ಕೋಲ್ಕತ್ತ: ಕರೊನಾ ಸೋಂಕು ಬಂದ ಮೇಲೆ ಕೆಲವು ಆಸ್ಪತ್ರೆಗಳು ಸುಲಿಗೆಗೆ ಇಳಿದುಬಿಟ್ಟಿವೆ. ದೇಶಾದ್ಯಂತ ಹಲವು ಆಸ್ಪತ್ರೆಗಳಿಂದ ಇದು ವರದಿಯಾಗುತ್ತಲೇ ಇದೆ. ಚಿಕಿತ್ಸೆಗೆ ವಿಪರೀತ ಹಣ ಕೇಳುವುದು, ಮೃತ ದೇಹ ವಾಪಸ್ ಬೇಕೆಂದರೆ ಹಣಕ್ಕೆ ಬೇಡಿಕೆ ಇಡುವ ಕಾರ್ಯಗಳನ್ನೂ ಮಾಡುತ್ತಿದ್ದಾರೆ.
ಇದೀಗ ಪಶ್ಚಿಮ ಬಂಗಾಳದಲ್ಲೂ ಇಂಥದ್ದೇ ಘಟನೆ ನಡೆದಿದೆ. ಕರೊನಾ ಸೋಂಕಿನಿಂದ ಸಾವನ್ನಪ್ಪಿದ ತಂದೆಯ ಶವ ನೋಡಲು ಆಸ್ಪತ್ರೆಯ ಸಿಬ್ಬಂದಿ ಪುತ್ರನ ಬಳಿ 51,000 ರೂಪಾಯಿ ಕೇಳಿ, ಅಮಾನವೀಯತೆ ತೋರಿದ್ದಾರೆ.
ಹರಿ ಗುಪ್ತಾ ಎಂಬುವರು ಕರೊನಾದಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆದರೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ನಮಗೆ ಆ ಬಗ್ಗೆ ಮಾಹಿತಿಯನ್ನೇ ನೀಡಲಿಲ್ಲ ಎಂದು ಅವರ ಪುತ್ರ ಸಾಗರ್​ ಗುಪ್ತಾ ಹೇಳಿದ್ದಾರೆ.ಶನಿವಾರ ರಾತ್ರಿಯೇ ಅವರು ಸತ್ತಿದ್ದರೂ, ಭಾನುವಾರ ಮಧ್ಯಾಹ್ನದವರೆಗೂ ನಮಗೆ ಅದರ ಬಗ್ಗೆ ತಿಳಿಸಲಿಲ್ಲ. ಭಾನುವಾರ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಆಸ್ಪತ್ರೆಯಿಂದ ಕರೆ ಬಂತು. ಆಗ ನಾನು ಪ್ರಶ್ನಿಸಿದರೆ, ನಿಮ್ಮ ಸಂಪರ್ಕ ಮಾಡಲು, ದೂರವಾಣಿ ಸಂಖ್ಯೆ ಇರಲಿಲ್ಲ ಎಂದು ಉತ್ತರಿಸಿದರು ಎಂದು ತಿಳಿಸಿದ್ದಾರೆ.
ನಾವು ಆಸ್ಪತ್ರೆಗೆ ಹೋಗಿ ನೋಡಿದರೆ, ನಾವು ಮೃತ ದೇಹವನ್ನು ಅಂತ್ಯಕ್ರಿಯೆಗೆ ಕಳಿಸಿದ್ದೇವೆ ಎಂದು ಹೇಳಿದರು. ನಾವು ಕೂಡಲೇ ಶಿಬ್​​ಪುರ್​ ಚಿತಾಗಾರಕ್ಕೆ ಹೋದೆವು. ಅಲ್ಲಿ ಹೋಗಿ ನಮ್ಮ ತಂದೆಯ ಮೃತದೇಹವನ್ನು ತೋರಿಸುವಂತೆ ಕೇಳಿದರೆ, 51000 ರೂಪಾಯಿ ನೀಡಿದರೆ ಮಾತ್ರೆ ಅವಕಾಶ ಕೊಡುತ್ತೇವೆ ಎಂದು ಹೇಳಿದರು ಎಂದು ಸಾಗರ್​ ಗುಪ್ತಾ ತಿಳಿಸಿದ್ದಾರೆ.ಆದರೆ ನಂತರ ತುಂಬ ಕೇಳಿಕೊಂಡಾಗ ಹಣವನ್ನು 31000ಕ್ಕೆ ಇಳಿಸಿದರು. ಆದರೆ ನಾವು ಹಣ ನೀಡಲಿಲ್ಲ. ಬದಲಿಗೆ ಪೊಲೀಸರಿಗೆ ತಿಳಿಸಿದೆವು ಎಂದು ಹೇಳಿದ್ದಾರೆ.ಇದನ್ನೂ ಓದಿ:ಸತ್ತಿದ್ದಾಳೆ ಎಂದುಕೊಂಡಾಕೆ ಗಂಡ, ಮಗುವಿನೊಂದಿಗೆ ಪ್ರತ್ಯಕ್ಷ: ಮಾಡದ ಹತ್ಯೆಗೆ ಮೂವರಿಗೆ ಜೈಲುಶಿಕ್ಷೆ
ಸ್ಥಳಕ್ಕೆ ಪೊಲೀಸರು ಬಂದರೂ, ಅಂತ್ಯಸಂಸ್ಕಾರಕ್ಕೆ ಶವವನ್ನು ತಂದಿದ್ದ ಸಿಬ್ಬಂದಿ ತಲೆ ಕೆಡಿಸಿಕೊಳ್ಳಲಿಲ್ಲ. ಅವರು ಶವವನ್ನು ಸಮಾಧಿ ಮಾಡಿದರು. ಪೊಲೀಸರ ಬಳಿ, ನೀವು ಹೋಗಿ ನಮ್ಮ ಉನ್ನತ ಅಧಿಕಾರಿಗಳ ಬಳಿ ಮಾತನಾಡಿಕೊಳ್ಳಿ ಎಂದರು ಎಂದು ಸಾಗರ್​ ಗುಪ್ತಾ ಮಾಹಿತಿ ನೀಡಿದ್ದಾರೆ.
ನಾವು ಮೊಬೈಲ್​​ನಲ್ಲಿ ಈ ಎಲ್ಲ ದೃಶ್ಯಗಳನ್ನೂ ವಿಡಿಯೋ ಮಾಡಲು ಪ್ರಯತ್ನಿಸಿದೆವು. ಅದಕ್ಕೂ ಅವಕಾಶ ಕೊಡಲಿಲ್ಲ ಎಂದು ಅಲವತ್ತುಕೊಂಡಿದ್ದಾರೆ. (ಏಜೆನ್ಸೀಸ್​)
ಅಸ್ಸಾಂ ಅನಿಲ ಬಾವಿ ಬೆಂಕಿ ನಂದಿಸುವಲ್ಲಿ ಮಹತ್ವದ ಯಶಸ್ಸು; 76 ದಿನಗಳಿಂದ ಕಾರ್ಯಾಚರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
