ನವದೆಹಲಿ:ಇಡೀ ಜಗತ್ತು ಕೊವಿಡ್​-19ರ ವಿರುದ್ಧ ಹೋರಾಡುತ್ತಿದ್ದರೆ, ಕೆಲವು ಜನರು ಬೇರೆ ಕೆಲವು ವೈರಸ್​ಗಳನ್ನು ಹರಡುವಲ್ಲಿ ಬಿಜಿಯಾಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಅಲಿಪ್ತ ಚಳವಳಿ ರಾಷ್ಟ್ರಗಳ ಶೃಂಗಸಭೆ (ನಾಮ್​)ಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಸದ್ಯ ಕರೊನಾ ವೈರಸ್​ ಬಿಕ್ಕಟ್ಟು ಹೆಚ್ಚಾಗಿದೆ. ಇಡೀ ವಿಶ್ವ ಕೊವಿಡ್​ ವಿರುದ್ಧ ಹೋರಾಡುತ್ತಿದೆ. ಇದೇ ಸಮಯದಲ್ಲಿ ಕೆಲವರು ಭಯೋತ್ಪಾದನೆ, ನಕಲಿ ಸುದ್ದಿಗಳಂತಹ ಮಾರಕ ವೈರಸ್​ ಹರಡುವ ಮೂಲಕ ಸಮುದಾಯ, ದೇಶವನ್ನು ಒಡೆಯುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾಪ್ರಭುತ್ವ, ಶಿಸ್ತು ಮತ್ತು ನಿಶ್ಚಿತತೆಗಳಿಂದ ಜನಾಂದೋಲನ ಸೃಷ್ಟಿಸಬಹುದು ಎಂದು ನಾವು ಈ ಕರೊನಾ ಸಂಕಷ್ಟದ ಕಾಲದಲ್ಲಿ ತೋರಿಸಿದ್ದೇವೆ. ಭಾರತೀಯರು ಇಡೀ ವಿಶ್ವವನ್ನು ಒಂದು ಕುಟುಂಬದಂತೆ ನೋಡುತ್ತೇವೆ. ನಾವು ನಮ್ಮ ದೇಶದ ಜನರ ಸುರಕ್ಷತೆಯ ಜತೆಗೆ ಇತರ ರಾಷ್ಟ್ರಗಳಿಗೂ ಕೊವಿಡ್​ ಎದುರಿಸಲು ಸಹಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:‘ಕೆಎಸ್​ಆರ್​ಟಿಸಿಗೆ ಕೊಟ್ಟ ಚೆಕ್​ ಮೇಲೆ ನನ್ನ ಸಹಿ ಇಲ್ಲ..ಹಾಗಾಗಿ ಅದು ನಕಲಿ ಎಂದು ಅಶೋಕಣ್ಣ ಹೇಳಿದಾರೆ..ಆದ್ರೆ….’
ನಾವು ನಮ್ಮ ನೆರೆರಾಷ್ಟ್ರಗಳಿಗೆ ವೈದ್ಯಕೀಯ ಸಹಾಯ ಮಾಡಿದ್ದೇವೆ. ನಮ್ಮ ದೇಶದ ವೈದ್ಯಕೀಯ ತಜ್ಞರು ಅಗತ್ಯ ಇರುವ ರಾಷ್ಟ್ರಗಳ ವೈದ್ಯಕೀಯ ಸಿಬ್ಬಂದಿಗೆ ಆನ್​ಲೈನ್ ಮೂಲಕವೇ ತರಬೇತಿ ನೀಡುತ್ತಿದ್ದಾರೆ. ಇವತ್ತು ಇಡೀ ಮನುಕುಲ ಕೊವಿಡ್​-19ರಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಈ ಸಮಯದಲ್ಲಿ ನಾಮ್​ ಜಾಗತಿಕ ಒಗ್ಗಟ್ಟನ್ನು ಪ್ರೋತ್ಸಾಹಿಸಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:ಜಗತ್ತಿನಾದ್ಯಂತ ಏರುಗತಿಯಲ್ಲಿದೆ ಚೀನಾ ವಿರೋಧಿ ಭಾವನೆ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − 1 =
Remember me
