ನವದೆಹಲಿ:ಮದುವೆ ಎನ್ನುವುದು ಎರಡು ಕುಟುಂಬ, ಬಂಧು ಬಾಂಧವರು ಹಾಗೂ ವಧು, ವರರ ಸಂಬಂಧವನ್ನು ಬೆಸೆಯುವ ಬಂಧವಾಗಿದೆ. ಆದರೆ ಇಂದಿನ ದಿನಗಳಲ್ಲಿ ಈ ವಿವಾಹವು ವಿಚಿತ್ರ ಮತ್ತು ವಿಭಿನ್ನವಾದ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.
ಹೆಚ್ಚಿನ ಜನರು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಮಾಜದ ನಿರೀಕ್ಷೆಗಳನ್ನು ಪರಿಗಣಿಸುತ್ತಾರೆ. ಆದರೆ ಕಳೆದ ವರ್ಷ ತನ್ನನ್ನು ಮದುವೆಯಾಗಿ ಸುದ್ದಿಯಾಗಿದ್ದ ಕ್ಷಮಾ ಬಿಂದು ಇತ್ತೀಚೆಗೆ ತನ್ನ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿಶಿಷ್ಟ ನಿರ್ಧಾರವನ್ನು ಮತ್ತೊಮ್ಮೆ ಜಗತ್ತಿಗೆ ನೆನಪಿಸಿ ಪೋಸ್ಟ್​​ವೊಂದನ್ನು ಮಾಡಿದ್ದಾರೆ.

ಗುಜರಾತ್‌ನಿಂದ ನಿವಾಸಿಯಾಗಿರುವ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ಈ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದಾಳೆ.
‘1ನೇ ವಾರ್ಷಿಕೋತ್ಸವದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾಳೆ. ಆಕೆಯ ಮದುವೆಯ ಪೋಟೋಗಳನ್ನು ಜೋಡಿಸಿದ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಆಕೆ ‘ಏಕ್ಲಾ ಚಲೋ ರೇ’ ಎಂಬ ಹಚ್ಚೆ ಹಾಕಿಕೊಂಡಿರುವುನ್ನು ನೋಡಬಹುದು. ಈ ಪದಗಳು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಪ್ರಸಿದ್ಧ ಬಂಗಾಳಿ ಕವಿತೆಯಿಂದ ಆಯ್ದುಕೊಳ್ಳಲಾಗಿದೆ. ಒಂಟಿಯಾಗಿ ನಡೆಯಿರಿ ಎಂಬುದು ಇದರ ಅರ್ಥವಾಗಿದೆ.
A post shared by Kshama Bindu (@kshamachy)
2022ರಲ್ಲಿ ಹುಡುಗನನ್ನು ವರಿಸಲು ಇಷ್ಟವಿಲ್ಲದ ಕಾರಣ, ಏಕಾಂಗಿಯಾಗಿ ಜೀವಿಸಲು ನಿರ್ಧರಿಸಿರುವ ಕಾರಣ ಕ್ಷಮಾ ಬಿಂದು ಸ್ವಯಂ ವಿವಾಹದ ನಿರ್ಧಾರ ತೆಗೆದುಕೊಂಡಿದ್ದಳು. ಆಕೆಯ ಈ ನಿರ್ಧಾರವು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ವ-ವಿವಾಹವು ಸ್ವಯಂ ಬದ್ಧತೆ ಮತ್ತು ಪ್ರೀತಿಯಾಗಿದೆ.
ಇದು ಸ್ವಯಂ ಸ್ವೀಕಾರ ಕ್ರಿಯೆಯೂ ಹೌದು. ಜನರು ಪ್ರೀತಿಸುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆ ಎಂದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಕ್ಷಮಾ ವಿವರಿಸಿದ್ದಳು.
ಮುಂದಿನ 10 ವರ್ಷವೂ ನಮ್ಮದೇ ಸರ್ಕಾರ ಇರುತ್ತೆ, ಅಲ್ಲಿಯ ತನಕ ಯೋಜನೆಯೂ ಇರುತ್ತೆ: ಸಾರಿಗೆ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
