ಲಖನೌ:ಸಲಿಂಗಕಾಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ತಂದೆಯನ್ನು ಸ್ನೇಹಿತರೊಂದಿಗೆ ಸೇರಿ ಪುತ್ರನೇ ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಪುತ್ರನು ಸೇರಿ ಇಬ್ಬರು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಈ ಘಟನೆ ಸೋಮವಾರ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯನ್ನು ಮೋಹನ್​ ಲಾಲ್​ ಶರ್ಮ (55) ಎಂದು ಗುರುತಿಸಲಾಗಿದೆ. ಈತ ಟ್ಯಾಕ್ಸಿ ಚಾಲಕ ಮತ್ತು ಮಥುರಾ ನಗರದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂತಪದ ಏರಿಯಾದ ನಿವಾಸಿ. ಮೋಹನ್​ ಲಾಲ್​ ಮೃತದೇಹವು ಗುದ್ದಲಿಯಿಂದ ಹಲ್ಲೆ ಮಾಡಿದ ಗಾಯಗಳೊಂದಿಗೆ ಮೇ 4ರಂದು ಅವರ ಮನೆಯಿಂದ ಸುಮಾರು 5 ಕಿಮೀ ದೂರದಲ್ಲಿರುವ ರಾಯಾ ಪೊಲೀಸ್ ಠಾಣೆ ವ್ಯಾಪ್ತಿಯ ಐರಾ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಭಾಗಶಃ ಸುಟ್ಟುಹೋದ ಲೋಹದ ಕಂಟೈನರ್​ನಲ್ಲಿ ಪತ್ತೆಯಾಯಿತು.
ಈ ಪ್ರಕರಣದ ಬಗ್ಗೆ ಮಥುರಾದ ಪೊಲೀಸ್​ ವರಿಷ್ಠಾಧಿಕಾರಿ (ಗ್ರಾಮೀಣ) ತ್ರಿಗುನ್ ಬಿಸೆನ್ ಮಾತನಾಡಿ, ಮೃತ ಮೋಹನ್​ ಲಾಲ್​ ಅವರ ಅವಿವಾಹಿತ ಮಗ ಅಜಿತ್ (23), ಸಹ ಆರೋಪಿ ಕೃಷ್ಣ ವರ್ಮಾ (20) ಜೊತೆ ಸಲಿಂಗ ಸಂಬಂಧವನ್ನು ಹೊಂದಿದ್ದನು. ಇಬ್ಬರ ಸಂಬಂಧಕ್ಕೆ ತಂದೆ ಅಡ್ಡಿಯಾಗಿದ್ದಕ್ಕೆ ತನ್ನಿಬ್ಬರು ಸ್ನೇಹಿತರಾದ ಲೋಕೇಶ್ (21) ಮತ್ತು ದೀಪಕ್ (22) ಜತೆ ಸೇರಿ, ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿರುವ ಆರೋಪಿ ಕೃಷ್ಣ, ಅಜಿತ್‌ನನ್ನು ತನ್ನ ಪತಿ ಎಂದು ಪರಿಗಣಿಸಿದ್ದು, ಆತನನ್ನು ಬಿಟ್ಟು ಹೋಗಲು ನನಗೆ ಇಷ್ಟವಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ಇನ್ನೂ ಅಜಿತ್ ತನ್ನ ಸಂಬಂಧದ ಬಗ್ಗೆ ತಂದೆಯೊಂದಿಗೆ ಆಗಾಗ ಜಗಳವಾಡುತ್ತಿದ್ದನು. ಮೇ 1 ರಂದು ಮೋಹನ್ ಲಾಲ್, ಕೃಷ್ಣ ಮತ್ತು ಮಗ ಅಜಿತ್​ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದಾದ ಮಾರನೇ ದಿನ ಅಂದರೆ ಮೇ 2ರ ರಾತ್ರಿ ಬರ್ಬರವಾಗಿ ಹತ್ಯೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಮೃತದೇಹವನ್ನು ಲೋಹದ ಪೆಟ್ಟಿಗೆಯಲ್ಲಿ ಇರಿಸುವ ಮೊದಲು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದರು. ಬಳಿಕ ಮೇ 3ರ ರಾತ್ರಿ ಲೋಹದ ಪೆಟ್ಟಿಗೆಗೆ ಬೆಂಕಿ ಹಚ್ಚಿದ್ದರು. ಕಳೆದ ಸೋಮವಾರವೇ ನಾಲ್ವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಮೋಹನ್‌ಲಾಲ್‌ ಅವರ ಏಕೈಕ ಪುತ್ರ ಅಜಿತ್‌, ಗಾರ್ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ. ಆತ ಪಿಯುಸಿ ಮುಗಿಸಿದ್ದಾನೆ. ಅಜಿತ್​ ತಾಯಿ ವಿಮಲೇಶ್ ಎರಡು ದಶಕಗಳ ಹಿಂದೆಯೇ ನಿಧನರಾಗಿದ್ದಾರೆ. ಐದು ವರ್ಷಗಳ ಹಿಂದೆ ಅಜಿತ್ ಕೃಷ್ಣನೊಂದಿಗೆ ಸ್ನೇಹ ಬೆಳೆಸಿದ್ದನು. ಬಳಿಕ ಈ ಸ್ನೇಹ ಸಲಿಂಗ ಸಂಬಂಧಕ್ಕೆ ತಿರುಗಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಯಾ ಪೊಲೀಸ್​ ಠಾಣೆಯ ಎಸ್‌ಎಚ್‌ಒ ಅಶೋಕ್‌ ಕುಮಾರ್‌ ಮಾತನಾಡಿ, ತಂದೆ ಮೋಹನ್​ ಲಾಲ್​, ಸಂಗಾತಿ ಕೃಷ್ಣನ ಮೇಲೆ ಕೈ ಎತ್ತಿದ್ದನ್ನು ಸಹಿಸಲಾಗಲಿಲ್ಲ ಎಂದು ಅಜಿತ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ತಂದೆಯನ್ನು ಗುದ್ದಲಿಯಿಂದ ಕೊಂದು, ಶವವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟು ಅಗರಬತ್ತಿಯಿಂದ ವಾಸನೆ ಬರದಂತೆ ಮರೆಮಾಚಿದ್ದಾರೆ. ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಮೋಹನ್‌ ಲಾಲ್‌ ಇರುವಿಕೆಯ ಬಗ್ಗೆ ವಿಚಾರಿಸಿದಾಗ, ಅಜಿತ್‌ ತನ್ನ ತಂದೆ ಕೆಲಸದ ನಿಮಿತ್ತ ಲಖನೌಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದ ಎಂದು ಎಸ್​ಎಚ್​ಒ ತಿಳಿಸಿದರು.(ಏಜೆನ್ಸೀಸ್​)
ಹೌದು ನಾನು ಸಲಿಂಗಕಾಮಿಯೇ! ಧನುಷ್​ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ಸುಚಿ ಮಾಜಿ ಪತಿ ಕಾರ್ತಿಕ್​?

ಏಕದಿನ ವಿಶ್ವಕಪ್​ನಂತೆ ಟಿ20 ವಿಶ್ವಕಪ್​ ಸಹ ಮರೆತು ಬಿಡಿ! ಭಜ್ಜಿ ಶಾಕಿಂಗ್​ ಹೇಳಿಕೆ ಬೆನ್ನಲ್ಲೇ ಚರ್ಚೆ ಶುರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven − six =
Remember me
