ನವದೆಹಲಿ:ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆ ತರುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬದಲಾವಣೆ ಏಕಕಂತಿನಲ್ಲಿ ನಡೆಯದು. ಬದಲಾಗಿ ಹಂತ ಹಂತವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಈ ವಿದ್ಯಮಾನದ ಬಗ್ಗೆ ಅರಿವು ಇರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಎಸ್​ಟಿ ಜಾರಿಗೊಳಿಸಿ ನಾಲ್ಕು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಎಸ್​ಟಿ ಕೌನ್ಸಿಲ್, ಮೊದಲ ಬಾರಿಗೆ ಜಿಎಸ್​ಟಿ ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆ ಕಡೆಗೆ ಗಮನಹರಿಸಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಸಂಬಂಧ ಸಚಿವರ ಎರಡು ಗುಂಪುಗಳನ್ನು ರಚಿಸಿದೆ. ತೆರಿಗೆ ದರ, ಸ್ಲ್ಯಾಬ್, ವಿನಾಯಿತಿ ಪಟ್ಟಿ ಮತ್ತು ವ್ಯವಸ್ಥೆಯ ಉತ್ತಮ ಅನುಸರಣೆಗಾಗಿ ತಂತ್ರಜ್ಞಾನದ ಬಳಕೆಯನ್ನು ಗಮನಿಸಿ ವರದಿ ನೀಡುವಂತೆ ಸಚಿವರ ಗುಂಪುಗಳಿಗೆ ಸಮಿತಿ ಸೂಚಿತ್ತು. ಈ ಸಮಿತಿಗಳು ಈ ತಿಂಗಳಲ್ಲೇ ವರದಿ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ತಲೆಬಿಸಿ:ದೇಶಾದ್ಯಂತ ಜಿಎಸ್​ಟಿ ಜಾರಿಗೊಳಿಸಿದ ವೇಳೆ ರಾಜ್ಯಗಳಿಗೆ ಐದು ವರ್ಷಗಳ ಕಾಲ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಐದು ವರ್ಷಗಳ ಕಾಲಾವಧಿ ಈ ವರ್ಷ ಜೂನ್ ತಿಂಗಳಿಗೆ ಮುಕ್ತಾಯವಾಗುತ್ತಿದೆ. ಈ ನಡುವೆ, ರಾಜ್ಯಗಳಲ್ಲಿ ಸೆಸ್ ಸಂಗ್ರಹದ ಅವಕಾಶವನ್ನು ವಿಸ್ತರಿಸಲಾಗಿದೆ. ಆದರೂ, ಇದರಿಂದ ಸಂಗ್ರಹವಾದ ಆದಾಯ ಈಗಾಗಲೇ ಪಡೆದುಕೊಂಡ ಸಾಲ ಮರುಪಾವತಿಸಲು ಹೋಗಿಬಿಡುತ್ತದೆ. ಹೀಗಾಗಿ ತೆರಿಗೆ ಆದಾಯದ ಕೊರತೆ ಅನುಭವಿಸುತ್ತಿರುವ ರಾಜ್ಯ ಸರ್ಕಾರಗಳಿಗೆ ಇದು ಚಿಂತೆಯನ್ನು ತಂದಿಟ್ಟಿದೆ.
ಪರಿಹಾರ ಏನು?:ಜಿಎಸ್​ಟಿ ಪರಿಣತರ ಪ್ರಕಾರ, ಜಿಎಸ್​ಟಿ ಆದಾಯ ವೃದ್ಧಿ ಒಂದೇ ಸದ್ಯ ಉಳಿದುಕೊಂಡಿರುವುದು ಒಂದೇ ದಾರಿ. ಇದನ್ನು ಒಂದೋ ಆಡಳಿತಾತ್ಮಕವಾಗಿ ಸಾಧಿಸಬೇಕು ಅಥವಾ ಜಿಎಸ್​ಟಿ ದರಗಳ ರಚನಾತ್ಮಕ ವಿನ್ಯಾಸ ಮರು ಹೊಂದಿಸುವಿಕೆ ಯೊಂದಿಗೆ ಸಾಧಿಸಬೇಕು. ಅಂದರೆ ವಿನಾಯಿತಿ ರದ್ದುಗೊಳಿಸಿ, ಸುಂಕ ವಿಲೋಮವನ್ನು ಕಡಿತಗೊಳಿಸಬೇಕು. ಅದೇ ರೀತಿ ಸ್ಲ್ಯಾಬ್​ಗಳನ್ನು ಕಡಿಮೆ ಮಾಡಬೇಕು.
ಆನ್​ಲೈನ್​ ಫ್ರೆಂಡ್​ ಜತೆ ಕಷ್ಟ ಹೇಳ್ಕೊಂಡಿದ್ದಕ್ಕೆ 86 ಲಕ್ಷ ರೂ. ಕಳ್ಕೊಂಡ; ಅದೃಷ್ಟವಶಾತ್​ ಕಿಡ್ನಿ ಉಳೀತು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
