬಲ ಕೊಟ್ಟರೆ ಅವರು ಎಲ್ಲಿ ಬೇಕಾದರೂ ಸುರಕ್ಷಿತವಾಗಿರುತ್ತಾರೆ, ಮಹಿಳೆಯರು ಸಶಕ್ತರು ಎಂಬುದನ್ನು ಸಾಬೀತು ಪಡಿಸಲು ಹಾಗೂ ಆ ಬಗ್ಗೆ ಜಾಗೃತಿ ಮೂಡಿಸಲು ಬೈಕ್​ನಲ್ಲಿ ಈ ಏಕಾಂಗಿ ಪ್ರಯಾಣ ಕೈಗೊಂಡಿದ್ದಾಗಿ ಸಾಕ್ಷಿ ಹೇಳುತ್ತಾರೆ.
ಹೋಗಿ ಬರುವವರೆಗೂ ನನಗೆ ಎಲ್ಲಿಯೂ ಅಂಥ ತೊಂದರೆ ಆಗಿಲ್ಲ. ನನ್ನ ಬೈಕ್ ಎಲ್ಲೂ ಕೈಕೊಟ್ಟಿಲ್ಲ, ನಾನೂ ಹಾರ್ಷ್ ಆಗಿ ಚಲಾಯಿಸಿಲ್ಲ. ಆದರೆ ಕೆಲವೊಂದು ಕಡೆ ಕಠೋರ ಅನಿಸುವ ಕೆಲವರು ಸಿಕ್ಕಿದರೂ ನಾನೇ ಅಡ್ಜಸ್ಟ್ ಮಾಡಿಕೊಂಡು ಹೋದೆ. ಎಲ್ಲ ಕಡೆ ಸುತ್ತಿ ಬಂದ ಮೇಲೆ ನಮ್ಮ ಕರ್ನಾಟಕವೇ ನನಗೆ ಬೆಸ್ಟ್ ಅನಿಸಿತು. ಆಹಾರದ ವಿಷಯದಲ್ಲಿ ಎಲ್ಲೂ ನನಗೆ ಅಷ್ಟು ಇಷ್ಟವಾಗಿಲ್ಲ, ಕರ್ನಾಟಕವೇ ಬೆಸ್ಟ್ ಅನಿಸಿತು ಎಂಬುದಾಗಿ ಸಾಕ್ಷಿ ಹೇಳಿದ್ದಾರೆ.

ನನಗೆ ಮೊದಲು ಕೊಲ್ಹಾಪುರದಲ್ಲಿ ಸಂಜೀವಿನಿ ಅಂತ ಒಬ್ಬಳು ಬೈಕರ್ ಸಿಕ್ಕಿದಳು, ಆಕೆಗೆ ನನ್ನ ಉದ್ದೇಶ ತಿಳಿಸಿದೆ. ಹಾಗೆ ದಾರಿಯುದ್ದಕ್ಕೂ ಮಾತಿಗೆ ಸಿಕ್ಕವರಿಗೆಲ್ಲ ನನ್ನ ಉದ್ದೇಶ ತಿಳಿಸಿ ಜಾಗೃತಿ ಮೂಡಿಸಿದೆ.
|ಸಾಕ್ಷಿ ಹೆಗಡೆ

ಸಾಕ್ಷಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಮೂಲದವರು. ಶಿವರಾಮ ಹೆಗಡೆ-ಪುಷ್ಪಾ ದಂಪತಿಯ ಪುತ್ರಿ. ಇವರು ಕುಂಭಾಶಿಯಲ್ಲಿ ನೆಲೆಸಿದ್ದು, ಕುಂದಾಪುರದ ಭಂಡಾರ್​​ಕಾರ್ಸ್​ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ. ಬೈಕ್​ ಕ್ರೇಜ್ ಹೊಂದಿರುವ ಈಕೆ ಒಂದೂವರೆ ತಿಂಗಳ ಹಿಂದೆ ಹೊಸ ಬೈಕ್ ಖರೀದಿಸಿದ್ದರು. ರಾಣಿಬೆನ್ನೂರಿನ ಓರ್ವ ಯುವತಿ ರಸ್ತೆ ಸುರಕ್ಷತೆ ಬಗ್ಗೆ ಸೋಲೋ ಬೈಕ್ ರೈಡ್ ಮಾಡಿರುವುದನ್ನು ನೋಡಿ ಸ್ಫೂರ್ತಿಯಾಗಿ ತೆಗೆದುಕೊಂಡು ಕಾಶ್ಮೀರ ಪ್ರವಾಸ ಹಮ್ಮಿಕೊಂಡಿದ್ದರು. ಅದಕ್ಕೆ ಮನೆಯವರ ಬೆಂಬಲ, ಸ್ನೇಹಿತರು ಹಾಗೂ ಕುಂದಾಪುರ ಹಿಂದು ಜಾಗರಣ ವೇದಿಕೆ ನೆರವು ಸಿಕ್ಕಿದೆ ಎನ್ನುತ್ತಾರೆ.
ಐಆರ್​​ಸಿಟಿಸಿ ಮೂಲಕ ಇನ್ಮುಂದೆ ಎಷ್ಟು ರೈಲ್ವೆ ಟಿಕೆಟ್​​ಗಳನ್ನು ಕಾದಿರಿಸಬಹುದು?; ಇಲ್ಲಿದೆ ಹೆಚ್ಚಳದ ಕುರಿತ ವಿವರ..

ಬೈಕ್ ಸಮೇತ ಕೆರೆಗೆ ಬಿದ್ದು ಸವಾರ ಸಾವು, ತಿರುವಲ್ಲಿ ಸಂಭವಿಸಿದ ಅಪಘಾತ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
