ಸತ್ನಾ:ವೃದ್ಧಾಪ್ಯ ವೇತನದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ವೃದ್ಧ ತಾಯಿಯನ್ನೇ ಹೊಡೆದು ಕೊಂದಿರುವ ಘಟನೆ ಹೃದಯ ವಿದ್ರಾವಕ ಪ್ರಕರಣವೊಂದು ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸತ್ನಾ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ:ಏಕಕಾಲಕ್ಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ: ಎಲ್ಲರ ಆರೋಗ್ಯವೂ ಸ್ಥಿರ..
ಮೃತ ದುರ್ದೈವಿಯನ್ನು ಛೋಟಿ ಬಾಯಿ ಕೋಲ್ ಎಂದು ಗುರುತಿಸಲಾಗಿದ್ದು, ಗೋಪಾಲಿ ಕೋಲ್ ಎಂಬಾತನೇ ತನ್ನ ತಾಯಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಸೋನೋರಾ ಗ್ರಾಮದ ನಿವಾಸಿಯಾಗಿರುವ ಈಕೆ ತನ್ನ ಪತಿ ಧುಮಲ್ಲ ಕೋಲ್, ಮಗಳು ಬೇಬಿ ಕೋಲ್ ಮತ್ತು ಪುತ್ರನೊಂದಿಗೆ ವಾಸವಾಗಿದ್ದಳು.ಗುರುವಾರದಂದು ಮಹಿಳೆಯು ತನ್ನ ಅಗತ್ಯಕ್ಕಾಗಿ ಬ್ಯಾಂಕ್‌ನಿಂದ ಸ್ವಲ್ಪ ಹಣವನ್ನು ಹಿಂಪಡೆದಿದ್ದು, ಇದನ್ನು ಗಮನಿಸಿದ್ದ ಮಗ ಆಕೆಗೆ ಬಳಿ ಹಣ ಕೇಳತೊಡಗಿದ್ದ. ಆದರೆ ಮೃತ ಛೋಟಿಬಾಯಿ ಇದನ್ನು ನಿರಾಕರಿಸಿದ್ದು, ಇದರಿಂದ ಕುಪಿತಗೊಂಡ ಆರೋಪಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆಕೆಯ ಕಿರುಚಾಟವನ್ನು ಕೇಳಿದ ಇತರ ಕುಟುಂಬ ಸದಸ್ಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.ಮತ್ತೊಂದೆಡೆ, ಹಲ್ಲೆ ನಡೆದರೂ ಸಹಿತ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮನೆಯಲ್ಲಿ ಇರಿಸಿದ್ದು, ವೃದ್ಧೆಯ ಆರೋಗ್ಯ ರಾತ್ರಿ ಹದಗೆಡತೊಡಗಿತ್ತು. ಮರುದಿನ ಕುಟುಂಬ ಸದಸ್ಯರು ಮಹಿಳೆಯನ್ನು ಸಿವಿಲ್ ಆಸ್ಪತ್ರೆಗೆ ಕರೆತಂದಿದ್ದು, ಈ ವೇಳೆ ಪೊಲೀಸರು ಸುದ್ದಿ ತಿಳಿದು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಮಹಿಳೆಯ ಸ್ಥಿತಿ ಗಂಭೀರವಾದುದನ್ನು ಕಂಡ ವೈದ್ಯರು ಆಕೆಯನ್ನು ಸತ್ನಾ ಜಿಲ್ಲಾ ಆಸ್ಪತ್ರೆಗೆ ಒಯ್ಯುವಂತೆ ಸೂಚಿಸಿದ್ದರೂ ಸಹಿತ ಮನೆಯಯವರು ಆಕೆಯನ್ನು ಮರಳಿ ಗ್ರಾಮಕ್ಕೆ ಕರೆದೊಯ್ದಿದ್ದಾರೆ.ಇದನ್ನೂ ಓದಿ:ಮನೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಮಹಿಳೆಯ ಕತ್ತು ಸೀಳಿದ ಹಂತಕರು: ಆಪ್ತರಿಂದಲೇ ಕೃತ್ಯ..?ಈ ವೇಳೆ ಮಹಿಳೆಗೆ ಚಿಕಿತ್ಸೆ ಕೊಡಿಸುವ ಬದಲು ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವ ವಿಷಯ ಅಮರಪತನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಛೋಟಿಬಾಯಿಯನ್ನು ಮತ್ತೆ ಜಿಲ್ಲಾಸ್ಪತ್ರೆಗೆ ಕಳುಹಿದ್ದರು. ಆದರೆ ದುರದೃಷ್ಟವಶಾತ್​​, ಚಿಕಿತ್ಸೆ ಪಡೆಯುತ್ತಿದ್ದ ಆಕೆ ಭಾನುವಾರ ಸಂಜೆ ಮೃತಪಟ್ಟಿದ್ದು, ಆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೃತ ಮಹಿಳೆ ಛೋಟಿ ಬಾಯಿ ಅವರ ಪುತ್ರಿ ಬೇಬಿ ಕೋಲ್, ಪಿಂಚಣಿ ಹಣಕ್ಕಾಗಿ ತನ್ನ ಸಹೋದರ ಗೋಪಾಲಿ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಮರಪತನ್ ಪೊಲೀಸ್ ಠಾಣೆ ಪ್ರಭಾರಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 12 =
Remember me
