ನವದೆಹಲಿ:ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್​ 5ರಂದು ಭೂಮಿ ಪೂಜೆ ನಡೆಯಲಿದೆ. ಆದರೆ, ಹಳೆಯ ರಾಮಮಂದಿರ ವಿನ್ಯಾಸಕ್ಕೆ ಹೋಲಿಸಿದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ವಿಶ್ವ ಹಿಂದು ಪರಿಷದ್​ ಅಧ್ಯಕ್ಷ ಅಶೋಕ್​ ಸಿಂಘಾಲ್​ 30 ವರ್ಷಗಳ ಹಿಂದೆ ರಾಮ ಮಂದಿರದ ವಿನ್ಯಾಸವನ್ನು ಖ್ಯಾತ ಶಿಲ್ಪಿ ಚಂದ್ರಕಾಂತ್​ ಸೋಂಪುರ ಅವರಿಂದ ಸಿದ್ಧಪಡಿಸಿದ್ದರು. ಈ ಮಂದಿರ ನಿರ್ಮಾಣಕ್ಕೆ ಕನಿಷ್ಠ ಮೂರುವರೆ ವರ್ಷ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.ರಾಮ ಮಂದಿರ ವಿನ್ಯಾಸದಲ್ಲಿ ಮಾಡಲಾಗಿರುವ ಬದಲಾವಣೆ ಬಗ್ಗೆ ಚಂದ್ರಕಾಂತ್​ ಸೋಂಪುರ ಪುತ್ರ ಆಶೀಷ್​ ಸೋಂಪುರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಅಯೋಧ್ಯೆ ರಾಮ ಮಂದಿರ ಭೂಮಿಪೂಜೆಗೆ ಆರ್​ಎಸ್​ಎಸ್​ ಕೇಂದ್ರ ಕಚೇರಿಯಿಂದ ಮಣ್ಣು ರವಾನೆ
ಇಡೀ ದೇಗುಲವನ್ನು ನಾಗ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ನಮ್ಮ ತಂದೆ ರೂಪಿಸಿದ್ದನ್ನು ಕೊಂಚ ಮಟ್ಟಿಗೆ ನಾವು ವಿಸ್ತರಿಸಿದ್ದೇವೆ. ದೇಗುಲದ ಉದ್ದ ಹೆಚ್ಚಾಗಿದೆ. ಇಕ್ಕೆಲಗಳಲ್ಲಿ ಹೊಸದಾಗಿ ನೃತ್ಯ ಮಂಟಪ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ದೇಗುಲದ ಗೋಪುರದ ಎತ್ತರವನ್ನು ಹೆಚ್ಚು ಮಾಡಲಾಗಿದೆ. ಹಿಂದಿನ ವಿನ್ಯಾಸದಲ್ಲಿ ಗೋಪುರದ ಎತ್ತರ 141 ಅಡಿ ಇತ್ತು. ಹೊಸ ವಿನ್ಯಾಸದಲ್ಲಿ 161 ಅಡಿಗೆ ಎತ್ತರಿಸಲಾಗಿದೆ.
ಇದನ್ನೂ ಓದಿ;ರಾಮಮಂದಿರ ಭೂಮಿ ಪೂಜೆಗೆ ಆ.5ರ ಮುಹೂರ್ತ ಚೆನ್ನಾಗಿಲ್ಲ; ವಾರಾಣಸಿ ಶ್ರಿಗಳು ಆಕ್ಷೇಪಿಸುತ್ತಿರುವುದೇಕೆ?
ಸಮಯ ಕಳೆದಂತೆ ಹಾಗೂ ಜನಸಂಖ್ಯೆ ಹೆಚ್ಚಿದಂತೆ ಹೆಚ್ಚು ಭಕ್ತರು ಭೇಟಿ ನೀಡಲು ಅನುಕೂಲವಾಗುವಂತೆ ದೇಗುಲದ ವಿಸ್ತೀರ್ಣವನ್ನು ಹೆಚ್ಚಿಸಿದ್ದೇವೆ. ನೆಲ ಅಂತಸ್ತಿನಲ್ಲಿಯೇ ರಾಮಲಲ್ಲಾ ವಿಗ್ರಹ ಇರಲಿದೆ. ಎರಡನೇ ಅಂತಸ್ತಿನಲ್ಲಿ ರಾಮ ದರ್ಬಾರ್​ ಇರಲಿದೆ. ಮತ್ತೊಂದು ಅಂತಸ್ತನ್ನು ಸೇರಿಸಲಾಗುತ್ತಿದ್ದು, ಇದು ದೇಗುಲವನ್ನು ಇನ್ನಷ್ಟು ವಿಶಾಲಗೊಳಿಸಲಿದೆ ಎಮದು ಆಶೀಷ್​ ಮಾಹಿತಿ ನೀಡುತ್ತಾರೆ.
ದೇಗುಲದಲ್ಲಿ ಹೆಚ್ಚುವರಿಯಾಗಿ ಮೂರು ಮಂಟಪಗಳನ್ನು ರೂಪಿಸಲಾಗುತ್ತಿದೆ. ರಂಗ ಮಂಟಪ, ನೃತ್ಯ ಮಂಟಪ ಹಾಗೂ ಗೂಡ್​ ಮಂಟಪ ನಿರ್ಮಿಸಲಾಗುತ್ತಿದೆ. ಇದಾದ ನಂತರ ಗರ್ಭ ಗುಡಿ ಇರಲಿದೆ.
ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
