ನವದೆಹಲಿ:ಅಮ್ಮ 52ನೇ ವಯಸ್ಸಲ್ಲಿ ಪ್ರೇಮವಿವಾಹವಾಗಿದ್ದನ್ನು ನೋಡಿ ಸಂತೋಷಪಟ್ಟ ಮಗ, ತನ್ನ ತಾಯಿಯ ಜೀವನದ ಮೈಲಿಗಲ್ಲುಗಳನ್ನು ಹಂಚಿಕೊಂಡಿದ್ದಲ್ಲದೆ, ಅಂಥ ಇತರ ತಾಯಂದಿರ ಕುರಿತಾಗಿ ಸಂದೇಶವೊಂದನ್ನು ಕೂಡ ಹಂಚಿಕೊಂಡಿದ್ದಾನೆ.
ಹೀಗೆ ತನ್ನ 52ನೇ ವಯಸ್ಸಿನಲ್ಲಿ ಪ್ರೇಮವಿವಾಹವಾದ ತಾಯಿಯ ಹೆಸರು ಕಾಮಿನಿ ಗಾಂಧಿ. ಈಕೆ 57 ವರ್ಷದ ಕಿರಿಟ್​ ಪಡಿಯಾ ಎಂಬವರನ್ನು ಇದೇ ಪ್ರೇಮಿಗಳ ದಿನದಂದು ತನ್ನ ಬಂಧುಬಳಗ-ಆಪ್ತೇಷ್ಟರ ಸಮ್ಮುದಲ್ಲಿ ಮದುವೆಯಾಗಿದ್ದಾರೆ. ಈಕೆಯ ಪುತ್ರ ದುಬೈನಲ್ಲಿ ಕೆಲಸ ಮಾಡುತ್ತಿರುವ ಜಿಮೀತ್ ತನ್ನ ತಾಯಿಯ ಕುರಿತು ಈ ರೀತಿ ಹೇಳಿಕೊಂಡಿದ್ದಾರೆ.
2013ರಲ್ಲಿ ಅಂದರೆ ಆಕೆ ತನ್ನ 44ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. 2019ರಲ್ಲಿ ಮೂರನೇ ಹಂತದಲ್ಲಿದ್ದ ಸ್ತನ ಕ್ಯಾನ್ಸರ್ ಪತ್ತೆಯಾಯಿತು. ಹಲವಾರು ಕೀಮೋಥೆರಪಿಗಳ ಬಳಿಕ 2 ವರ್ಷಗಳ ನಂತರ ಆಕೆ ಮತ್ತೆ ಮೊದಲಿನಂತಾದರು. ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕರೊನಾ ಡೆಲ್ಟಾ ವೇರಿಯಂಟ್​ ಸೋಂಕಿಗೆ ಒಳಗಾದರು. ಆಮೇಲೆ ಮಾನಸಿಕ ಖಿನ್ನತೆಗೂ ಒಳಗಾದರು. ನಾವು ನಮ್ಮ ಜೀವನದಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದಾಗ ಬಹಳಷ್ಟು ಸಮಯ ಆಕೆ ಭಾರತದಲ್ಲಿ ಒಂಟಿಯಾಗಿದ್ದರು. ಆದರೂ ಆಕೆ ಬಿಟ್ಟುಕೊಡಲಿಲ್ಲ, ತನ್ನ ಪ್ರೀತಿಯನ್ನು ಕಂಡುಕೊಂಡರು. ಭಾರತೀಯ ಮಹಿಳೆಯೊಬ್ಬರು ಸಾಮಾನ್ಯವಾಗಿ ಎದುರಿಸಬಹುದಾದ ಎಲ್ಲ ನಿಂದೆ-ಕಳಂಕಗಳನ್ನು ಲೆಕ್ಕಿಸದೆ ಆಕೆ ತನ್ನ ಪ್ರೀತಿಪಾತ್ರರನ್ನು ಮದುವೆಯಾದರು.
ಹೌದು.. ಆಕೆ ತನ್ನ 52ನೇ ವಯಸ್ಸಿನಲ್ಲಿ ತನ್ನ ಪ್ರೇಮಿಯನ್ನು ಕಂಡುಕೊಂಡರು. ಆಕೆ ನಿಜವಾದ ಹೋರಾಟಗಾತಿ, ರಿಯಲ್ ಫೈಟರ್. ಆಕೆ ನನ್ನ ಅಮ್ಮ…ಹೀಗೆಂದು ಹೇಳಿಕೊಂಡಿರುವ ಜಿಮೀತ್, ‘ನನ್ನ ಪೀಳಿಗೆಯ ಎಲ್ಲರಿಗೂ ಇದೊಂದು ವಿಷಯ ಹೇಳಲು ಇಚ್ಛಿಸುತ್ತೇನೆ. ನಿಮ್ಮ ತಂದೆ-ತಾಯಿಯಲ್ಲಿ ಯಾರಾದರೂ ಏಕಾಂಗಿಯಾಗಿದ್ದರೆ, ಸಂಗಾತಿಯನ್ನು ಕಂಡುಕೊಳ್ಳುವ ಅವರ ನಿರ್ಧಾರವನ್ನು ಬೆಂಬಲಿಸಿ. ಪ್ರೀತಿ ಹಾಗೂ ಮಾನಸಿಕ ಸ್ವಾಸ್ಥ್ಯ ಎಲ್ಲಕ್ಕಿಂತ ಮುಖ್ಯ’ ಎಂದು ಲಿಂಕ್ಡ್​ಇನ್​ನಲ್ಲಿ ಹೇಳಿದ್ದಾರೆ.


70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
