ಗಾಂಧಿನಗರ: ಮಗನೊಬ್ಬ ತಾಯಿಯನ್ನೇ ಕೊಂದು, ಅಂಗಳದಲ್ಲಿ ಆಕೆಯ ಮೃತ ದೇಹವನ್ನಿಟ್ಟು, ಬೆಂಕಿ ಹಚ್ಚಿ, ಮಂತ್ರ ಪಠಿಸಿರುವ ವಿಚಿತ್ರ ಘಟನೆ ಗುಜರಾತ್​ನ ಬರೋಡಾದಲ್ಲಿ ನಡೆದಿದೆ. ಸಹೋದರ ಈ ರೀತಿ ಮಾಡಿದ್ದಕ್ಕೆ ಕಾರಣ ಕೇಳಿದ ಸಹೋದರಿ ಶಾಕ್​ ಆಗಿದ್ದು, ಪೊಲೀಸ್​ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ:ರಾಜೀನಾಮೆ ನೀಡಿ ಒಂದೇ ದಿನದಲ್ಲಿ ಹಿಂಪಡೆದ ಬಿಜೆಪಿ ಸಂಸದ! ಮನವೊಲಿಸುವಲ್ಲಿ ಯಶಸ್ವಿಯಾದ ಸಿಎಂ
ಬರೋಡಾದ ದಿವ್ಯೇಶ್​ ಸೋಮವಾರದಂದು ತಾಯಿಯ ಎದೆಗೆ ಹೊಡೆದಿದ್ದಾನೆ. ನಂತರ ಆಕೆಗೆ ಮನಸೋಇಚ್ಛೆ ಹೊಡೆದು ಕೊಲೆ ಮಾಡಿದ್ದಾನೆ. ಆಕೆಯ ಮೃತ ದೇಹವನ್ನು ಅಂಗಳಕ್ಕೆ ಎಳೆ ತಂದಿದ್ದಾನೆ. ಅಲ್ಲಿ ದೇಹದ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಪಕ್ಕದಲ್ಲಿ ನಿಂತು “ಓಂ ಶಾಂತಿ ಓಂ” ಎಂದು ಪಠಿಸಲಾರಂಭಿಸಿದ್ದಾನೆ. ಈ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ಕೂಡಲೇ ಆತನ ಸಹೋದರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಇದನ್ನೂ ಓದಿ:ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!
ಮನೆಗೆ ಬಂದ ಸಹೋದರಿ ದಿವ್ಯೇಶ್​ನನ್ನು ಪ್ರಶ್ನಿಸಿದ್ದಾಳೆ. ಅಮ್ಮನನ್ನು ಏಕೆ ಕೊಂದೆ ಎಂದು ಕೇಳಿದ್ದಾಳೆ. ಅದಕ್ಕೆ ಉತ್ತರಿಸಿದ ದಿವ್ಯೇಶ್​, ಸತ್ತು ಹೋಗಿರುವ ನನ್ನ ಅಪ್ಪ ಕನಸಿನಲ್ಲಿ ಬಂದಿದ್ದರು. ಅಮ್ಮನನ್ನು ನನ್ನ ಬಳಿ ಕಳುಹಿಸಿಕೊಡು ಎಂದು ಕೇಳಿದರು. ಅದಕ್ಕೇ ಹೀಗೆ ಮಾಡಿದೆ ಎಂದು ಹೇಳಿದ್ದಾಳೆ. ದಿವ್ಯೇಶ್​ನ ನಡವಳಿಕೆ ಕಂಡು ಗಾಬರಿಗೊಂಡಿರುವ ಸಹೋದರಿ, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)
ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen + 9 =
Remember me
