ಭುವನೇಶ್ವರ:ಮದುವೆಯಾದ ಕೆಲವೇ ವರ್ಷಗಳಲ್ಲಿ ಕಾಯಿಲೆಯಿಂದ ಮಗ ತೀರಿಕೊಂಡ ಬಳಿಕ ಸೊಸೆಗೆ ಬೇರೊಬ್ಬನ ಜೊತೆ ಮರುವಿವಾಹ ಮಾಡಿಸುವ ಮೂಲಕ ಒಡಿಶಾದ ಮಾಜಿ ಶಾಸಕರೊಬ್ಬರು ಮಾದರಿಯಾಗಿದ್ದಾರೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶಾಸಕರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಶಾಸಕರ ಹೆಸರು ನಬಿನ್​ ನಂದಾ. ಒಡಿಶಾದ ಧೆನಂಕನಲ್​ ಜಿಲ್ಲೆಯ ಗಂಡಿಯಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ಅವರ ಪುತ್ರ ಸಂಬಿತ್​ ಜೊತೆ ಮಧುಸ್ಮಿತಾ ಎಂಬ ಯುವತಿಗೆ ಮದುವೆ ನಿಶ್ಚಯ ಮಾಡಿ, ಅದ್ಧುರಿಯಾಗಿ ಮದುವೆ ಮಾಡಿದ್ದರು. ಆದರೆ, ಕರೊನಾದಿಂದ ಬಳಲಿದ ಸಂಬಿತ್​ರನ್ನು ಕಟಕ್​ನ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ 2021ರ ಮೇ 22ರಂದು ಸಂಬಿತ್​ ತೀರಿಕೊಂಡಿದ್ದ.
ಸಂಬಿತ್ ಸಾವಿನ ನಂತರ ಮಧುಸ್ಮಿತಾ ಒಂಟಿಯಾದರು. ಮಾಜಿ ಶಾಸಕ ನಬಿನ್​ ಅವರು ಸೊಸೆಯ ಒಂಟಿತನವನ್ನು ಸಹಿಸಲಾಗದೆ ಆಕೆಯನ್ನು ಮರು ಮದುವೆಗೆ ಒತ್ತಾಯ ಮಾಡಿ, ಸೊಸೆ ಹಾಗೂ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟು ಬಾಲಸೋರ್ ಜಿಲ್ಲೆಯ ಶಿವಚಂದನ್ ಎಂಬ ಯುವಕನೊಂದಿಗೆ ಮರು ವಿವಾಹ ಮಾಡಿಸಿದ್ದಾರೆ. ಮಂಗಳವಾರ ಭುವನೇಶ್ವರದ ನಾಯಪಲ್ಲಿ ಲಕ್ಷ್ಮಿ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆದಿದೆ. ಕಾಕತಾಳೀಯವೆಂಬಂತೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದೇ ಮದುವೆ ನಡೆದಿದೆ. ನಬಿನ್ ನಂದಾ ಅವರ ಸೊಸೆ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗುತ್ತಿದೆ.
ಈ ದಿನವನ್ನು ನಾನೆಂದು ಮರೆಯಲಾರೆ. ನಾನು ತಪ್ಪು ಮಾಡಿದೆನೋ ಗೊತ್ತಿಲ್ಲ. ಹಿಂದೂ ಆಚಾರ-ವಿಚಾರಗಳಿಗೆ ವಿರುದ್ಧವಾಗಿ ನನ್ನ ಸೊಸೆಯನ್ನು ಮರು ಮದುವೆ ಮಾಡಿಸಿದೆ. ನನ್ನ ಹಿರಿಯ ಮಗ ಸತ್ತು ಹೋದ್ದರಿಂದ ಆಕೆಯ ಒಂಟಿತನವನ್ನು ನೋಡಲಾಗದೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಮ್ಮ ಮನೆಗೆ ಸೊಸೆಯಾಗಿ ಬಂದಳು. ಈಗ ಆಕೆ ಓರ್ವ ಹೆಣ್ಣು ಮಗಳಿದ್ದಾಳೆ ಎಂದು ನಬಿನ್​ ಹೇಳಿದರು.
ನಬಿನ್​ ಅವರು ಈ ಹಿಂದೆ ಬಿಜೆಡಿ ಪರವಾಗಿ ಗಾಂಧಿಯಿಂದ ಶಾಸಕರಾಗಿ ಗೆದ್ದಿದ್ದರು. 2019 ರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು ಆದರೆ ಗೆಲ್ಲಲು ವಿಫಲವಾದರು.(ಏಜೆನ್ಸೀಸ್​)
ಗುರುಲಿಂಗಸ್ವಾಮಿ ಹೊಳಿಮಠ ಹೆಸರಿನ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಗೆ ಶಂಕರ ಪಾಗೋಜಿಗೆ ಆಯ್ಕೆ

VIDEO | ಆಟೋರಿಕ್ಷಾ ಚಾಲಕರಿಗೆ ಇದೊಂಥರಾ ವಿಚಿತ್ರ ಸ್ಪರ್ಧೆ!

ಕ್ಷೇತ್ರದ ಮತದಾರರಿಗೆ ಆಮಿಷ: ಬಿಜೆಪಿಗೆ ಅಸ್ತ್ರವಾದ ಕಾಂಗ್ರೆಸ್​ ನಾಯಕ ರಾಮಲಿಂಗ ರೆಡ್ಡಿ ಕುಕ್ಕರ್​ ಹಂಚುವ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
